»   » ಲಂಡನ್ ವಿಮಾನ ಹತ್ತಿದ ಉಪೇಂದ್ರ, ನಯನತಾರಾ

ಲಂಡನ್ ವಿಮಾನ ಹತ್ತಿದ ಉಪೇಂದ್ರ, ನಯನತಾರಾ

Posted By:
Subscribe to Filmibeat Kannada

ರಾಕ್ ಲೈನ್ ವೆಂಕಟೇಶ್ ನಿರ್ಮಿಸುತ್ತಿರುವ ಭಾರಿ ಬಜೆಟ್ ಚಿತ್ರ 'ಸೂಪರ್'. ಇದೇ ಮೊದಲ ಬಾರಿಗೆ ರಾಕ್ ಲೈನ್ ವೆಂಕಟೇಶ್ ಹಾಗೂ ಉಪೇಂದ್ರ ಕಾಂಬಿನೇಷನ್ ನಲ್ಲಿ ಬರುತ್ತಿರುವ ಚಿತ್ರ ಇದಾಗಿದೆ. ಲಂಡನ್ ನಲ್ಲಿ ಇಪ್ಪತ್ತು ದಿನಗಳ ಕಾಲ ಹಾಡಿನ ಚಿತ್ರೀಕರಣ ನಡೆಯಲಿದೆ. ಇದಕ್ಕಾಗಿ ಉಪೇಂದ್ರ ಹಾಗೂ ನಯನತಾರಾ ವಿಮಾನದಲ್ಲಿ ಲಂಡನ್ ಗೆ ಹಾರಲಿದ್ದಾರೆ.

ಸೂಪರ್ ಚಿತ್ರೀಕರಣ ಮೇ 15ರಿಂದ ಲಂಡನ್ ನಲ್ಲಿ ಆರಂಭವಾಗಲಿದೆ ಎಂದು ಮೂಲಗಳು ತಿಳಿಸಿವೆ. ಉಪೇಂದ್ರ ಜೊತೆ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಸಹ ಲಂಡನ್ ಗೆ ಹೊರಟಿದ್ದಾರೆ. ಸೂಪರ್ ಚಿತ್ರ ಈಗಾಗಲೆ ಬೆಂಗಳೂರಿನ ಎಒಎಲ್ ಕಂಪನಿ, ಯುಬಿ ಸಿಟಿ, ಮೈಸೂರು ಮತ್ತು ತುಮಕೂರಿನಲ್ಲಿ ಚಿತ್ರೀಕರಣಗೊಂಡಿದೆ.

ಲಂಡನ್ ಚಿತ್ರೀಕರಣದ ಬಳಿಕ ಚಿತ್ರತಂಡ ಸಣ್ಣ ವಿರಾಮ ತೆಗೆಕೊಂಡು ಬಳಿಕ ದುಬೈ ವಿಮಾನ ಹತ್ತಲಿದೆ. ಚಿತ್ರದ ತಾರಾಗಣದಲ್ಲಿ ಸಾಧುಕೋಕಿಲ, ತೆಲುಗು ನಟ ಆಲಿ ಮೊದಲಾದವರು ಇದ್ದಾರೆ. ಆರಂಭದಿಂದಲೂ ತಮ್ಮ ಚಿತ್ರದ ಬಗೆಗೆ ಉಪೇಂದ್ರ ಹೆಚ್ಚಿನ ವಿವರಗಳನ್ನು ನೀಡದೆ ಗೌಪ್ಯತೆಯನ್ನು ಕಾಪಾಡಿಕೊಂಡು ಬರುತ್ತಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada