»   »  ಕೋಮಲ್ ಚಮಕ್ಕು... ಚಿಂದಿ ಚಿಂದಿ

ಕೋಮಲ್ ಚಮಕ್ಕು... ಚಿಂದಿ ಚಿಂದಿ

By: * ಜಯಂತಿ
Subscribe to Filmibeat Kannada

ಉದಯ ವಾಹಿನಿಯ 'ಯು 2' ಚಾನೆಲ್ಲಿನಲ್ಲಿ ಸೋಮವಾರ ರಾತ್ರಿ ನೇರಪ್ರಸಾರದಲ್ಲಿ ಕೋಮಲ್. ಕಳೆದವಾರ-ಮಂಗಳವಾರ, ಬುಧವಾರ, ಗುರುವಾರ... ಅರೆರೆ ಕೋಮಲ್ ಕೋಮಲ್. ಇಡೀ ವಾರ ಯು2ನಲ್ಲಿ ಅವರು ಚಮ್ಕಾಯ್ಸಿ ಚಿಂದಿಉಡಾಯ್ಸಿದ್ದೇ ಉಡಾಯ್ಸಿದ್ದು.

ಕಿರುತೆರೆಯಲ್ಲಿ ಠಿಕಾಣಿ ಹೂಡಿದ್ದ ಕೋಮಲ್‌ಗೆ ರಾಜ್ಯದ ಮೂಲೆಮೂಲೆಗಳಿಂದ ಅಭಿಮಾನಿ ದೇವರುಗಳ ಫೋನ್‌ಕಾಲ್‌ಗಳು ಬಂದವು. ಅಭಿಮಾನಿಗಳಿಗೆ ಇವರೂ ಫೋನ್ ಮಾಡಿದರು. ಸಿನಿಮಾ ಬಿಡುಗಡೆಯ ಹಿಂದಿನ ದಿನ ಹಾಗೂ ಬಿಡುಗಡೆ ಆದ ದಿನವೂ ಚಾನೆಲ್ಲು ಕೋಮಲಮಯ!

ಇಷ್ಟೆಲ್ಲಾ ಆದಮೇಲೂ ಸೋಮವಾರದ ಬೆಳಗಿನ ಆಟ ಬೆಂಗಳೂರಿನಲ್ಲಿ ಹೌಸ್‌ಫುಲ್ ಆಗಲಿಲ್ಲ. ಮೈಸೂರು, ಹುಬ್ಬಳ್ಳಿಯ ರಿಪೋರ್ಟೂ ಅಷ್ಟಕ್ಕಷ್ಟೇ. ಚಾನೆಲ್ಲುಗಳ ಪ್ರಚಾರಕ್ಕೂ ಸಿನಿಮಾ ಯಶಸ್ಸಿಗೂ ಸಂಬಂಧವಿಲ್ಲ ಎಂಬುದಕ್ಕೆ ಇದು ಇನ್ನೊಂದು ಉದಾಹರಣೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada