For Quick Alerts
  ALLOW NOTIFICATIONS  
  For Daily Alerts

  ಬಿಡುಗಡೆ ಮುಂದಕ್ಕೆ; ಅಣ್ಣಾವ್ರ ಹಬ್ಬಕ್ಕಿಲ್ಲ ಅಣ್ಣಾ ಬಾಂಡ್

  |

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿಗಳಿಗೊಂದು ಬದಲಾದ ಸುದ್ದಿ. ಪುನೀತ್ ಅಭಿನಯದ ಅಣ್ಣಾ ಬಾಂಡ್ ಚಿತ್ರ ಈ ಮೊದಲು ಘೋಷಿಸಿದಂತೆ ಡಾ ರಾಜ್ ಕುಮಾರ್ ಹುಟ್ಟುಹಬ್ಬದ ದಿನ, ಏಪ್ರಿಲ್ 24 ರಂದು ಬಿಡುಗಡೆ ಆಗುತ್ತಿಲ್ಲ, ಬದಲಿಗೆ ಎರಡು ದಿನಗಳ ನಂತರ ಅಂದರೆ ಏಪ್ರಿಲ್ 26 ರಂದು ಬಿಡುಗಡೆ ಆಗುತ್ತಿದೆ. ಹಾಗಾಗಿ ಪ್ರೇಕ್ಷಕರೀಗ ಅಣ್ಣಾವ್ರ ಹುಟ್ಟುಹಬ್ಬದ ನಂತರ ಅಣ್ಣಾ ಬಾಂಡ್ ಬಿಡುಗಡೆ ಹಬ್ಬ ಆಚರಿಸಲು ಸಿದ್ಧರಾಗಬೇಕಾಗಿದೆ.

  ಅಣ್ಣಾವ್ರು ಡಾ ರಾಜ್ ಹುಟ್ಟುಹಬ್ಬದ ದಿನ, ಮಂಗಳವಾರ ಏಪ್ರಿಲ್ 24ರಂದು ಅಣ್ಣಾ ಬಾಂಡ್ ಬಿಡುಗಡೆ ಮಾಡಲು ಸಾಕಷ್ಟು ಪೂರ್ವ ತಯಾರಿ ಮಾಡಿಕೊಂಡೇ ನಿರ್ಧರಿಸಲಾಗಿತ್ತು. ಆದರೆ ಅನಿವಾರ್ಯವಾಗಿ ಮಂಗಳವಾರ, 24ರ ಬದಲು ಗುರುವಾರ, 26ರಂದು ಬಿಡುಗಡೆ ಮಾಡಲು ತೀರ್ಮಾನಿಸಿರುವುದಾಗಿ ಸ್ವತಃ ರಾಘವೇಂದ್ರ ರಾಜ್ ಕುಮಾರ್ ತಿಳಿಸಿದ್ದಾರೆ. ಈ ಮೂಲಕ ಪರಮಾತ್ಮ ನಂತರ ಮತ್ತೊಂದು ದೊಡ್ಡ ಬಜೆಟ್ ಚಿತ್ರ ಗುರುವಾರದಂದೇ ತೆರೆಗೆ ಬರುತ್ತಿದೆ.

  ಸದ್ಯದ ಬಹುನಿರೀಕ್ಷಿತ ಚಿತ್ರ ಅಣ್ಣಾ ಬಾಂಡ್ ನೋಡಲು ಕನ್ನಡದ ಪ್ರೇಕ್ಷಕರೆಲ್ಲರೂ ತುದಿಗಾಲಲ್ಲಿ ನಿಂತಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಟ್ರೈಲರ್ ನೋಡಿ ಸಖತ್ ಥ್ರಿಲ್ ಆಗಿರುವ ಅಭಿಮಾನಿಗಳು, ಚಿತ್ರ ನೋಡಲು ಮುಗಿಬೀಳುವುದು ಗ್ಯಾರಂಟಿ ಎನ್ನಲಾಗಿದೆ. ಪವರ್ ಸ್ಟಾರ್ ಪುನೀತ್ ಜೋಡಿಯಾಗಿ ಪ್ರಿಯಾಮಣಿ ಹಾಗೂ ನಿಧಿ ಸುಬ್ಬಯ್ಯ ನಟಿಸಿದ್ದಾರೆ. ಬಾಲಿವುಡ್ ನ ಜಾಕಿ ಶ್ರಾಫ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. (ಒನ್ ಇಂಡಿಯಾ ಕನ್ನಡ)

  English summary
  Puneeth Rajkumar Movie Anna Bond Release date postponed to 2 days later, on April 26th 2012, instead of 24th April 2012. Duniya Suri Directed this movie Anna Bond. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X