Just In
Don't Miss!
- News
ಹಲ್ವಾ ಸಮಾರಂಭದೊಂದಿಗೆ ಅಂತಿಮ ಹಂತದಲ್ಲಿ ಬಜೆಟ್ 2021
- Finance
ಬಜೆಟ್ 2021: ಐ.ಟಿ. ಫೈಲಿಂಗ್ ನಲ್ಲಿ PAN ಕಾರ್ಡ್ ಗೆ ಏಕಿಷ್ಟು ಮಹತ್ವ, ಏನಿದರ ವಿಶೇಷ?
- Sports
ಐಪಿಎಲ್ 2021: ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಸಂಗಕ್ಕರ ಬಲ
- Automobiles
ಕರೋಕ್ ಎಸ್ಯುವಿಯನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಿದೆ ಸ್ಕೋಡಾ
- Lifestyle
ವಾರ ಭವಿಷ್ಯ: 12 ರಾಶಿಗಳ ರಾಶಿ ಫಲ ಹೇಗಿದೆ ನೋಡಿ
- Education
NIT Recruitment 2021: ರಿಸರ್ಚ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕುಡಿತ ಬಿಟ್ಟಿದ್ದೇ ರಜನಿ ಆರೋಗ್ಯ ಹದಗೆಡಲು ಕಾರಣ
ಇಷ್ಟು ದಿನ ಗೆಲುವಾಗಿಯೇ ಓಡಾಡಿಕೊಂಡಿದ್ದ ಸೂಪರ್ ಸ್ಟಾರ್ ರಜನಿಕಾಂತ್ ಆರೋಗ್ಯ ಇದ್ದಕ್ಕಿದ್ದಂತೆ ಕೈಕೊಟ್ಟಿದ್ಯಾಕೆ? ಎಂಬ ಪ್ರಶ್ನೆ ಅವರ ಅಭಿಮಾನಿಗಳನ್ನು ಕಾಡುತ್ತಿದೆ. ಅದು ವಯೋಸಹಜ ಸಮಸ್ಯೆಯಿಂದ ಹೀಗಾಗಿರಬಹುದು ಎಂದು ಕೆಲವರು ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ ಅವರ ಆರೋಗ್ಯ ದಿಢೀರ್ ಎಂದು ಕೆಡಲು ಕಾರಣವೇ ಬೇರೆ ಇದೆ ಎನ್ನುತ್ತಿವೆ ಮೂಲಗಳು.
ರಜನಿಕಾಂತ್ ಸಿಕ್ಕಾಪಟ್ಟೆ ಗುಂಡು ಹಾಕುತ್ತಿದ್ದರಂತೆ. ತಪ್ಪ್ಪದೆ ಪ್ರತಿದಿನ ಕೆಲವು ಪೆಗ್ ಹಾಕುತ್ತಿದ್ದಂರಂತೆ. ಇನ್ನು ಸಭೆ ಸಮಾರಂಭಗಳಂತ ವಿಶೇಷ ಸಂದರ್ಭಗಳಂತೂಎಂಟರಿಂದ ಒಂಭತ್ತು ಪೆಗ್ ಏರಿಸುತ್ತಿದ್ದರಂತೆ. ಆದರೆ ಕೆಲವು ದಿನಗಳಿಂದ ಅವರು ಕುಡಿತ ಬಿಟ್ಟುಬಿಟ್ಟಿದ್ದರಂತೆ. ಆಲ್ಕೋಹಾಲ್ ವ್ಯಸನವನ್ನು ದಿಢೀರ್ ಬಿಟ್ಟಿದ್ದೇ ಅವರ ಆರೋಗ್ಯ ಕೆಡಲು ಕಾರಣ ಎನ್ನುತ್ತಿವೆ ಮೂಲಗಳು.
ಸೂಪರ್ ಸ್ಟಾರ್ ಅವರ ಆಧ್ಯಾತ್ಮಿಕ ಗುರು ಹಾಗೂ ಅವರ ಕುಟುಂಬ ಸದಸ್ಯರು ಕುಡಿತ ಬಿಡಲು ಹೇಳಿದ್ದರಂತೆ. ಅರುವತ್ತು ವರ್ಷದ ರಜನಿಕಾಂತ್ ಹಿತೈಷಿಗಳ ಮಾತಿಗೆ ಬೆಲೆ ಕೊಟ್ಟು ಗುಂಡಿನ ಗಮ್ಮತ್ತಿಗೆ ಗುಡ್ ಬೈ ಹೇಳಿದ್ದರಂತೆ. ರಜನಿ ಹುಟ್ಟುಹಬ್ಬದ ಸಂದರ್ಭದಲ್ಲಿ (ಡಿಸೆಂಬರ್ 12, 2010) ವೈದ್ಯರು ಇನ್ನು ಮುಂದೆ ಕುಡಿಯುವಂತಿಲ್ಲ ಎಂದು ತಾಕೀತು ಮಾಡಿದ್ದರಂತೆ.
ಕೆಲ ತಿಂಗಳಿಂದ ಕುಡಿತ ಬಿಟ್ಟಿದ್ದ ರಜನಿಕಾಂತ್ ಅವರು ಎರಡು ತಿಂಗಳಿಂದ ಸರಿಯಾಗಿ ನಿದ್ದೆ ಬಾರದೆ ಹಾಸಿಗೆಯಲ್ಲಿ ಹಾಗೆ ಸುಮ್ಮನೆ ಹೊರಳಾಡಿದ್ದು ಇದೆಯಂತೆ. ಇದೆಲ್ಲದರ ಪರಿಣಾಮ ಅವರ ಆರೋಗ್ಯ ಕೈಕೊಟ್ಟಿದೆ. ಸದ್ಯಕ್ಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಜನಿಕಾಂತ್ ಆದಷ್ಟು ಗುಣಮುಖರಾಗಲಿ ಎಂಬುದು ಅವರ ಅಭಿಮಾನಿ ದೇವರುಗಳ ಬಯಕೆ.