For Quick Alerts
  ALLOW NOTIFICATIONS  
  For Daily Alerts

  ಕೋ ಕೋ ಚಿತ್ರ ಮುರಿಯಲಿದೆ ಜೋಗಯ್ಯ ದಾಖಲೆ

  |
  ಕೋ ಕೋ ಚಿತ್ರತಂಡ ಜೋಗಯ್ಯ ದಾಖಲೆ ಮುರಿಯಲು ಹೊರಟಿದೆ. ಜೋಗಯ್ಯ ಚಿತ್ರ ಕರ್ನಾಟಕದಾದ್ಯಂತ ಹಾಗೂ ಹೊರಗಡೆ ಸೇರಿ ಒಟ್ಟೂ 180 ಥಿಯೇಟರ್ ಗಳಲ್ಲಿ ಬಿಡುಗಡೆ ಆಗಿತ್ತು. ಇದೀಗ ಕೋ ಕೋ ಚಿತ್ರತಂಡ ಹೊರ ರಾಜ್ಯಗಳೂ ಸೇರಿದಂತೆ 200ಕ್ಕಿಂತ ಹೆಚ್ಚು ಕಡೆ ಚಿತ್ರವನ್ನು ಬಿಡುಗಡೆ ಮಾಡಿ ದಾಖಲೆ ನಿರ್ಮಿಸಲಿದೆ.

  ಹೈದರಾಬಾದ್ ಕರ್ನಾಟಕ ಕೇಂದ್ರದ ಕಡೆ ಹೆಚ್ಚು ಕಣ್ಣಿಟ್ಟಿರುವ ಚಿತ್ರತಂಡ, ಅಲ್ಲಿ ಅತೀ ಹೆಚ್ಚು ಕೇಂದ್ರಗಳಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದೆ. ಕಾರಣ ತೆಲುಗಿನ ನಟ ಶ್ರೀಹರಿ ಕೋ ಕೋ ಚಿತ್ರದಲ್ಲಿ ಅಭಿನಯಸಿರುವುದು ಒಂದಾದರೆ ತೆಲುಗಿನ ಖ್ಯಾತ ಸಂಗೀತ ನಿರ್ದೆಶಕ ರಮಣಗೋಕುಲ ಈ ಚಿತ್ರಕ್ಕೆ ಸಂಗೀತ ನೀಡಿರುವುದು ಇನ್ನೊಂದು.

  ಇಷ್ಟೇ ಅಲ್ಲ, ಕನ್ನಡತಿಯಾದರೂ ಇಡೀ ದಕ್ಷಿಣ ಭಾರತಕ್ಕೇ ಹೆಸರು ಮಾಡಿರುವ ಪ್ರತಿಭಾವಂತೆ ಪ್ರಿಯಾಮಣಿ ಈ ಚಿತ್ರದಲ್ಲಿ ಶ್ರೀನಗರ ಕಿಟ್ಟಿಗೆ ನಾಯಕಿಯಾಗಿದ್ದಾರೆ. ಚಿತ್ರವನ್ನೂ ಕೂಡ ಸಾಕಷ್ಟು ಖರ್ಚು ಮಾಡಿ ಪರಭಾಷೆಯವರೂ ಮುಗಿನ ಮೇಲೆ ಬೆರಳಿಡುವಂತೆ ಮಾಡಲಾಗಿದೆಯೆಂದು ಚಿತ್ರತಂಡ ಆತ್ಮವಿಶ್ವಾಸದಿಂದ ಹೇಳುತ್ತಿದೆ. ಜೋಗಯ್ಯನ ದಾಖಲೆ ಮುರಿಯಲು ಹೋಗಿ ಅದರಂತೆ 'ಫ್ಲಾಪ್' ಆಗದಿದ್ದರೆ ಸಾಕು. (ಒನ್ ಇಂಡಿಯಾ ಕನ್ನಡ)

  English summary
  The Bharani Minerals much expected Kannada film ‘Ko Ko' Releases more than 200 theaters. It has the direction of R Chandru and Srnagara Kitty and Priyamani Pair. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X