»   »  ಸಂಜು ವೆಡ್ಸ್ ಗೀತಾ ಇನ್ ಹೆವನ್ ನಲ್ಲಿ ಶ್ರೀನಗರ ಕಿಟ್ಟಿ

ಸಂಜು ವೆಡ್ಸ್ ಗೀತಾ ಇನ್ ಹೆವನ್ ನಲ್ಲಿ ಶ್ರೀನಗರ ಕಿಟ್ಟಿ

Subscribe to Filmibeat Kannada

'ಒಲವೇ ಜೀವನ ಲೆಕ್ಕಾಚಾರ' ಹಾಗೂ 'ಸವಾರಿ' ಚಿತ್ರಗಳ ಯಶಸ್ಸು ಶ್ರೀನಗರ ಕಿಟ್ಟಿಗೆ ವರವಾಗಿ ಪರಿಣಮಿಸಿದೆ. ಈಗ ಮತ್ತಷ್ಟು ಅವಕಾಶಗಳು ಶ್ರೀನಗರ ಕಿಟ್ಟಿಯನ್ನು ಹುಡುಕಿಕೊಂಡು ಬಂದಿವೆ. 'ಮರಳಿ ಮರೆಯಾಗಿ' ಮತ್ತು 'ಸಂಜು ವೆಡ್ಸ್ ಗೀತಾ, ಇನ್ ಹೆವೆನ್' ಎಂಬ ಎರಡು ಚಿತ್ರಗಳು ಶೀಘ್ರದಲ್ಲೇ ಸೆಟ್ಟೇರಲಿವೆ.

ಕಿಟ್ಟಿ ನಟಿಸಲಿರುವ ಒಂದು ಚಿತ್ರಕ್ಕ್ಕೆ ಸವಾರಿ ಚಿತ್ರದ ಜನಪ್ರಿಯ 'ಮರಳಿ ಮರೆಯಾಗಿ' ಹಾಡು ಶೀರ್ಷಿಕೆಗೆ ಸ್ಫೂರ್ತಿಯಾಗಿದೆ. ಇದೊಂದು ರಿಮೇಕ್ ಚಿತ್ರವಾಗಿದ್ದು ರಣದೀಪ್ ಹೂಡ ಮತ್ತು ಶಹನಾ ಗೋಸ್ವಾಮಿ ನಟಿಸಿದ 'ರುಬರು' ಹಿಂದಿ ಚಿತ್ರದ ರೀಮೇಕ್. ಜುಲೈ ಅಂತ್ಯಕ್ಕೆ ಈ ಚಿತ್ರ ಸೆಟ್ಟೇರಲಿದೆ.

ಈ ಚಿತ್ರದ ಮೂಲಕ ನಾಗಶೇಖರ್ ಕನ್ನಡ ಚಿತ್ರರಂಗಕ್ಕೆ ಬಹಳ ವರ್ಷಗಳ ಹಿಂದೆಯೇ ಅಡಿಯಿಡಬೇಕಾಗಿತ್ತು. ಗಣೇಶ್ ರ ಅರಮನೆ ಚಿತ್ರ ನಿರ್ದೇಶಿಸುವ ಅವಕಾಶ ಸಿಕ್ಕ ನಂತರ ಈ ಚಿತ್ರವನ್ನು ಅವರು ಕೈಬಿಟ್ಟಿದ್ದರು. ಈಗ ಮತ್ತೆ ಕಾಲಕೂಡಿಬಂದಿದ್ದು ಅದೇ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಈ ಚಿತ್ರ ಸೆಪ್ಟೆಂಬರ್ ನಲ್ಲಿ ಸೆಟ್ಟೇರಲಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada