»   »  ಕಾಸರವಳ್ಳಿ ಚಿತ್ರಕ್ಕೆ ಕಡೆಗೂ ಲೊಕೇಷನ್ ಸಿಕ್ಕಿತು!

ಕಾಸರವಳ್ಳಿ ಚಿತ್ರಕ್ಕೆ ಕಡೆಗೂ ಲೊಕೇಷನ್ ಸಿಕ್ಕಿತು!

Subscribe to Filmibeat Kannada

ನಾಲ್ಕು ಬಾರಿ ಸ್ವರ್ಣ ಕಮಲ ಪ್ರಶಸ್ತಿ ವಿಜೇತ ಗಿರೀಶ್ ಕಾಸರವಳ್ಳಿ ಕಡೆಗೂ ತಮ್ಮ ಹೊಸ ಚಿತ್ರಕ್ಕೆ ಚಿತ್ರೀಕರಣ ಸ್ಥಳವನ್ನು ಹುಡುಕುವಲ್ಲಿ ಯಶಸ್ವಿಯಾಗಿದ್ದಾರೆ. ಅಮರೇಶ ನುಗದೋಣಿ ಅವರ ಕಾದಂಬರಿ 'ಸವಾರಿ'ಯನ್ನು ಗಿರೀಶ್ ಬೆಳ್ಳಿತೆರೆಗೆ ತರುತ್ತಿದ್ದಾರೆ. ಚಿತ್ರಕ್ಕೆ 'ಕನಸೆಂಬ ಕುದುರೆಯನೇರಿ' ಎಂದು ಹೆಸರಿಡಲಾಗಿದೆ.

'ನಾಯಿ ನೆರಳು' ಹಾಗೂ 'ಗುಲಾಬಿ ಟಾಕೀಸ್' ನಂತಹ ಪ್ರಶಸ್ತಿ ವಿಜೇತ ಚಿತ್ರವನ್ನು ನಿರ್ಮಿಸಿದ ಬಸಂತಕುಮಾರ್ ಪಾಟೀಲ್ ಅವರು ಗಿರೀಶ್ ರ ಹೊಸ ಚಿತ್ರದ ನಿರ್ಮಾಪಕರು. ಕನಸೆಂಬ ಕುದುರೆಯನೇರಿ ಚಿತ್ರದ ಚಿತ್ರೀಕರಣ ಬಿಜಪುರದ ಸುತ್ತಮುತ್ತ ನಡೆಯಲಿದೆ. ತಮ್ಮ ಕೃತಿಗೆ ಅಮರೇಶ್ ಅವರು ಈಗಾಗಲೇ ಅನುಮತಿ ನೀಡಿದ್ದು ಒಂಚೂರು ಬದಲಾವಣೆಗಳೊಂದಿಗೆ ಚಿತ್ರ ತೆರೆಗೆ ಬರುತ್ತದೆ ಎಂದಿದ್ದಾರೆ ಕಾಸರವಳ್ಳಿ.

ಅಂದಹಾಗೆ 2007ನೇ ಸಾಲಿನ 55ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಪಟ್ಟಿ ಅಧಿಕೃತವಾಗಿ ಪ್ರಕಟವಾಗದಿದ್ದರೂ 'ಗುಲಾಬಿ ಟಾಕೀಸ್' ಚಿತ್ರಕ್ಕೆ ಪ್ರಶಸ್ತಿ ದೊರಕಿದೆ ಎನ್ನುತ್ತವೆ ಮೂಲಗಳು. ಉಮಾಶ್ರೀ ಅವರ ಅತ್ಯುತ್ತಮ ನಟನೆಗಾಗಿ ಪ್ರಶಸ್ತಿ ನೀಡಲಾಗಿದೆ ಎಂಬ ಮಾಹಿತಿ ಬಹಿರಂಗಗೊಂಡಿದೆ. ಆದರೆ ಇದು ಎಷ್ಟು ನಿಜ ಎಂಬುದೇ ಈಗನ ಪ್ರಶ್ನೆ. ಆಂಧ್ರ ಪ್ರದೇಶದ ಮುಖ್ಯಮಂತ್ರಿ ವೈ.ಎಸ್.ರಾಜಶೇಖರ ರೆಡ್ಡಿ ನಿಧನದಿಂದ ಪ್ರಶಸ್ತಿಗಳನ್ನು ಪ್ರಕಟಿಸಿಲ್ಲ. ಒಂದು ವಾರದೊಳಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟವಾಗಲಿವೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada