»   » ಗಾಂಧಿನಗರಕ್ಕೆ ಅಜಯ್, ರಾಧಿಕಾ ಬ್ರೇಕಿಂಗ್ ನ್ಯೂಸ್

ಗಾಂಧಿನಗರಕ್ಕೆ ಅಜಯ್, ರಾಧಿಕಾ ಬ್ರೇಕಿಂಗ್ ನ್ಯೂಸ್

Posted By:
Subscribe to Filmibeat Kannada

ನಾಗತಿಹಳ್ಳಿ ಸಿನಿ ಕ್ರಿಯೇಷನ್ಸ್ ನಿರ್ಮಾಣ ಹಾಗೂ ಅಜಯ್ ರಾವ್, ರಾಧಿಕಾ ಪಂಡಿತ್ ಜೋಡಿ ನಟನೆಯ ಚಿತ್ರ 'ಬ್ರೇಕಿಂಗ್ ನ್ಯೂಸ್' ಇದೇ ತಿಂಗಳು 18 (ಮೇ 18, 2012) ರಂದು ತೆರೆಗೆ ಬರಲಿದೆ. 'ಓಂ ನ್ಯೂಸಾಯ ನಮಃ' ಎಂಬ ಬ್ರೇಕಿಂಗ್ ನ್ಯೂಸ್ ಶೀರ್ಷಿಕೆಯ ಮೇಲ್ಬರಹ ಹಾಗೂ 'ಕುಂತ್ರು ನಿಂತ್ರು ಬ್ರೇಕಿಂಗ್ ನ್ಯೂಸು!' ಎಂಬ ಶೀರ್ಷಿಕೆಯ ಅಡಿಬರಹ ಎಲ್ಲರ ಗಮನಸೆಳೆಯುತ್ತಿದೆ.

ನಾಗತಿಹಳ್ಳಿ ನಿರ್ದೇಶದ ಬ್ರೇಕಿಂಗ್ ನ್ಯೂಸ್ ಚಿತ್ರದಲ್ಲಿ 'ಕೃಷ್ಣನ್ ಲವ್ ಸ್ಟೋರಿ' ಯಶಸ್ವೀ ಜೋಡಿ ಅಜಯ್ ರಾವ್ ಹಾಗೂ ರಾಧಿಕಾ ಪಂಡಿತ್ ಮತ್ತೊಮ್ಮೆ ಜೊತೆಯಾಗಿ ನಟಿಸಿದ್ದಾರೆ. ಈ ಮೊದಲು ಬಂದಿದ್ದ ನಾಗತಿಹಳ್ಳಿ ನಿರ್ದೇಶನದ ಚಿತ್ರ 'ನೂರು ಜನ್ಮಕೂ...' ಬಾಕ್ಸ್ ಆಫೀಸ್ ನಲ್ಲಿ ಸೋತು ಸುಣ್ಣವಾಗಿದ್ದರಿಂದ ಸಹಜವಾಗಿಯೇ ಬರಲಿರುವ ಚಿತ್ರ ಬ್ರೇಕಿಂಗ್ ನ್ಯೂಸ್ ಬಗ್ಗೆ ಎಲ್ಲರಲ್ಲಿ ತೀವ್ರ ಕುತೂಹಲವಿದೆ.

ಒಟ್ಟಿನಲ್ಲಿ ಸ್ಯಾಂಡಲ್ ವುಡ್ ಗೆ ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿರುವ, ಮೇಸ್ಟ್ರು ಖ್ಯಾತಿಯ ನಾಗತಿಹಳ್ಳಿಯವರ ಚಿತ್ರವೊಂದು ಸದ್ಯದಲ್ಲೇ ತೆರೆಗೆ ಅಪ್ಪಳಿಸಲಿದೆ. ಹೀಗಾಗಿ ಅಭಿನವ ಕೃಷ್ಣ ಖ್ಯಾತಿಯ ಅಜಯ್ ರಾವ್ ಹಾಗೂ ಹ್ಯಾಟ್ರಿಕ್ ಪಂಡಿತೆ ರಾಧಿಕಾ ಅಭಿಮಾನಿಗಳಿಗೆ ಶೀಘ್ರದಲ್ಲೇ ಸಂತೋಷದೂಟ ಕಾದಿದೆ ಎನ್ನಲಡ್ಡಿಯಿಲ್ಲ. ಇದು ಇವತ್ತಿನ ಬ್ರೇಕಿಂಗ್ ನ್ಯೂಸ್... (ಒನ್ ಇಂಡಿಯಾ ಕನ್ನಡ)

English summary
Nagathihalli Chandrashekar directed movie Breaking News releases on 18th May 2012. Abhinava Krishna Ajay Rao and Hattrick heroine Radhika Pandit are in the lead role. 
 
Please Wait while comments are loading...