»   » ತುಪ್ಪ ಖ್ಯಾತಿಯ ರಾಗಿಣಿ ಮೇಲೆ ಹೆಜ್ಜೇನುಗಳ ದಾಳಿ

ತುಪ್ಪ ಖ್ಯಾತಿಯ ರಾಗಿಣಿ ಮೇಲೆ ಹೆಜ್ಜೇನುಗಳ ದಾಳಿ

Posted By:
Subscribe to Filmibeat Kannada

"ತುಪ್ಪ ಬೇಕ ತುಪ್ಪ.." ಎಂದು ಕಳ್ಳ ಮಳ್ಳ ಸುಳ್ಳ ಚಿತ್ರದಲ್ಲಿ ತಮ್ಮ ಮೈಮಾಟವನ್ನು ಪ್ರದರ್ಶಿಸಿದ್ದ ನಟಿ ರಾಗಿಣಿ ದಂತದ ಮೈಮೇಲೆ ಹೆಜ್ಜೇನುಗಳು ದಾಳಿ ನಡೆಸಿವೆ. ಆದರೆ ಅವರು ಹೆಜ್ಜೇನುಗಳ ದಾಳಿಯಿಂದ ಪಾರಾಗಿದ್ದು ಸೇಫ್ ಆಗಿ ಬೆಂಗಳೂರು ತಲುಪಿದ್ದಾರೆ. ಈ ಘಟನೆ ನಡೆದಿರುವುದು ಕೋಲಾರದಲ್ಲಿ.

ಲೂಸ್ ಮಾದ ಖ್ಯಾತಿಯ ಯೋಗೀಶ್ ಹಾಗೂ ರಾಗಿಣಿ ಮುಖ್ಯಭೂಮಿಕೆಯಲ್ಲಿರುವ ಬಂಗಾರಿ ಚಿತ್ರೀಕರಣ ನಡೆಯುತ್ತಿತ್ತು. ಆದರೆ ಹೆಜ್ಜೇನುಗಳ ದಾಳಿ ನಡೆದ ಕಾರಣ ಶೂಟಿಂಗ್ ತಾತ್ಕಾಲಿಕವಾಗಿ ಕ್ಯಾನ್ಸಲ್ ಮಾಡಿ ಚಿತ್ರತಂಡ ಬೆಂಗಳೂರಿಗೆ ಹಿಂತಿರುಗಿದೆ. ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ವಕ್ಕಲೇರಿಯ ಮಾರ್ಕಂಡೇಯ ಬೆಟ್ಟದಲ್ಲಿ ಚಿತ್ರೀಕರಣ ನಡೆಯುತ್ತಿತ್ತು.

ಇದ್ದಕ್ಕಿದ್ದಂತೆ ಹೆಜ್ಜೇನುಗಳು ದಾಳಿ ನಡೆಸಿವೆ. ಇದರಿಂದ ದಿಕ್ಕಾಪಾಲಾಗಿ ಓಡಿದ ಚಿತ್ರತಂಡ ಹೇಗೋ ಹೆಜ್ಜೇನುಗಳ ದಾಳಿಯಿಂದ ಪಾರಾಗಿದೆ. ರಾಗಿಣಿ ಮತ್ತು ಯೋಗಿ ಅವರು ಇನ್ನೋವಾ ಕಾರಿನಲ್ಲಿ ಹೋಗಿ ಕುಳಿತು ಹೆಜ್ಜೇನು ದಾಳಿಯಿಂದ ಪಾರಾಗಿದ್ದಾರೆ.

ಈ ಸಂದರ್ಭದಲ್ಲಿ ಸಣ್ಣಪುಟ್ಟ ಗಾಯಗಳಾಗಿದ್ದ ಚಿತ್ರತಂಡದ ಮೂವರನ್ನು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಲ್ಲಿ ಚಿಕಿತ್ಸೆ ನೀಡಲಾಗಿದೆ. ಭಾನುವಾರದಿಂದ (ಫೆ.5) ಚಿತ್ರೀಕರಣ ಸಾಂಗವಾಗಿ ನಡೆಯುತ್ತಿದೆ. ಚಿತ್ರದ ನಿರ್ಮಾಪಕರು ಎಲ್ಲಪ್ಪ. ನಿರಂಜನ್ ಬಾಬು ಅವರ ಛಾಯಾಗ್ರಹಣ ಹಾಗೂ ನೀಲ್ ಅವರ ಸಂಗೀತ ಚಿತ್ರಕ್ಕಿದೆ. ಆಕ್ಷನ್ ಕಟ್ ಹೇಳುತ್ತಿರುವವರು ಮಾ.ಚಂದ್ರು. (ಏಜೆನ್ಸೀಸ್)

English summary
Honey bees attacks on Yogish and Ragini Dwivedi lead film Bangari unit. The incident happened at Markandeya Swamy Hill Temple Vakkaleri Kolar Dist on Feb 3rd Saturday

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada