ಸುದೀಪ್ ನನ್ನ 'ಗಾಡ್ ಫಾದರ್' ಎಂದ 'ಚಿಂಗಾರಿ' ಹರ್ಷ

ವೇದಿಕೆಯಲ್ಲಿ ಮಾತನಾಡಿದ ಹರ್ಷ, ಚಿತ್ರದ ನಿರ್ಮಾಪಕರಿಗೆ ಮೊದಲು ಧನ್ಯವಾದ ಹೇಳಿ ನಂತರ "ದರ್ಶನ್ ಅವರಿಗೆ ಕೇವಲ ಹಾಡುಗಳನ್ನು ಮಾಡಿದ್ದೆ. ಚಿಂಗಾರಿ ಮೂಲಕ ಇಡೀ ಸಿನಿಮಾ ಮಾಡಿದ್ದು ಖುಷಿಯಾಗಿದೆ. ದರ್ಶನ್ ಕೇವಲ ಚಾಲೆಂಜಿಂಗ್ ಸ್ಟಾರ್ ಅಷ್ಟೇ ಅಲ್ಲ, ಫ್ರೆಂಡ್ಲಿ ಸ್ಟಾರ್, ಆಕ್ಷನ್ ಸ್ಟಾರ್, ಹೀಗೆ ಒಟ್ಟೂ ಏಳು ಸ್ಟಾರ್ ಗಳನ್ನು ಪ್ರಧಾನ ಮಾಡಿದರು. ಪಕ್ಕದಲ್ಲಿದ್ದ ದರ್ಶನ್ ಮುಗುಳ್ನಗುತ್ತಿದ್ದರು.
ನಂತರ ದರ್ಶನ್ ಪಕ್ಕದಲ್ಲಿದ್ದ ಸುದೀಪ್ ಕುರಿತು "ಸ್ಟೇಜ್ ಗಳಲ್ಲಿ ಡಾನ್ಸ್ ಮಾಡುತ್ತಿದ್ದ ನಾನು ಚಿತ್ರರಂಗಕ್ಕೆ ಬರಲು ಕಾರಣರಾದ ಸುದೀಪ್ ನನ್ನ ಗಾಡ್ ಫಾದರ್. ಜೊತೆಗೆ ಭಾವನಾ ಕೂಡ" ಎಂದು ಸೆಂಟಿಮೆಂಟ್ ಗೆ ಸರಿದರು. ಚಿತ್ರತಂಡದ ಎಲ್ಲರ ಬಗ್ಗೆ ಒಳ್ಳೆಯ ಮಾತುಗಳನ್ನಾಡಲು ಮರೆಯಲಿಲ್ಲ ಹರ್ಷ. ಒಟ್ಟಿನಲ್ಲಿ ಪರೀಕ್ಷೆ ಚೆನ್ನಾಗಿ ಬರೆದರೂ 'ರಿಸಲ್ಟ್ 'ಗೆ ಕಾಯುವ ವಿದ್ಯಾರ್ಥಿಯಂತೆ ಕಾಣುತ್ತಿದ್ದರು ಚಿಂಗಾರಿ ನಿರ್ದೇಶಕ ಹರ್ಷ. (ಒನ್ ಇಂಡಿಯಾ ಕನ್ನಡ)
More from Filmibeat
English summary
A Harsha, the director of upcoming movie 'Chingari' told that Darshan co-operated very much for the movie Chingari. He also told Sudeep is his God Father for his film Career.


Click it and Unblock the Notifications











