»   »  ಹಾಲಿಡೇಸ್ ನಿರ್ಮಾಪಕನ ಮೇಲೆ ಹಲ್ಲೆ

ಹಾಲಿಡೇಸ್ ನಿರ್ಮಾಪಕನ ಮೇಲೆ ಹಲ್ಲೆ

Posted By:
Subscribe to Filmibeat Kannada

ಮಾದೇಶ ಚಿತ್ರ ನಿರ್ಮಾಪಕ ಗೋವರ್ದನ್ ತನ್ನ ಸಹಪಾಠಿ ವಿನೋದ್ ಕುಮಾರ್ ಮೇಲೆ ಕೆಲ ದಿನಗಳ ಹಿಂದೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದರು. ಈ ಘಟನೆ ಮಾಸುವ ಮುನ್ನವೆ ಕನ್ನಡ ಚಿತ್ರೋದ್ಯಮದಲ್ಲಿ ಮತ್ತ್ತೊಂದು ಭಯಾನಕ ಘಟನೆ ಮಂಗಳವಾರ(ಜ.6) ನಡೆದಿದೆ.

'ಹಾಲಿಡೇಸ್' ಚಿತ್ರದ ನಿರ್ಮಾಪಕ ಸಂತೋಷ್ ಕುಮಾರ್ ಮೇಲೆ ದುಷ್ಕರ್ಮಿಗಳ ತಂಡವೊಂದು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದೆ. ಬೆಂಗಳೂರಿನ ಹೆಣ್ಣೂರು ರಸ್ತೆಯಲ್ಲಿ ಕಾರಿನಲ್ಲಿ ಹೊರಡುತ್ತಿದ್ದ ಅವರ ಮೇಲೆ ಮಾರಾಣಾಂತಿಕವಾಗಿ ಹಲ್ಲೆ ಮಾಡಿದ ದುಷ್ಕರ್ಮಿಗಳ ತಂಡ ಅಲ್ಲಿಂದ ಪರಾರಿಯಾಗಿದೆ. ಸಂತೋಷ್ ಕುಮಾರ್ ಅವರನ್ನು ಚಿಕಿತ್ಸೆಗಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗಾಳಿಪಟ ಚಿತ್ರದಲ್ಲಿ ನಟಿಸಿದ್ದ ಭಾವನಾರಾವ್, ಮೊಗ್ಗಿನ ಮನಸ್ಸು ಚಿತ್ರದ ಮಾನಸಿ ಪಾತ್ರದಲ್ಲಿ ನಟಿಸಿದ್ದ ಹುಡುಗಿ ಹಾಲಿಡೇಸ್ ನಲ್ಲಿ ನಟಿಸುತ್ತಿದ್ದಾರೆ. ಗಾಳಿಪಟ ಚಿತ್ರದಲ್ಲಿ ನಟಿಸಿದ ರಾಜೇಶ್ ಕೃಷ್ಣನ್ ಹಾಲಿಡೇಸ್ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಕೇರಳದಲ್ಲಿದ್ದ ಗೋವರ್ಧನ್ ತಾನೇ ಶರಣಾದನಾ?
ಮಾದೇಸ ನಿರ್ಮಾಪಕ ಮೂರ್ತಿ ಕೇರಳದಲ್ಲಿ ಬಂಧನ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada