For Quick Alerts
  ALLOW NOTIFICATIONS  
  For Daily Alerts

  ಲೂಸ್ ಮಾದ ಯೋಗೇಶ್ ಫೆಬ್ರವರಿಯಲ್ಲಿ 'ಅಲೆಮಾರಿ

  |

  ನಿರ್ದೇಶಕ ಪ್ರೇಮ್ ಶಿಷ್ಯ 'ಸಂತು' ನಿರ್ದೇಶನದ ಅಲೆಮಾರಿ ಚಿತ್ರ ಫೆಬ್ರವರಿಯಲ್ಲಿ ತೆರೆಗೆ ಬರಲಿದೆ. ಸಂಪೂರ್ಣ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಆತ್ಮವಿಶ್ವಾಸದಿಂದ ಬೀಗುತ್ತಿದೆ. ಕಾರಣ ಅವರು ಅಂದುಕೊಂಡಂತೆ ಬಂದಿದೆ ಅಲೆಮಾರಿ ಚಿತ್ರ. ಪೋಸ್ಟರ್ ನೋಡಿರುವ ಜನ, ಸಂತು ಪಕ್ಕಾ ಪ್ರೇಮ್ ಶಿಷ್ಯನೇ ಅನ್ನುತ್ತಿದ್ದಾರೆ.

  ಇದಕ್ಕೆಲ್ಲಾ ಕಾರಣ ಪೋಸ್ಟರಿನಲ್ಲೇ ಕಂಡುಬರುತ್ತಿರುವ ಗಿಮಿಕ್. ಕೇವಲ ಪೋಸ್ಟರಿನಲ್ಲಲ್ಲ, ಚಿತ್ರದಲ್ಲೂ ಸಾಕಷ್ಟು ಗಿಮಿಕ್ ಮಾಡಿದ್ದೇವೆ ಅಂದಿದ್ದಾರೆ ಸಂತು. ಆದರೆ ಗಿಮಿಕ್ಕು ಅಂದುಕೊಳ್ಳುತ್ತೀರೋ ಅಥವಾ ರಿಯಾಲಿಟಿಯೋ ಎಂಬುದು ಚಿತ್ರ ನೋಡಿದರೆ ಗೊತ್ತಾಗುತ್ತದೆ ಅಂತ ಕೂಡ ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಮಾತನಾಡಿದ್ದಾರೆ.

  ಒಟ್ಟಿನಲ್ಲಿ ಚಿತ್ರ ಡಬ್ಬಿಂಗ್ ಹಂತದವರೆಗೂ ಯಾವ ವಿಘ್ನವಿಲ್ಲದೇ ಸಾಗಿ ಬಂದಿದೆ. ರಾಧಿಕಾ ಪಂಡಿತ್, ಯೋಗೇಶ್ ಅಭಿನಯ ಚೆನ್ನಾಗಿದೆ ಎಂಬುದು ಚಿತ್ರತಂಡದ ಅಭಿಪ್ರಾಯ. ಬಿ ಕೆ ಶ್ರೀನಿವಾಸ್ ನಿರ್ಮಾಣದ ಈ ಚಿತ್ರ, ಅಂದುಕೊಂಡಂತೆ ಎಲ್ಲವೂ ನಡೆದರೆ ಫೆಬ್ರವರಿಯಲ್ಲಿ ತೆರೆಯ ಮೇಲೆ ಅಲೆಮಾರಿ ಬರಲಿದ್ದಾನೆ. (ಒನ್ ಇಂಡಿಯಾ ಕನ್ನಡ)

  English summary
  Kannada Movie Alemari comleted the shooting and coming to screen on Feb. 2012. Santhu Directed this movie and Yogesh Radhika Pandit Pair for this.
  Friday, January 6, 2012, 12:26
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X