»   » ಆಗಸ್ಟ್ 24ರಂದು ನೂತನ ದಾಂಪತ್ಯಕ್ಕೆ ಪ್ರಕಾಶ್ ರೈ

ಆಗಸ್ಟ್ 24ರಂದು ನೂತನ ದಾಂಪತ್ಯಕ್ಕೆ ಪ್ರಕಾಶ್ ರೈ

Posted By:
Subscribe to Filmibeat Kannada

ಲಲಿತಾ ಕುಮಾರಿ ಅವರಿಂದ ವಿವಾಹ ವಿಚ್ಛೇದನ ಪಡೆದ ಬಳಿಕ ಪ್ರಕಾಶ್ ರೈ ಮರು ಮದುವೆಯಾಗುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಬಾಲಿವುಡ್ ನ ಖ್ಯಾತ ನೃತ್ಯ ನಿರ್ದೇಶಕಿ ಪೋನಿ ವರ್ಮಾ ಅವರ ಕೈಹಿಡಿಯಲಿದ್ದಾರೆ ಪ್ರಕಾಶ್ ರೈ. ಇವರಿಬ್ಬರ ವಿವಾಹ ಮಹೋತ್ಸವ ಆಗಸ್ಟ್ 24, 2010ರಂದು ನೆರವೇರಲಿದೆ.

ಕಳೆದ ಎರಡು ವರ್ಷಗಳಿಂದ ಪೋನಿ ಮತ್ತು ರೈ ಒಬ್ಬೊರಿಗೊಬ್ಬರು ಹತ್ತಿರವಾಗಿದ್ದಾರೆ. ಆದರೆ ಈ ಸಂಬಂಧವನ್ನು ಗುಟ್ಟಾಗಿ ಕಾಪಾಡಿಕೊಂಡು ಬಂದಿದ್ದರು ಎನ್ನುತ್ತವೆ ಮೂಲಗಳು. 2009ರಲ್ಲಿ ಕೌಟುಂಬಿಕ ನ್ಯಾಯಾಲಯ ರೈ, ಲಲಿತಾ ಅವರ ವಿವಾಹ ವಿಚ್ಛೇದನಕ್ಕೆ ಸಮ್ಮತಿಸಿತ್ತು. ಆ ಬಳಿಕ ಪೋನಿ ಅವರೊಂದಿಗಿನ ಸಂಬಂಧ ಅಧಿಕೃತವಾಗುತ್ತಿದೆ ಎನ್ನಲಾಗಿದೆ.

ನಮಸ್ತೆ ಲಂಡನ್, ಚುಪ್ ಚುಪ್ ಕೆ, ಭೂಲ್ ಭೂಲಯ್ಯ, ಆಲೂ ಚಾಟ್ ಸೇರಿದಂತೆ ಹಲವಾರು ಬಾಲಿವುಡ್ ಚಿತ್ರಗಳಿಗೆ ಪೋನಿ ನೃತ್ಯ ನಿರ್ದೇಶನ ಮಾಡಿದ್ದಾರೆ. ಸದ್ಯಕ್ಕೆ ಸಂಜಯ್ ಲೀಲಾ ಭನ್ಸಾಲಿ ಅವರ 'ಗುಜಾರಿಸ್' ಚಿತ್ರದಲ್ಲಿ ಪೋನಿ ಬ್ಯುಸಿಯಾಗಿದ್ದಾರೆ. ಕಲರ್ಸ್ ವಾಹಿನಿಯ ರಿಯಾಲಿಟಿ ಕಾರ್ಯಕ್ರಮ 'ಚಕ್ ದೇ ಬಚ್ಚೆ' ತೀರ್ಪುಗಾರ್ತಿಯಾಗಿ ಪೋನಿ ಕಾರ್ಯನಿರ್ವಹಿಸುತ್ತಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada