»   » ಬಾಕ್ಸಾಫೀಸಲ್ಲಿ ಉಪೇಂದ್ರ 'ಆರಕ್ಷಕ' ಜಿಂಗಿಚಕ್ಕ ಡ್ಯಾನ್ಸ್

ಬಾಕ್ಸಾಫೀಸಲ್ಲಿ ಉಪೇಂದ್ರ 'ಆರಕ್ಷಕ' ಜಿಂಗಿಚಕ್ಕ ಡ್ಯಾನ್ಸ್

Posted By:
Subscribe to Filmibeat Kannada

ಸೂಪರ್ ಸ್ಟಾರ್ ಉಪೇಂದ್ರ ಹಾಗೂ ಪಿ ವಾಸು ಕಾಂಬಿನೇಷನ್ ಚಿತ್ರ 'ಆರಕ್ಷಕ' ಬಾಕ್ಸಾಫೀಸಲ್ಲಿ ಜಿಂಗಿಚಕ್ಕ ಎಂದು ಕುಣಿದು ಕುಪ್ಪಳಿಸಿದೆ. ಚಿತ್ರ ಬಿಡುಗಡೆಯಾದ ಎಂಟು ದಿನಗಳಲ್ಲಿ ಒಟ್ಟು ರು.3.42 ಕೋಟಿ ಕಲೆಕ್ಷನ್ ಮಾಡಿದ್ದು ಇದರಲ್ಲಿ ರು.2.5 ಕೋಟಿ ನಿರ್ಮಾಪಕರ ಪಾಲು ಎಂದು ಚಿತ್ರ ವಿತರಕ ಬಾಷಾ ಮಾದ್ಯಮಗಳಿಗೆ ತಿಳಿಸಿದ್ದಾರೆ.

ಈ ಸಂಬಂಧ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಗೋಲ್ಡ್ ಫಿಂಚ್ ಹೋಟೆಲ್‌ನಲ್ಲಿ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಉಪೇಂದ್ರ, ನಿರ್ದೇಶಕ ಪಿ ವಾಸು, ನಿರ್ಮಾಪಕ ಕೃಷ್ಣ ಪ್ರಜ್ವಲ್ ಹಾಗೂ ಸಂಗೀತ ನಿರ್ದೇಶಕ ಗುರುಕಿರಣ್ ಉಪಸ್ಥಿತರಿದ್ದರು.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 'ಚಿಂಗಾರಿ' ಚಿತ್ರ ಬಿಡುಗಡೆಯಾದ ಕಾರಣ ಕೆಲವು ಚಿತ್ರಮಂದಿರಗಳನ್ನು ಬಿಟ್ಟುಕೊಡಬೇಕಾಯಿತು. ಹಾಗಾಗಿ 'ಆರಕ್ಷಕ' ಚಿತ್ರ ಸದ್ಯಕ್ಕೆ 65 ಪ್ಲಸ್ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ ಎಂದರು. ಅಂದಹಾಗೆ 'ಚಿಂಗಾರಿ' ಚಿತ್ರವೂ ಕಲೆಕ್ಷನ್‌ನಲ್ಲಿ ಮುನ್ನುಗ್ಗುತ್ತಿರುವುದು ಗೊತ್ತೇ ಇದೆ. (ಏಜೆನ್ಸೀಸ್)

English summary
Upendra lead Aarakshaka box office report. The movie collected gross of Rs.3.42 crores in the eight days and the producer share of this is Rs.2.5 crores said distributor Basha.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X