»   »  ಸ್ಯಾಂಡಲ್ ವುಡ್ ಗೆ ಎಳ್ಳುನೀರು ಬಿಟ್ಟ ಜೆನಿಲಿಯಾ

ಸ್ಯಾಂಡಲ್ ವುಡ್ ಗೆ ಎಳ್ಳುನೀರು ಬಿಟ್ಟ ಜೆನಿಲಿಯಾ

Subscribe to Filmibeat Kannada
ಸ್ಯಾಂಡಲ್ ವುಡ್ ನ ಏಣಿ ಹತ್ತಿ ಬಾಲಿವುಡ್ ಗೆ ಜಿಗಿದ ಜೆನಿಲಿಯಾ ಮತ್ತೆ ಸ್ಯಾಂಡಲ್ ವುಡ್ ಗೆ ಬರುತ್ತಾರೆ ಎಂಬ ಮಾತಿಗೆ ಎಳ್ಳು ನೀರು ಬಿಟ್ಟಿದ್ದಾರೆ. ರೀಮೇಕ್ ಚಿತ್ರವೊಂದರಲ್ಲಿ ಪುನೀತ್ ರಾಜ್ ಕುಮಾರ್ ಜೊತೆ ನಟಿಸುತ್ತಾರೆ ಎಂಬ ಸುದ್ದ್ದಿಯನ್ನು ಜೆನಿಲಿಯಾ ಸಾರಾ ಸಗಟಾಗಿ ತಳ್ಳಿಹಾಕಿದ್ದಾರೆ.

ಆಕೆ ನಟನೆಯ ಹಿಂದಿ ಚಿತ್ರ 'ಜಾನೆ ತು ಯಾ ಜಾನೆ ನಾ' ಬಾಲಿವುಡ್ ನಲ್ಲಿ ಗೆದ್ದ ನಂತರ ಜೆನಿಲಿಯಾ ಬೇಡಿಕೆ ಸೆನ್ಸೆಕ್ಸ್ ನಂತೆ ಏರಿದೆ. ಸತ್ಯ ಇನ್ ಲವ್ ಚಿತ್ರದಲ್ಲಿ ಶಿವರಾಜ್ ಕುಮಾರ್ ಜೊತೆಯಲ್ಲಿ ಜೆನಿಲಿಯಾ ನಟಿಸಿದ್ದರು. ಆ ಚಿತ್ರ ನೂರು ದಿನ ಪ್ರದರ್ಶನ ಕಂಡರೂ ಬಾಕ್ಸಾಫೀಸ್ ಗಳಿಕೆಯಲ್ಲಿ ಹಿಂದುಳಿಯಿತು.ಆ ಚಿತ್ರದ ನಂತರ ಕನ್ನಡ ಚಿತ್ರರಂಗದಿಂದ ಜೆನಿಲಿಯಾ ಸಹ ನಾಪತ್ತೆಯಾಗಿದ್ದು ಬೇರೆ ಕಥೆ.

ಪ್ರಸ್ತುತ ಆಕೆ ತೆಲುಗು,ತಮಿಳು ಚಿತ್ರರಂಗಗಳಲ್ಲಿ ಬ್ಯುಸಿಯಾಗಿದ್ದಾರೆ. 'ಜಾನೆ ತು ಯಾ ಜಾನೆ ನಾ' ಚಿತ್ರ ಯಶಸ್ವಿಯಾದ ನಂತರವಂತೂ ಆಕೆ ನಿರ್ಮಾಪಕ ಕೈಗೇ ಸಿಗುತ್ತಿಲ್ಲವಂತೆ. ಜೆನಿಲಿಯಾ ಚಿತ್ರವೊಂದಕ್ಕೆ ಪಡೆಯುತ್ತಿರುವ ಸಂಭಾವನೆ ಬರೋಬ್ಬರಿ ಒಂದು ಕೋಟಿ ರು.ಗಳು!

(ದಟ್ಸ್ ಕನ್ನಡ ಚಿತ್ರವಾರ್ತೆ)
ಅಪ್ಪು ಜೋಡಿಯಾಗಲಿರುವ ಜೆನಿಲಿಯಾ

Please Wait while comments are loading...