»   »  ಮಾದೇಶ ನಿರ್ಮಾಪಕನ ವಿರುದ್ಧ ಆರೋಪ ಪಟ್ಟಿ

ಮಾದೇಶ ನಿರ್ಮಾಪಕನ ವಿರುದ್ಧ ಆರೋಪ ಪಟ್ಟಿ

Subscribe to Filmibeat Kannada
Producer Govardhan Murthy
ನಿರ್ಮಾಪಕ ಗೋವರ್ಧನ್ ಮೂರ್ತಿ ವಿರುದ್ಧ ಸಂಪಿಗೆ ಹಳ್ಳಿ ಪೊಲೀಸರು ಅಧೀನ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದಾರೆ.ಆರೋಪ ಪಟ್ಟಿಯಲ್ಲಿ 149 ದಾಖಲೆಗಳು, 103 ಸಾಕ್ಷಿಗಳು, 12 ಮಂದಿ ಘಟನೆಯನ್ನು ಕಣ್ಣಾರೆ ನೋಡಿದ ಸಾಕ್ಷಿಗಳನ್ನು ದಾಖಲಿಸಲಾಗಿದೆ. ನಿರ್ಮಾಪಕ ಗೋವರ್ಧನ ಮೂರ್ತಿ ಸಹ ನಟ ವಿನೋದ್ ಕುಮಾರ್ ಅವರನ್ನು ಗುಂಡಿಕ್ಕಿ ಕೊಲೆ ಮಾಡಿದ ಆರೋಪ ಎದುರಿಸುತ್ತಿದ್ದಾರೆ.

ಈ ಘಟನೆಯಲ್ಲಿ ನಿರ್ಮಾಪಕ ಗೋವರ್ಧನ ಮೂರ್ತಿ ಪ್ರಮುಖ ಆರೊಪಿ. ಬ್ಯಾಲೆಸ್ಟಿಕ್ ವರದಿಯ ಪ್ರಕಾರ, ಗೋವರ್ಧನ್ ಮೂರ್ತಿ ಅವರಿಂದ ವಶಪಡಿಸಿಕೊಂಡಿರುವ ರಿವಾಲ್ವರ್ ನಿಂದಲೇ ಗುಂಡು ಹಾರಿರುವುದು ಎಂದು ಆರೋಪ ಪಟ್ಟಿಯಲ್ಲಿ ದಾಖಲಿಸಲಾಗಿದೆ. ಗೋವರ್ಧನ್ ಸೇರಿದಂತೆ ಇತರೆ ಏಳು ಮಂದಿ ಹೆಸರನ್ನು ಆರೋಪ ಪಟ್ಟಿಯಲ್ಲಿ ಸೇರಿಸಲಾಗಿದೆ. ಇಬ್ಬರು ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

'ಮಾದೇಶ' ಚಿತ್ರ ನಿರ್ಮಾಪಕ ಗೋವರ್ಧನ್ ಹಾಗೂ ಆತನ ಅಂಗರಕ್ಷಕರು ಅಕ್ಟೋಬರ್ 6, 2008ರ ಮಧ್ಯರಾತ್ರಿ ಬೆಂಗಳೂರಿನ ಹೊರವಲಯದ ಬಾಗಲೂರಿನ ಫಾರಂಹೌಸೊಂದರಲ್ಲಿ ವಿನೋದ್ ಕುಮಾರ್ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ ಆರೋಪ ಎದುರಿಸುತ್ತಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)
ಹಾಲಿಡೇಸ್ ನಿರ್ಮಾಪಕನ ಮೇಲೆ ಹಲ್ಲೆ
ಕೇರಳದಲ್ಲಿದ್ದ ಗೋವರ್ಧನ್ ತಾನೇ ಶರಣಾದನಾ?

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada