»   » ಅಂಬಿ ಸಮಯನಿಷ್ಠೆಗೆ ತಲೆದೂಗಿದ ನಾಣಿ

ಅಂಬಿ ಸಮಯನಿಷ್ಠೆಗೆ ತಲೆದೂಗಿದ ನಾಣಿ

Posted By:
Subscribe to Filmibeat Kannada

ಮಂಡ್ಯದ ಗಂಡು ಅಂಬರೀಷ್ ಹಾಗೂ ಕಿಚ್ಚ ಸುದೀಪ್ ಅಭಿನಯದ 'ವೀರ ಪರಂಪರೆ' ಚಿತ್ರ ಬಿಜಾಪುರದಲ್ಲಿ ಪ್ರಥಮ ಹಂತದ ಚಿತ್ರೀಕರಣವನ್ನು ಮುಗಿಸಿಕೊಂಡಿದೆ. ಈ ಚಿತ್ರದಲ್ಲಿ ಸುದೀಪ್ ಹೆಸರಿನಬಾಲಿವುಡ್ ನ ಮತ್ತೊಬ್ಬ ನಟ ಖಳನಟನ ಪಾತ್ರವನ್ನು ನಿರ್ವಹಿಸಿದ್ದಾರೆ.

ವೀರ ಮದಕರಿ, ಪಲ್ಲಕ್ಕಿ ಹಾಗೂ ಬಿಡುಗಡೆಗೆ ಕಾದಿರುವ ಜಯಹೇ ಮತ್ತು ಗಂಡೆದೆ ಚಿತ್ರಗಳಲ್ಲಿ ಅಭಿನಯಿಸಿರುವ ಸೂರಿ ಈ ಚಿತ್ರದ ಮತ್ತೊಬ್ಬ ಖಳನಾಯಕ.ವೀರ ಪರಂಪರೆ ಚಿತ್ರ ಗೋಕಾಕ್ ಹಾಗೂ ಅದರ ಸುತ್ತಮುತ್ತ ಹದಿನೈದು ದಿನಗಳ ಕಾಲ ಚಿತ್ರೀಕರಣ ನಡೆಸಿದೆ.

ರೆಬಲ್ ಸ್ಟಾರ್ ಅಂಬರೀಶ್, ಸುದೀಪ್ ಹಾಗೂ ಚಿತ್ರದ ನಾಯಕಿ ಐಂದ್ರಿತಾ ರೇ, ಶರಣ್ ಹಾಗೂ ವಿಜಯಲಕ್ಷ್ಮಿ ಸಿಂಗ್ ಪ್ರಮುಖ ಸನ್ನಿವೇಶದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಅಂಬರೀಷ್ ಹಾಗೂ ಸುದೀಪ್ ಅಭಿನಯದ ದೃಶ್ಯಗಳು ಪ್ರೇಕ್ಷಕರ ಕಣ್ಣಿಗೆ ಹಬ್ಬವನ್ನುಂಟು ಮಾಡಲಿದೆ ಎಂದು ಚಿತ್ರದ ನಿರ್ಮಾಪಕರಾದ ಭಾಗ್ಯವತಿ ನಾರಾಯಣ್ ತಿಳಿಸಿದ್ದಾರೆ.

ಚಿತ್ರದ ನಿರ್ದೇಶಕ ಎಸ್ ನಾರಾಯಣ್ ಪ್ರಕಾರ, ಅಂಬರೀಷ್ ಅವರು ನಿಗದಿತ ಸಮಯಕ್ಕೆ ಚಿತ್ರೀಕರಣಕ್ಕೆ ಬರುತ್ತಿದ್ದಾರೆ. ಬೆಳಗ್ಗೆ 8 ಗಂಟೆಗೆಲ್ಲಾ ಅವರು ಚಿತ್ರೀಕರಣ ಸ್ಥಳಕ್ಕೆ ಹಾಜರಾಗುತ್ತಾರೆ. ಅವರ ಸಮಯನಿಷ್ಠೆ ಕಿರಿಯ ಕಲಾವಿದರಿಗೆ ಸ್ಫೂರ್ತಿಯಾಗಿದೆ ಎಂದಿದ್ದಾರೆ. ಬೆಳಗಿನ ಉಪಹಾರಕ್ಕೂ ಮುನ್ನ ಒಂದು ಸನ್ನಿವೇಶಕ್ಕೆ ಆಕ್ಷನ್, ಕಟ್ ಹೇಳಿದ ಬಳಿಕ ಎಲ್ಲರಿಗೂ ತಿಂಡಿ,ಇದು ನಿರ್ದೇಶಕ ಎಸ್ ನಾರಾಯಣ್ ವರಸೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada