Don't Miss!
- Sports
ಫೆ.1ರಂದು ಸಚಿನ್, ಬಿಸಿಸಿಐನಿಂದ ಟಿ20 ವಿಶ್ವಕಪ್ ವಿಜೇತ ಭಾರತ ಮಹಿಳಾ ತಂಡಕ್ಕೆ ಸನ್ಮಾನ
- Lifestyle
ಜನವರಿ 30ಕ್ಕೆ ಶನಿ ಅಸ್ತ: 35 ದಿನದವರೆಗೆ ಈ 6 ರಾಶಿಯವರು ಹೆಚ್ಚು ಜಾಗ್ರತೆವಹಿಸಬೇಕು
- News
ಚಿಕ್ಕಬಳ್ಳಾಪುರದಲ್ಲಿ ಕುಷ್ಠರೋಗ ನಿಯಂತ್ರಣ ಜಾಗೃತಿ ಅಭಿಯಾನ ರಥಕ್ಕೆ ಚಾಲನೆ
- Finance
ಫೆಬ್ರವರಿ 1ರಿಂದ ಯಾವೆಲ್ಲ ಹಣಕಾಸು ನಿಯಮ ಬದಲಾವಣೆಯಾಗಲಿದೆ?
- Technology
ವಿದ್ಯಾರ್ಥಿಗಳೇ ಇಲ್ಲಿ ಗಮನಿಸಿ, ನೀವು Rank ಪಡೆಯಲು ಈ ಆಪ್ಗಳನ್ನು ಬಳಕೆ ಮಾಡಿ!
- Automobiles
ಭಾರತದಲ್ಲಿ ಅಬ್ಬರಿಸಲು ಬಿಡುಗಡೆಯಾಯ್ತು ಹೀರೋ Xoom 110 ಸ್ಕೂಟರ್: ಬೆಲೆ ರೂ.68,599...!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಪೂಜಾ ಗಾಂಧಿಯ ದಂಡುಪಾಳ್ಯ ತೆರೆಗೆ ಬರಲು ರೆಡಿ
ದಂಡುಪಾಳ್ಯ ಚಿತ್ರದ ಚಿತ್ರೀಕರಣ ಮುಗಿದಿದೆ. ಆರಂಭದಲ್ಲಿ ಸ್ವಲ್ಪವೇ ಸದ್ದು ಮಾಡಿದ್ದ ದಂಡುಪಾಳ್ಯ' ಪೂಜಾ ಗಾಂಧಿ'ಯ ಬೆತ್ತಲೆ ಪ್ರದರ್ಶನದಿಂದ ಬಹಳಷ್ಟು ಸುದ್ದಿಯಾಯ್ತು. ಘಟನೆ ನಡೆದಾಗ ಬೆಂಗಳೂರನ್ನೇ ಬೆಚ್ಚಿ ಬೀಳಿಸಿದ್ದ ಕುಖ್ಯಾತ ದರೋಡಕೋರರ ಒಂದು ಕೃತ್ಯ ಸಿನಿಮಾ ಆಗಿದೆ. ಸಹಜವಾಗಿಯೇ ಚಿತ್ರ ಭೀಕರ ದೃಶ್ಯ ಒಳಗೊಂಡಿದೆ.
1993 ರಿಂದ 2001 ರವೆರಗೂ ದಂಡುಪಾಳ್ಯದ ಹೆಸರೆತ್ತಿದರೇ ಇಡೀ ಬೆಂಗಳೂರು ಬೆಚ್ಚಿಬೀಳುತ್ತಿತ್ತು. ಕಾರಣ ಆ ಗ್ಯಾಂಗು ಮಾಡಿದ 75 ಕೊಲೆ, ಲೆಕ್ಕವಿಲ್ಲದಷ್ಟು ಅತ್ಯಾಚಾರ, ದರೋಡೆಗಳು. ನಂತರ ದಂಡುಪಾಳ್ಯದ ಸದ್ದು ಅಡಗಿದ್ದರೂ ಎಂದಿಗೂ ಜನರು ಅವರ ಕೃತ್ಯಗಳನ್ನು ಮರೆಯಲು ಸಾಧ್ಯವೇ ಇಲ್ಲ.
ಈ ನೈಜ ಘಟನೆಯನ್ನು ಆಧರಿಸಿ ಶ್ರೀನಿವಾಸರಾಜು ಸಿನಿಮಾ ತಯಾರಿಸಿದ್ದಾರೆ. ಶೇ. 90ರಷ್ಟು ನೈಜ ಘಟನೆ ಹಾಗೂ ಶೇ. 10ರಷ್ಟು ಸಿನಿಮಾಗೆ ಬೇಕಾದ ಮಸಾಲೆ ಸೇರಿಸಿದ್ದಾಗಿ ನಿರ್ದೆಶಕರು ಹೇಳಿದ್ದಾರೆ. ಕಥೆ-ಚಿತ್ರಕಥೆ ಬರೆದಿರುವ ಶ್ರೀನಿವಾಸರಾಜು ಹಾಗೂ ಸಂಭಾಷಣೆ ಬರೆದಿರುವ ಆನಂದಪ್ರಿಯ, ಈ ಗ್ಯಾಂಗ್ ಕೃತ್ಯಗಳ ಬಗ್ಗೆ ಸಾಕಷ್ಟು ಅಧ್ಯಯನವನ್ನೂ ಮಾಡಿದ್ದಾರಂತೆ. ಈ ಎಲ್ಲಾ ಕಾರಣಗಳಿಂದ ಚಿತ್ರ ಚೆನ್ನಾಗಿ ಬಂದಿದೆ ಎಂಬುದು ಚಿತ್ರತಂಡದ ಅಭಿಪ್ರಾಯ. ಮುಂದಿನ ಪುಟ ನೋಡಿ...