»   » ಶೇಷಾದ್ರಿಪುರಂ ರಸ್ತೆಯ ಕಿನೋ ಚಿತ್ರಮಂದಿರ ಇನ್ನಿಲ್ಲ

ಶೇಷಾದ್ರಿಪುರಂ ರಸ್ತೆಯ ಕಿನೋ ಚಿತ್ರಮಂದಿರ ಇನ್ನಿಲ್ಲ

Posted By:
Subscribe to Filmibeat Kannada
Kino Theater
ಬೆಂಗಳೂರು ಶೇಷಾದ್ರಿಪುರಂ ರಸ್ತೆಯಲ್ಲಿ ತನ್ನ ಕೊನೆಗಾಲವನ್ನು ಎಣಿಸುತ್ತಿದ್ದ ಕಿನೋ ಚಿತ್ರಮಂದಿರ ಕಡೆಗೂ ಕಣ್ಮುಚ್ಚಿದೆ. ಶನಿವಾರ (ನ.5) ಕಿನೋ ಚಿತ್ರಮಂದಿರನ್ನು ಧ್ವಂಸ ಮಾಡಿ ಕೆಡವಲಾಯಿತು. ಬೆಂಗಳೂರಿನ ಅತ್ಯಂತ ಹಳೆಯ ಚಿತ್ರಮಂದಿರಳಲ್ಲಿ ಕಿನೋ ಕೂಡ ಒಂದಾಗಿತ್ತು.

ಹೆಚ್ಚಾಗಿ ಈ ಚಿತ್ರಮಂದಿರದಲ್ಲಿ ತಮಿಳು ಚಿತ್ರಗಳೇ ಪ್ರದರ್ಶನ ಕಾಣುತ್ತಿದ್ದವು. ಸುದೀರ್ಘ ಸಮಯದಿಂದ ಉತ್ತಮ ಸ್ಥಿತಿಯಲ್ಲಿ ಚಿತ್ರಮಂದಿರ ಕೌಟುಂಬಿಕ ವ್ಯಾಜ್ಯಗಳಿಗೆ ಸಿಲುಕಿ ಬಾಗಿಲು ಮುಚ್ಚಲಾಗಿತ್ತು. ಕಳೆದ ಎಂಟು ವರ್ಷಗಳಿಂದ ಚಿತ್ರಮಂದಿರ ಪಾಳುಬಿದ್ದಿದ್ದು.

ಗೀತಾ, ಹಿಮಾಲಯ, ಮೆಜೆಸ್ಟಿಕ್ ಹಾಗೂ ಸಂಗಮ್ ಚಿತ್ರಮಂದಿರಗಳಂತೆ 'ಕಿನೋ' ಚಿತ್ರಮಂದಿರವೂ ಸ್ವರ್ಗಸ್ಥವಾಗಿದೆ. ಇಲ್ಲಿಂದ ಕೊಂಚ ದೂರದಲ್ಲಿರುವ ನಟರಾಜ ಚಿತ್ರಮಂದಿರಲ್ಲಿ ತಮಿಳು ಚಿತ್ರಗಳು ನಿರಾತಂಕವಾಗಿ ಪ್ರದರ್ಶನ ಕಾಣುತ್ತಿವೆ. ಕಿನೋ ಚಿತ್ರಮಂದಿರದ ಜಾಗದಲ್ಲಿ ಇನ್ನೇನು ತಲೆಯೆತ್ತಲಿದೆಯೋ ಏನೋ? (ಒನ್‌ಇಂಡಿಯಾ ಕನ್ನಡ)

English summary
One of the oldest theater in Bangalore, Sheshadripuram's Kino theater ends its era. The theater was Bulldozed Down on Saturday (5th Nov), which screened Tamil films for a long time.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada