»   » ನೇಮಿಚಂದ್ರ ಕತೆಗೆ ನಟ ಅನಿರುದ್ಧ ಆಕ್ಷನ್, ಕಟ್

ನೇಮಿಚಂದ್ರ ಕತೆಗೆ ನಟ ಅನಿರುದ್ಧ ಆಕ್ಷನ್, ಕಟ್

Posted By:
Subscribe to Filmibeat Kannada

ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಎಂ ಎಸ್ ಸತ್ಯ್ಯು ಅವರ 'ಇಜ್ಜೋಡು' ಸಾಮಾಜಿಕ ಚಿತ್ರದ ಮೂಲಕ ಮತ್ತೊಮ್ಮೆ ಕಲಾರಸಿಕರ ಗಮನ ಸೆಳೆದ ನಟ ಅನಿರುದ್ಧ. ಈ ಚಿತ್ರದಲ್ಲಿ ಛಾಯಾ ಪತ್ರಕರ್ತನ ಪಾತ್ರದಲ್ಲಿ ಅನಿರುದ್ಧ ಕಾಣಿಸಿಕೊಂಡಿದ್ದರು. ಅವರ ಪಾತ್ರದ ಬಗ್ಗೆ ಪ್ರಶಂಸೆಯ ಮಾತುಗಳು ಕೇಳಿಬಂದಿವೆ. ಸಾಹಿತಿ ಯು ಆರ್ ಅನಂತಮೂರ್ತಿ ಸಹ ಅನಿರುದ್ಧ್ ಗೆ ಬೆನ್ನುತಟ್ಟಿ ಪ್ರೋತ್ಸಾಹಿಸಿದ್ದಾರೆ.

ಈ ಸಂತಸದಲ್ಲೇ ಅನಿರುದ್ಧ ಚಿತ್ರವನ್ನು ನಿರ್ದೇಶಿಸುವ ಕೆಲಸಕ್ಕೆ ಕೈಹಾಕಿದ್ದಾರೆ. ಹೌದು, ಅನಿರುದ್ಧ ನಿರ್ದೇಶಕನ ಪಟ್ಟ ಅಲಂಕರಿಸುವ ಸಿದ್ಧತೆಯಲ್ಲಿದ್ದಾರೆ. ಜೊತೆಗೆ ಎರಡು ಚಿತ್ರಗಳು ನಟಿಸುವ ಸೂಚನೆಯನ್ನು ನೀಡಿದ್ದಾರೆ. ಕನ್ನಡದ ಜನಪ್ರಿಯ ಲೇಖಕಿ ನೇಮಿಚಂದ್ರ ಅವರ ಕಥೆ ಅನಿರುದ್ಧ ಚಿತ್ರಕ್ಕಿರುತ್ತದೆ. ಇದೊಂದು ಸಾಮಾಜಿಕ ಕಥಾಹಂದರದ ಚಿತ್ರವಾಗಿದ್ದು ಎಲ್ಲಾ ಪ್ರೇಕ್ಷಕ ವರ್ಗವನ್ನು ಗಮನದಲ್ಲಿಟ್ಟುಕೊಂಡು ಚಿತ್ರ ತೆಗೆಯುವುದಾಗಿ ಅನಿರುದ್ಧ ತಿಳಿಸಿದ್ದಾರೆ.

ಅನಿರುದ್ಧ್ ನಿರ್ದೇಶಿಸಲಿರುವ ಚಿತ್ರಕ್ಕೆ ನಿರ್ಮಾಪಕ ಯಾರು ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಚಿತ್ರಕ್ಕೆ ಬೇಕಾಗಿರುವ ಎಲ್ಲಾ ಪೂರ್ವತಯಾರಿಯನ್ನು ಅವರು ಮಾಡಿಕೊಂಡಿದ್ದಾರೆ. ಏತನ್ಮಧ್ಯೆ ಅನಿರುದ್ಧ್ ಮತ್ತೊಂದು ಸಾಮಾಜಿಕ ಚಿತ್ರದಲ್ಲಿ ಅಭಿನಯಿಸಲಿದ್ದಾರೆ. ಈ ಚಿತ್ರಕ್ಕೆ ಗಣೇಶ್ ಅಯ್ಯರ್ ಅವರ ಕಥೆ ಹಾಗೂ ನಾಗಣ್ಣ ನಿರ್ದೇಶನವಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada