»   »  ಸೆನ್ಸಾರ್ ನಲ್ಲಿ ಪಾಸಾದ ಲವ್ ಗುರು

ಸೆನ್ಸಾರ್ ನಲ್ಲಿ ಪಾಸಾದ ಲವ್ ಗುರು

Subscribe to Filmibeat Kannada

ಪ್ರಶಾಂತ್ ರಾಜ್ ಚೊಚ್ಚಲ ನಿರ್ದೇಶನದ 'ಲವ್ ಗುರು' ಚಿತ್ರ ಸೆನ್ಸಾರ್ ನಲ್ಲಿ ಪಾಸಾಗಿದೆ. ಈ ಚಿತ್ರಕ್ಕೆ 'ಯು' ಪ್ರಮಾಣ ಪತ್ರ ನೀಡಲಾಗಿದ್ದು ಕುಟುಂಬ ಸಮೇತ ಚಿತ್ರವನ್ನು ನೋಡಬಹುದು ಎಂದು ಸೆನ್ಸಾರ್ ಮಂಡಳಿ ಮೆಚ್ಚುಗೆ ಸೂಚಿಸಿದೆ. ಶೀಘ್ರದಲ್ಲೇ ಈ ಚಿತ್ರ ತೆರೆಕಾಣಲಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.

'ಲವ್ ಗುರು' ಚಿತ್ರಕ್ಕೆ ಪ್ರಶಾಂತ್ ರಾಜ್ ಅವರೇ ಕತೆ, ಚಿತ್ರಕತೆ ಮತ್ತು ಸಂಭಾಷಣೆಯನ್ನೂ ಬರೆದಿದ್ದಾರೆ. ನಮ್ಮ ಲೆಕ್ಕಾಚಾರದ ಪ್ರಕಾರ ಚಿತ್ರವನ್ನು ಮುಗಿಸಿದ್ದೇವೆ. ಪ್ರೇಕ್ಷಕರು ಈ ಚಿತ್ರವನ್ನು ಹೇಗೆ ಸ್ವೀಕರಿಸುತ್ತಾರೆ ಎಂಬ ಕುತೂಹಲ ನಮ್ಮನ್ನು ತುದಿಗಾಲಲ್ಲಿ ನಿಲ್ಲಿಸಿದೆ ಎನ್ನುತ್ತಾರೆ ನಿರ್ಮಾಪಕ ನವೀನ್. ತರುಣ್ ಮತ್ತು ರಾಧಿಕಾ ಪಂಡಿತ್ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ.

'ಅರಸು' ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದ ಜೋಶುವಾ ಶ್ರೀಧರ್ ಈ ಚಿತ್ರದ ಸಂಗೀತ ನಿರ್ದೇಶಕರು. ಸಂಕಲನ ಸುರೇಸ್ ಅರಸ್. ಛಾಯಾಗ್ರಹಣ ಜ್ಞಾನಮೂರ್ತಿ.ಯಜ್ಞಶೆಟ್ಟಿ, ಶರಣ್, ಜೈ ಜಗದೀಶ್, ಶ್ರೀನಿವಾಸಮೂರ್ತಿ, ಗಿರಿಜಾ ಲೋಕೇಶ್, ರಮೇಶ್ ಭಟ್, ಚಿತ್ರಾ ಶೆಣೈ, ಮಾಸ್ಟರ್ ಮಂಜು ಚಿತ್ರದ ತಾರಾಗಣದಲ್ಲಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada