»   »  ಸಾಂಗತ್ಯ ಚಿತ್ರೋತ್ಸವಕ್ಕೆ ಸಾದರದಆಹ್ವಾನ

ಸಾಂಗತ್ಯ ಚಿತ್ರೋತ್ಸವಕ್ಕೆ ಸಾದರದಆಹ್ವಾನ

Subscribe to Filmibeat Kannada

ಸಾಂಗತ್ಯದ ಚಿತ್ರೋತ್ಸವ ಆ.8 ಮತ್ತು 9 ರಂದು ಎಂದಿನ ಲೆಕ್ಕಾಚಾರದಂತೆ ಕುಪ್ಪಳ್ಳಿಯಲ್ಲಿ ನಡೆಯಲಿದೆ. ಅತಿಥಿಗಳಾಗಿ ಸಿನಿತಜ್ಞ ಪರಮೇಶ್ ಗುರುಸ್ವಾಮಿ, ನಿರ್ದೇಶಕರಾದ ಗುರುಪ್ರಸಾದ್ ಜೊತೆಗೆ ತಬಲಾ ನಾಣಿ ಭಾಗವಹಿಸುವರು.

ಈ ಸಲದ ಚಿತ್ರೋತ್ಸವದಲ್ಲಿ ಸುಮಾರು 7 ರಿಂದ 8 ಚಲನಚಿತ್ರಗಳ ಪೈಕಿ ಕನ್ನಡವೂ ಸೇರಿದಂತೆ ವಿವಿಧ ಭಾಷೆಗಳ ಚಲನಚಿತ್ರಗಳಿವೆ. ನಮ್ಮ ಮನಸ್ಸನ್ನು ಸದಾ ಕಾಡುವ, ಚಿಂತನೆಗೆ ಹಚ್ಚುವ, ಚಲನಚಿತ್ರ ತಾಂತ್ರಿಕ ಅಂಶಗಳಿಂದಲೂ ಉತ್ತಮವಾದ ಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದೆ.

ಈ ಬಾರಿ 'ಅಮೆಚೂರ್ ' ವಿಭಾಗವೆಂದು ಗುರುತಿಸಿ ಅದರಲ್ಲಿ “ಹೊಸ ಪ್ರಯತ್ನಗಳು " ಎಂದು ಒಂದು ಚಿತ್ರ, ಒಂದು ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಗುತ್ತಿದೆ. ಈ ಮೂಲಕ ಹೊಸ ಪ್ರತಿಭೆಗಳಿಗೆ ಒಂದು ವೇದಿಕೆ ಕಲ್ಪಿಸುವುದೂ ಸಾಂಗತ್ಯದ ಉದ್ದೇಶ.ಉಳಿದಂತೆ ಹೋಳಿಗೆ ಊಟ ಸಿದ್ಧಗೊಂಡಿದೆ. ಕೊಪ್ಪದ ಸುಧೀರ್ ಕುಮಾರ್ ಮುರೊಳ್ಳಿ, ತೀರ್ಥಹಳ್ಳಿಯ ಮಧುಕರ್ ಮಯ್ಯ ಮತ್ತಿತರರು ಆಕಾಂಕ್ಷಿಗಳ ಬರುವಿಕೆಗೆ ಕಾಯುತ್ತಿದ್ದಾರೆ.

ಬಸ್ ಮಾರ್ಗ
ಬೆಂಗಳೂರಿನಿಂದ ಬರುವವರಿಗೆ ನೇರವಾಗಿ ಕುಪ್ಪಳ್ಳಿಗೇ ರಾತ್ರಿ 10. 30 ಕ್ಕೆ ಬೆಂಗಳೂರು ಬಸ್ ನಿಲ್ದಾಣದಿಂದ ಬಸ್ ಇದೆ. ಅದು ತೀರ್ಥಹಳ್ಳಿ ಮಾರ್ಗವಾಗಿ ಬಸ್ ಕುಪ್ಪಳ್ಳಿಯನ್ನು ಬೆಳಗ್ಗೆ ಸುಮಾರು 7 ರ ಹೊತ್ತಿಗೆ ತಲುಪಲಿದೆ. ಅದು ಕಾರ್ಯಕ್ರಮ ನಡೆಯುವ ಸ್ಥಳದ ಎದುರೇ ಹೋಗುತ್ತದೆ. ಏನೂ ಸಮಸ್ಯೆಯಿಲ್ಲ.

ಮೈಸೂರಿನಿಂದ ಬರುವವರು ಹಾಸನಕ್ಕೆ ಬಂದು, ಚಿಕ್ಕಮಗಳೂರಿಗೆ ಬಂದು ಅಲ್ಲಿಂದ ಕೊಪ್ಪ ಬಸ್ ಹತ್ತಬೇಕು. ಇಲ್ಲದೇ ಇದ್ದರೆ ಮೈಸೂರಿನಿಂದ ರಾತ್ರಿ 9. 30 ಕ್ಕೆ ಶೃಂಗೇರಿ ಬಸ್ ಹೊರಡಲಿದೆ. ಅದರಲ್ಲಿ ಕೊಪ್ಪದಲ್ಲಿ ಇಳಿದು, ಕೊಪ್ಪ-ತೀರ್ಥಹಳ್ಳಿ ಬಸ್ ಹತ್ತಬೇಕು. ಸೋಲಾಪುರ ಹೈವೇಯಲ್ಲಿ ಸಾಗುವ ಬಸ್ ಗಡಿಕಲ್ಲು ಎಂಬಲ್ಲಿ ಇಳಿದು, ಅರ್ಧ ಕಿ. ಮೀ ನಡೆದರೆ ಕಾರ್ಯಕ್ರಮದ ಸ್ಥಳ ಲಭ್ಯ.

ಬಾಗಲಕೋಟೆ, ಬಳ್ಳಾರಿಯಿಂದ ಬರುವವರು ಶಿವಮೊಗ್ಗಕ್ಕೆ ಬಂದು, ಅಲ್ಲಿಂದ ತೀರ್ಥಹಳ್ಳಿ ಬಸ್ ಹತ್ತಬೇಕು. ನಂತರ ತೀರ್ಥಹಳ್ಳಿಯಿಂದ ಕೊಪ್ಪ ಬಸ್ ಹಿಡಿದು ಗಡಿಕಲ್ಲು ಎಂಬಲ್ಲಿ ಇಳಿದು ಬರಬೇಕು. ಮಂಗಳೂರಿನಿಂದ ಬರುವವರೂ ಭದ್ರಾವತಿಗೆ ಹೋಗುವ ಬಸ್ ಹಿಡಿದರೆ ಕೊಪ್ಪದಲ್ಲಿ ಇಳಿದು ತೀರ್ಥಹಳ್ಳಿ ಬಸ್ ಹತ್ತಬೇಕು. ಹಾಗೆಯೇ ತೀರ್ಥಹಳ್ಳಿಯಲ್ಲಿ ಇಳಿದರೆ ಕೊಪ್ಪಕ್ಕೆ ಹೋಗುವ ಬಸ್ ಅನ್ನು ಹತ್ತಬೇಕು. ಈ ಎರಡೂ ಮಾರ್ಗಗಳಲ್ಲಿ ಬರಬೇಕಾದವರು ಗಡಿಕಲ್ಲು ಎಂಬಲ್ಲಿ ಇಳಿದು ಅರ್ಧ ಕಿ. ಮೀ ನಡೆದು ಬರಬೇಕು.

ಇನ್ನೇನಾದರೂ ಮಾಹಿತಿ ಬೇಕಾದರೆ 93433 81802, ಮಾರ್ಗದ ಬಗ್ಗೆ ಗೊಂದಲವಾದರೆ ಸುಧೀರ್ ಕುಮಾರ್ ಮುರೊಳ್ಳಿ-94482 45172 , ಮಧುಕರ್ ಮಯ್ಯ- 94481 54298 ಕರೆ ಮಾಡಬಹುದು. ಶನಿವಾರ ಬೆಳಗಿನ ಬಿಸಿಬಿಸಿ ಕಾಫಿಯೊಂದಿಗೆ ಸಾಂಗತ್ಯ ತಂಡ ಸ್ವಾಗತಿಸಲಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada