»   » ಪತ್ನಿಯನ್ನು ಕೊಂದ ಸ್ಟಂಟ್ ಮ್ಯಾನ್ ಸೆರೆ

ಪತ್ನಿಯನ್ನು ಕೊಂದ ಸ್ಟಂಟ್ ಮ್ಯಾನ್ ಸೆರೆ

Posted By:
Subscribe to Filmibeat Kannada
Kannada Film Stuntman kills wife
ಬೆಂಗಳೂರು, ಜೂ. 7: ಕನ್ನಡ ಚಲನಚಿತ್ರ ಸ್ಟಂಟ್ ಕಲಾವಿದನೊಬ್ಬ ಮಕ್ಕಳ ಎದುರೇ ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಭಾನುವಾರ ನಗರದಲ್ಲಿ ನಡೆದಿದೆ. ಆರ್‌ಟಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಗಂಗಾನಗರ ವಸಂತಪ್ಪ ಬ್ಲಾಕ್‌ನಲ್ಲಿ ಈ ದುಷ್ಕೃತ್ಯ ನಡೆದಿದೆ.

ಸ್ಟಂಟ್ ಕಲಾವಿದ ರಾಮನಗರದ ಶಿವಕುಮಾರ್ (41) ಅನೈತಿಕ ಸಂಬಂಧದ ಶಂಕೆಯಿಂದ ಪತ್ನಿ ಶೋಭಾ (36) ಕೊಲೆ ಮಾಡಿದ್ದಾನೆ.ಆರೋಪಿ ಆಕೆಯ ಮೇಲೆ ಕಲ್ಲನ್ನು ಎತ್ತಿಹಾಕಿ ಕೊಲೆಗೈದಿದ್ದಾನೆ. ಹೆತ್ತ ತಾಯಿಯನ್ನು ತಂದೆಯೇ ಕೊಲ್ಲುವುದನ್ನು ಕಂಡ 14 ವರ್ಷದ ಹರಿ ವಿಜ್ಞೇಶ್ ಹಾಗೂ 9 ವರ್ಷದ ಸೋನಿಯಾ ಗಾಬರಿಗೊಂಡಿದ್ದರು. ನಂತರ ಆತ ಮಕ್ಕಳನ್ನು ಪತ್ನಿಯ ತವರು ಮನೆಯಲ್ಲಿ ಬಿಟ್ಟು ಪರಾರಿಯಾಗಿದ್ದನು.

ಮಹಾಕುಡುಕನಾಗಿದ್ದ ಶಿವಕುಮಾರ್ ಕುಡಿದು ಬಂದು ಪತ್ನಿಯೊಂದಿಗೆ ದಿನಾ ಜಗಳವಾಡುತ್ತಿದ್ದ ಎನ್ನಲಾಗಿದೆ. ಶನಿವಾರ ರಾತ್ರಿ ಮನೆಗೆ ಬಂದು ಪತ್ನಿಯ ನಡತೆ ಕುರಿತು ಜಗಳವಾಡಿದ್ದಾನೆ. ಜಗಳ ವಿಕೋಪಕ್ಕೆ ತಿರುಗಿದಾಗ ಅಡುಗೆ ಮನೆಯಲ್ಲಿದ್ದ ರುಬ್ಬುವ ಕಲ್ಲಿನಿಂದ ಆಕೆಯ ತಲೆ ಜಜ್ಜಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಮೊಮ್ಮಕ್ಕಳಿಂದ ವಿಷಯ ತಿಳಿದ ಅಜ್ಜಿ ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದರು.

ಪತ್ತೆಯಾದ ಸ್ಟಂಟ್ ಮ್ಯಾನ್: ಮಕ್ಕಳನ್ನು ಅಜ್ಜಿ ಮನೆಗೆ ಬಿಟ್ಟು ಪರಾರಿಯಾಗಿದ್ದ ಶಿವಕುಮಾರ್ ನನ್ನು ಶಾಂತಿನಗರದ ನಂಜಪ್ಪ ಸರ್ಕಲ್ ಬಳಿ ಸೆರೆ ಹಿಡಿಯಲಾಗಿದೆ. ಅನೈತಿಕ ಸಂಬಂಧದ ಶಂಕೆಯಿಂದ ನಡೆದ ಕೊಲೆ ಎಂದು ಮೇಲ್ನೋಟಕ್ಕೆ ಕಂಡು ಬರುತ್ತದೆ, ವಿಚಾರಣೆ ನಡೆಸುತ್ತಿದ್ದೇವೆ ಎಂದು ತನಿಖೆ ಅಧಿಕಾರಿ ಇನ್ಸ್ ಪೆಕ್ಟರ್ ಪೂವಯ್ಯ ಹೇಳಿದರು.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada