»   »  ರಾಣಿ ಮಹಾರಾಣಿಯಾಗಿ ಪೂಜಾಗಾಂಧಿ

ರಾಣಿ ಮಹಾರಾಣಿಯಾಗಿ ಪೂಜಾಗಾಂಧಿ

Posted By:
Subscribe to Filmibeat Kannada
Pooja Gandhi as Rani Maharani
ಪೂಜಾ ಗಾಂಧಿ ದ್ವಿಪಾತ್ರದಲ್ಲಿ ನಟಿಸುತ್ತಿರುವ ಚಿತ್ರವೊಂದು ಸೆಟ್ಟೇರಿದೆ. ಚಿತ್ರದ ಹೆಸರು 'ರಾಣಿ ಮಹಾರಾಣಿ'. ಹೆಸರು ಕೇಳಿದ ತಕ್ಷಣ ಸುಮಾರು 15 ವರ್ಷಗಳ ಹಿಂದೆಯೇ ಮಾಲಾಶ್ರೀ ಅಭಿನಯದ ಚಿತ್ರವನ್ನು ಪುನಃ ರಿಮೇಕ್ ಆಗುತ್ತಿದೆಯಾ ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. ಆದರೆ ಮಾಲಾಶ್ರೀ ಅಭಿನಯದ ರಾಣಿ ಮಾಹಾರಾಣಿ ಚಿತ್ರಕ್ಕೂ ಪೂಜಾಗಾಂಧಿ ನಟಿಸುತ್ತಿರುವ ಚಿತ್ರಕ್ಕೂ ಸಂಬಂಧವಿಲ್ಲ. ಬರಿ ಹೆಸರಲ್ಲಷ್ಟೇ ಸಾಮ್ಯತೆ ಇದೆ.

ಒಂದು ವಿಶೇಷವೆನೆಂದರೆ ಅಂದು ಮಾಲಾಶ್ರೀ ಅಭಿನಯದ ರಾಣಿ ಮಹಾರಾಣಿ ಚಿತ್ರವನ್ನು ನಿರ್ಮಿಸಿದ ನಿರ್ಮಾಪಕ ಜೈಜಗದೀಶ್ ಇಂದು ಪೂಜಾ ಗಾಂಧಿ ಅಭಿನಯದ ನೂತನ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ರಾಣಿ ಮಹಾರಾಣಿ ನಿರ್ದೇಶಿಸಿದ್ದ ಬಿ ರಾಮಮೂರ್ತಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಕೂಡಾ ಪೂಜಾ ಗಾಂಧಿ ರಾಣಿ ಮಹಾರಾಣಿಯ ನೇತೃತ್ವದ ವಹಿಸಿರುವುದು ತೀವ್ರ ಕುತೂಹಲಕ್ಕೆ ಎಡೆಮಾಡಿದೆ. ಇತ್ತೀಚೆಗೆ ಸಣ್ಣ ಪುಟ್ಟ ಚಿತ್ರಗಳನ್ನು ನಿರ್ದೇಶಿಸುತ್ತಿದ್ದ ರಾಮಮೂರ್ತಿ ಬಹುದಿನಗಳ ನಂತರ ದೊಡ್ಡ ಪ್ರಾಜೆಕ್ಟ್ ವೊಂದನ್ನು ಕೈಗೆತ್ತಿಕೊಂಡಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಬಿ ರಾಮಮೂರ್ತಿ, ನೂತನ ರಾಣಿ ಮಹಾರಾಣಿ ಚಿತ್ರದ ಕತೆಯ ಬಗ್ಗೆ ಹೆಚ್ಚಾಗಿ ಮಾತನಾಡಲಿಲ್ಲ. ಆದರೆ, ಒಂದಂತೂ ಅವರು ಸ್ಪಷ್ಟಪಡಿಸಿದರು. ಇದು ಮಾಲಾಶ್ರೀ ಅಭಿನಯದ ರಾಣಿ ಮಹಾರಾಣಿ ಚಿತ್ರಕ್ಕಿಂಗ ವಿಭಿನ್ನವಾಗಿರುತ್ತದೆ ಎಂದು ಹೇಳಿದರು.

(ದಟ್ಸ್ ಕನ್ನಡ ಚಿತ್ರ ವಾರ್ತೆ)

ಅಂತರ್ಜಾಲಕ್ಕೆ ನಟಿ ಪೂಜಾಗಾಂಧಿ ಲಗ್ಗೆ!
ಕಾಳಿದಾಸ ಲವ್ವಲ್ ಬಿದ್ದ ಚಿತ್ರದಲ್ಲಿ ಪೂಜಾಗಾಂಧಿ
ಪೂಜಾಗಾಂಧಿ ನಟನೆಯ ಅನು ಟ್ರೈಲರ್
ಕಡೆಗೂ ಕನ್ನಡದಲ್ಲಿ ಪಾಸಾದರು ಪೂಜಾಗಾಂಧಿ!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada