ಸಂಜು ವೆಡ್ಸ್ ಗೀತಾ ವೀಕ್ಷಿಸಿದ ನಾರಾಯಣ ಮೂರ್ತಿ ದಂಪತಿ
ರಮ್ಯಾ ಮತ್ತು ಶ್ರೀನಗರ ಕಿಟ್ಟಿ ಮುಖ್ಯಭೂಮಿಕೆಯಲ್ಲಿರುವ 'ಸಂಜು ವೆಡ್ಸ್ ಗೀತಾ' ಚಿತ್ರವನ್ನು ಎನ್ ಆರ್ ನಾರಾಯಣ ಮೂರ್ತಿ ಹಾಗೂ ಸುಧಾ ಮೂರ್ತಿ ವೀಕ್ಷಿಸಿ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಸಂತಸವನ್ನು ರಮ್ಯಾ ತನ್ನ ಓದುಗರೊಂದಿಗೆ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಪ್ರೇಮಕಥಾ ಹಂದರದ ಈ ಚಿತ್ರದಲ್ಲಿ ಸಂಗೀತ ಪ್ರಮುಖ ಆಕರ್ಷಣೆ. ಶ್ರೀನಗರ ಕಿಟ್ಟಿ ಅವರ ವೃತ್ತಿ ಜೀವನದಲ್ಲಿ ಸಂಜು ವೆಡ್ಸ್ ಗೀತಾ ಚಿತ್ರ ಉತ್ತಮ ಬ್ರೇಕ್ ನೀಡಿದೆ. ಎಲ್ಲಡೆಯಿಂದಲೂ ಚಿತ್ರದ ಬಗ್ಗೆ ಮೆಚ್ಚುಗೆ ಮಾತುಗಳು ವ್ಯಕ್ತವಾಗುತ್ತಿವೆ. ನಾರಾಯಣ ಮೂರ್ತಿ ದಂಪತಿಗಳು ಈ ಚಿತ್ರ ನೋಡಿರುವುದು ರಮ್ಯಾ ಹಾಗೂ ಚಿತ್ರತಂಡದಲ್ಲಿ ಹೊಸ ಹುರುಪಿಗೆ ಕಾರಣವಾಗಿದೆ.
ಮೂಲಗಳ ಪ್ರಕಾರ ಬೆಂಗಳೂರು, ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ ಪ್ರದೇಶದ ವಿತರಣೆ ಹಕ್ಕುಗಳು ರು.1.50 ಕೋಟಿಗೆ ಮಾರಾಟವಾಗಿವೆ. ದರ್ಶನ್ ಅವರ ಪ್ರಿನ್ಸ್ ಹಾಗೂ ಸುದೀಪ್ ಕೆಂಪೇಗೌಡ ಚಿತ್ರಗಳ ಪ್ರಬಲ ಸ್ಪರ್ಧೆಯ ನಡುವೆಯೂ 'ಸಂಜು ವೆಡ್ಸ್ ಗೀತಾ' ಚಿತ್ರ ಮುನ್ನುಗ್ಗುತ್ತಿರುವುದ್ದು, ನಾಗಶೇಖರ್ ನಿರ್ದೇಶನದ ಬಗ್ಗೆ ಪ್ರಶಂಸೆ ವ್ಯಕ್ತವಾಗಿದೆ.


Click it and Unblock the Notifications











