For Quick Alerts
  ALLOW NOTIFICATIONS  
  For Daily Alerts

  ಅಡ್ಡ ಚಿತ್ರಕ್ಕೆ ಮತ್ತೆ ವಿಘ್ನ: ಶ್ರೀನಿವಾಸ್ ಕೆಂಡಾಮಂಡಲ

  |

  ಅಡ್ಡ ಶೀರ್ಷಿಕೆಗೂ ವಿವಾದಕ್ಕೂ ಅದೇನು ನಂಟೋ. ಅಡ್ಡ ಶೀರ್ಷಕೆಯ ಬಗ್ಗೆ ಆದ ವಾದ-ವಿವಾದಗಳು ಎಲ್ಲರಿಗೂ ಗೊತ್ತೇ ಇದೆ. ಈಗ ವಾದ-ವಿವಾದಗಳ ಹಂತ ಮುಗಿದು ವಿಘ್ನ ಪ್ರಾರಂಭವಾಗಿದೆ. ನಿರ್ಮಾಪಕ ಬಿ ಕೆ ಶ್ರೀನಿವಾಸ ಸಿನಿಮಾ ಪ್ರಾರಂಭ ಘೋಷಿಸಿ ಕಲಾವಿದರಿಗೆ ಅಡ್ವಾನ್ಸ್ ನೀಡಿದ್ದೂ ಆಗಿದೆ.

  ಆದರೆ ಇದೀಗ ಕಲಾವಿದರು ಕಳವಳಕ್ಕೊಳಗಾಗಿದ್ದಾರೆ. ಕಾರಣ ಶ್ರೀನಿವಾಸ ಅವರ ಅಡ್ಡಕ್ಕೆ ವಿರುದ್ಧವಾಗಿ ನಿರ್ದೇಶಕ ಪ್ರೇಮ್ 'ಪ್ರೇಮ್ ಅಡ್ಡ' ಹೆಸರಿನ ಇನ್ನೊಂದು ಚಿತ್ರ ಮಾಡಲಿದ್ದಾರೆ. ಹೀಗೆ ಒಂದೇ ರೀತಿಯ ಎರಡು ಚಿತ್ರಗಳು ಬಂದರೆ ಪ್ರೇಕ್ಷಕರು ಗೊಂದಲದಲ್ಲಿ ಬೀಳುತ್ತಾರೆ. ಈ ಹೇಳಿಕೆ ನೀಡಿ ಕಲಾವಿದರು ನಟಿಸಲು ಹಿಂದೇಟು ಹಾಕಿದ್ದಾರೆ.

  ಹಾಗಾಗಿ ನಿರ್ಮಾಪಕ ಬಿ ಕೆ ಶ್ರೀನಿವಾಸ್ ತೊಂದರೆಗೆ ಒಳಗಾಗಿದ್ದಾರೆ. "ಇಷ್ಟೆಲ್ಲಾ ಅವಾಂತರಕ್ಕೆ ಕಾರಣ ಚಲನಚಿತ್ರ ವಾಣಿಜ್ಯ ಮಂಡಳಿ. 'ಪ್ರೇಮ್ ಅಡ್ಡ' ಎಂಬ ಇನ್ನೊಂದು ಶೀರ್ಷಿಕೆ ನೀಡಿ ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣ. ನಾನಂತೂ ಎಷ್ಟೇ ವಿಘ್ನಗಳು ಬಂದರೂ ಅಡ್ಡ ಚಿತ್ರ ಮಾಡುತ್ತೇನೆ, ಬಿಡುವುದಲ್ಲ" ಎಂದು ಚಾಲೆಂಜ್ ಮಾಡಿದ್ದಾರೆ. ಆದರೆ ಕಲಾವಿದರು ಬರಬೇಕಲ್ಲಾ! (ಒನ್ ಇಂಡಿಯಾ ಕನ್ನಡ)

  English summary
  Producer B K Srinivas started his movie Adda. But artists not co-operating for him.
  Friday, January 6, 2012, 12:09
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X