»   »  ಕೋಮಲ್ ಗೆ ನಾಯಕ ಪಟ್ಟ ಒಗ್ಗಲ್ಲ: ಸಾಧು

ಕೋಮಲ್ ಗೆ ನಾಯಕ ಪಟ್ಟ ಒಗ್ಗಲ್ಲ: ಸಾಧು

Subscribe to Filmibeat Kannada
Komal is not fit for hero: Sadhu Kokila
ಹಾಸ್ಯ ನಟ ಕೋಮಲ್ ಕುಮಾರ್ ನಾಯಕ ನಟನಾಗಲು ಹೊರಟಿರುವುದಕ್ಕೆ ಇನ್ನೊಬ್ಬ ಹಾಸ್ಯ ಕಲಾವಿದ, ನಿರ್ದೇಶಕ ಸಾಧು ಕೋಕಿಲತನ್ನ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಕೋಮಲ್ ಅದ್ಭುತ ಟೈಮಿಂಗ್ಸ್ ಹೊಂದಿರುವ ನಟ. ಸದ್ಯಕ್ಕೆ ಕನ್ನಡದ ನಂಬರ್ 1 ಹಾಸ್ಯನಟ ಅಂದರೆ ತಪ್ಪಾಗಲಾರದು. ಹಾಗಂತ ಕೋಮಲ್ ನಾಯಕ ನಟನಾಗಲು ಹೊರಟರೆ ತಪ್ಪಾಗುತ್ತದೆ. ನಾಯಕನಟನಾಗಲು ಕೆಲವೊಂದು ಅರ್ಹತೆ ಇರಬೇಕು.

ನಾಯಕನಾಗಿ ಕೋಮಲ್ ಡ್ಯಾನ್ಸ್ ಮಾಡುವುದನ್ನು, ಫೈಟ್ ಮಾಡುವುದನ್ನು ಅಥವಾ ರೊಮ್ಯಾಂಟಿಕ್ ಸನ್ನಿವೇಶಗಳನ್ನು ಕಲ್ಪಿಸಿಕೊಳ್ಳುವುದು ಕಷ್ಟ. ಒಬ್ಬ ಒಳ್ಳೆ ಹಾಸ್ಯನಟನಾಗಿ ಹೆಸರು ಸಂಪಾದಿಸಿದ್ದಾರೆ. ಇತ್ತೀಚಿಗೆ ಬರುತ್ತಿರುವ ಆಫರ್ ಗಳನ್ನು ನಿರಾಕರಿಸುತ್ತಿದ್ದಾರೆ ಎಂದು ತಿಳಿದು ಬಹಳ ನೋವಾಗಿದೆ. ಕೋಮಲ್ ಅವರ ಅಣ್ಣ ಜಗ್ಗೇಶ್ ಒಂಚೂರು ಬುದ್ಧಿ ಹೇಳಬೇಕಾಗಿತ್ತು.

ನಮ್ಮ ಉದ್ಯಮದವರು ಕುರಿ ಹಳ್ಳಕ್ಕೆ ಬೀಳುವುದನ್ನೇ ಕಾಯುತ್ತಿರುತ್ತಾರೆ. ಒಬ್ಬ ಒಳ್ಳೆ ಹಾಸ್ಯ ನಟ ಹಳ್ಳಕ್ಕೆ ಬೀಳುವುದು ನನಗೆ ಇಷ್ಟವಿಲ್ಲ. ಇನ್ನೂ ಅವರವರ ಹಣೆಬರಹ ಎಂದು ಸಾಧು ವಿಷಾದ ವ್ಯಕ್ತಪಡಿಸಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಕೋಮಲ್ ಜೊತೆಗಿನ ಸಿನಿಮಾಕ್ಕೆ ರಮ್ಯಾ ನಕಾರ?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada