»   » ಮದುವೆ ಮನೆ ಅಪ್ಪಟ ಸ್ವಮೇಕ್ ಚಿತ್ರ: ಗಣೇಶ್

ಮದುವೆ ಮನೆ ಅಪ್ಪಟ ಸ್ವಮೇಕ್ ಚಿತ್ರ: ಗಣೇಶ್

Posted By:
Subscribe to Filmibeat Kannada

'ಮದುವೆ ಮನೆ' ಅಪ್ಪಟ ಸ್ವಮೇಕ್ ಚಿತ್ರ ಎನ್ನುತ್ತಿದ್ದಾರೆ ಗೋಲ್ಡನ್ ಸ್ಟಾರ್ ಗಣೇಶ್. ಬಾಲಿವುಡ್ ನ ಅತ್ಯಂತ ಯಶಸ್ವಿ ಚಿತ್ರ 'ದಿಲ್ ವಾಲೆ ದುಲ್ಹನಿಯಾ ಲೇಜಾಯೇಂಗೆ'(ಡಿಡಿಎಲ್ ಜೆ) ಚಿತ್ರದ ಕನ್ನಡ ಅವತರಣೆಕೆಯೆ 'ಮದುವೆ ಮನೆ' ಎಂಬ ಸುದ್ದಿ ಈ ಹಿಂದೆ ಚಾಲ್ತಿಯಲ್ಲಿತ್ತು. ಆದರೀಗ ಗಣೇಶ್ ಆ ಸುದ್ದ್ದಿಯನ್ನು ಸಾರಾಸಗಟಾಗಿ ತಳ್ಳಿಹಾಕಿದ್ದಾರೆ.

'ಮದುವೆ ಮನೆ' ಚಿತ್ರಕತೆ ಸ್ವಂತಂತ್ರವಾಗಿದೆ. ಡಿಡಿಎಲ್ ಜೆ ಚಿತ್ರಕ್ಕೂ ನಮ್ಮ 'ಮದುವೆ ಮನೆ' ಗೂ ಯಾವುದೇ ಸಂಬಂಧವಿಲ್ಲ. ಇದು ಡಿಡಿಎಲ್ ಜೆ ಚಿತ್ರದ ರೀಮೇಕ್ ಅಲ್ಲ ಎಂದು ಗೋಲ್ಡನ್ ಸ್ಟಾರ್ ಗಣೇಶ್ ಸ್ಪಷ್ಟಪಡಿಸಿದ್ದಾರೆ. ಕಿರುತೆರೆಯಲ್ಲಿ ಹೆಸರು ಮಾಡಿರುವ ಸುನಿಲ್ ಕುಮಾರ್ ಸಿಂಗ್ 'ಮದುವೆ ಮನೆ'ಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಚಿತ್ರವನ್ನು ನಿರ್ದೇಶಿಸುವ ಅವಕಾಶ ಸಿಕ್ಕಿದ್ದಕ್ಕೆ ತುಂಬ ಖುಷಿಯಾಗುತ್ತಿದೆ. ಯುವ ನಿರ್ದೇಶಕರನ್ನು ಪ್ರೋತ್ಸಾಹಿಸುವುದರಿಂದ ಅವರಲ್ಲಿನ ತಾಜಾ ಪ್ರತಿಭೆ ಹೊರಹೊಮ್ಮುತ್ತದೆ ಎನ್ನ್ನುತ್ತಾರೆ ಸುನಿಲ್ ಕುಮಾರ್ ಸಿಂಗ್. ಕತೆ, ಚಿತ್ರಕತೆ, ಸಂಭಾಷಣೆಯ ಜವಾಬ್ದಾರಿಯನ್ನು ಅವರು ಹೊತ್ತಿದ್ದಾರೆ.

ಉಳಿದಂತೆ ಛಾಯಾಗ್ರಹಣದ ಜವಾಬ್ದಾರಿಯನ್ನು ಶೇಖರ್ ಚಂದ್ರ ಅವರ ಹೆಗಲಿಗೆ ಹೊರಿಸಲಾಗಿದ್ದು ಪಿ ಆರ್ ಸೌಂದರ್ ರಾಜ ಸಂಕಲನ 'ಮದುವೆ ಮನೆ' ಚಿತ್ರಕ್ಕಿದೆ. ಚಿತ್ರವನ್ನು ನಿರ್ಮಿಸುತ್ತಿರುವವರು ಯಜಮಾನ' ಮತ್ತು 'ಹುಚ್ಚ' ಖ್ಯಾತಿಯ ಎಚ್ ಎ ರಹಮಾನ್.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada