ನಿರ್ಮಾಪಕರ ಸಂಘಕ್ಕೆ ಮುನಿರತ್ನ ಹೊಸ ಕ್ಯಾಪ್ಟನ್

ಭಾನುವಾರ ಮಧ್ಯಾಹ್ನ ನಿರ್ಮಾಪಕರ ಸಂಘದ ಕಚೇರಿಯಲ್ಲಿ ನಡೆದ ಮತದಾನದಲ್ಲಿ ಒಟ್ಟು 263 ಮತಗಳು ಚಲಾವಣೆಗೊಂಡವು. ಅದರಲ್ಲಿ ಮುನಿರತ್ನ ಅವರು 131 ಮತಗಳನ್ನು ಪಡೆದು 70 ಮತಗಳ ಅಂತರದಿಂದ ಹರೀಶ್ ಅವರನ್ನು ಸುಲಭವಾಗಿ ಸೋಲಿಸಿದರು. ಉಳಿದಂತೆ ಉಪಾಧ್ಯಕ್ಷರಾಗಿ ಎ. ಗಣೇಶ್, ಕಾರ್ಯದರ್ಶಿಯಾಗಿ ಸೂರಪ್ಪ ಬಾಬು ಆಯ್ಕೆಯಾಗಿದ್ದಾರೆ.
ಸಂಘದ ಅಧ್ಯಕ್ಷ ಸ್ಥಾನಕ್ಕೆ ಕೆಸಿಎನ್ ಚಂದ್ರಶೇಖರ್ ರಾಜೀನಾಮೆ ಸಲ್ಲಿಸಿದ ಬಳಿಕ ಆ ಸ್ಥಾನ ತೆರವಾಗಿತ್ತು. ನವರಸ ನಾಯಕ ಜಗ್ಗೇಶ್ ಅವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಆದರೆ ಜಗ್ಗೇಶ್ ನಿರ್ಮಾಪಕರ ಸಂಘದ ಸದಸ್ಯ ಅಲ್ಲ ಎಂಬ ಕಾರಣಕ್ಕೆ ಅವರ ಸ್ಪರ್ಧೆಯಿಂದ ಹೊರಗುಳಿದಿದ್ದರು.
More from Filmibeat
English summary
Karnataka Film Producers Association election held on 7th August. Rakta Kanneeru movie fame producer Munirathna wins the election. Out of total 263 vote Munirathna secured 120 votes against opponent Ba Ma Harish who got votes.
ಕೆಸಿಎನ್ ಚಂದ್ರಶೇಖರ್ ನಿರ್ಮಾಪಕ ಮುನಿರತ್ನ ಕೆಎಫ್ಸಿಸಿ ಜಗ್ಗೇಶ್ ಚುನಾವಣೆ election munirathna producer jaggesh kcn chandrashekar


Click it and Unblock the Notifications











