»   » ನ್ಯೂಯಾರ್ಕ್ ನಲ್ಲಿ ಪ್ರಜ್ವಲ್ ಸಿನಿಮಾ ಅಧ್ಯಯನ

ನ್ಯೂಯಾರ್ಕ್ ನಲ್ಲಿ ಪ್ರಜ್ವಲ್ ಸಿನಿಮಾ ಅಧ್ಯಯನ

Posted By:
Subscribe to Filmibeat Kannada

ಚಿತ್ರ ನಿರ್ಮಾಣದ ತಂತ್ರಗಳನ್ನು ಮತ್ತಷ್ಟು ಆಳವಾಗಿ ಅಧ್ಯಯನ ಮಾಡಲು ಪ್ರಜ್ವಲ್ ದೇವರಾಜ್ ತೀರ್ಮಾನಿಸಿದ್ದಾರೆ. ಇದಕ್ಕಾಗಿ ಅವರು ಶೀಘ್ರದಲ್ಲೆ ನ್ಯೂಯಾರ್ಕ್ ವಿಮಾನ ಹತ್ತುವುದು ಖಾತ್ರಿಯಾಗಿದೆ. ನ್ಯೂಯಾರ್ಕ್ ಫಿಲ್ಮ್ ಇನಿಸ್ಟಿಟ್ಯೂಟ್ ನಲ್ಲಿ ಅಲ್ಪಾವಧಿ ಕೋರ್ಸ ಮುಗಿಸಿಕೊಂಡು ಪುನಃ ಕರ್ನಾಟಕಕ್ಕೆ ವಾಪಸ್ಸಾಗಲಿದ್ದಾರೆ ಪ್ರಜ್ವಲ್ ದೇವರಾಜ್.

ಡೈನಮಿಕ್ ಸ್ಟಾರ್ ದೇವರಾಜ್ ಇದೇ ವರ್ಷ ಚಿತ್ರವೊಂದನ್ನು ಕೈಗೆತ್ತಿಕೊಂಡಿದ್ದು, ಅದರ ನಿರ್ಮಾಣ ಮತ್ತು ನಿರ್ದೇಶನದ ಜವಾಬ್ದಾರಿಯನ್ನು ಹೊತ್ತಿರುವುದು ವಿಶೇಷ. ಆ ಚಿತ್ರದ ನಾಯಕ ನಟ ಮತ್ತ್ಯಾರು ಅಲ್ಲ ಪ್ರಜ್ವಲ್ ದೇವರಾಜ್ ಎಂಬುದು ನಿಮ್ಮ ಗಮನಕ್ಕಿರಲಿ. ಚಿತ್ರ ನಿರ್ಮಾಣದ ಬಗ್ಗೆ ಸಂಪೂರ್ಣ ಅರಿವಿರಬೇಕು. ಅದಕ್ಕಾಗಿ ತಾನು ನ್ಯೂಯಾರ್ಕ್ ಫಿಲ್ಮ್ ಇನಿಸ್ಟಿಟ್ಯೂಟ್ ನಲ್ಲಿ ಕಲಿಯಲು ಹೊರಟಿದ್ದೇನೆ ಎನ್ನ್ನುತ್ತಾರೆ ಪ್ರಜ್ವಲ್.

'ಸಿಕ್ಸರ್' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರಜ್ವಲ್ ಪರಿಚಯವಾಗಿದ್ದರು. ಬಳಿಕ ಮೆರವಣಿಗೆ, ಗೆಳೆಯ, ಜೀವಾ, ಗುಲಾಮ, ಗಂಗೆ ಬಾರೆ ತುಂಗೆ ಬಾರೆ, ಕೆಂಚ ಚಿತ್ರಗಳಲ್ಲಿ ಅಭಿನಯಿಸಿದ್ದರು. ಪ್ರಜ್ವಲ್, ಐಂದ್ರಿತಾ ನಟನೆಯ ಹೊಚ್ಚಹೊಸ ಚಿತ್ರ 'ನನ್ನವನು' ಇದೇ ಏಪ್ರಿಲ್ 16ರಂದು ತೆರೆಕಾಣಲಿದೆ.

ಪ್ರಜ್ವಲ್ ನಾಯಕ ನಟನಾಗಿ ಅಭಿನಯಿಸಿರುವ 'ಸೂಪರ್ ಮ್ಯಾನ್' ಚಿತ್ರ ಸೇರಿದಂತೆ 'ಜೀವಾ' ಮತ್ತು 'ಕೆಂಚ' ಚಿತ್ರಗಳ ಬಗ್ಗೆ ಅವರಿಗೆ ಕೊಂಚ ಬೇಸರವಿದೆಯಂತೆ. 'ನನ್ನವನು' ಚಿತ್ರದ ಪಾತ್ರಕ್ಕಾಗಿ ಹತ್ತು ಕೆ.ಜಿ ತೂಕ ಇಳಿಸಿಕೊಂಡದ್ದು ಇದೆ. ಇದೇ ಏಪ್ರಿಲ್ ನಲ್ಲಿ ಬಿಬಿಎಂ ಅಂತಿಮ ವರ್ಷದ ಪರೀಕ್ಷೆಯನ್ನು ಬರೆಯಲಿದ್ದಾರೆ ಪ್ರಜ್ವಲ್.

ದೇವರಾಜ್ ಈಗಾಗಲೆ ಸಿದ್ಧಪಡಿಸಿರುವ ಚಿತ್ರಕತೆ ಬಗ್ಗೆ ಪ್ರಜ್ವಲ್ ಗೆ ಎಲ್ಲಿಲ್ಲದ ಅಕ್ಕರೆಯಿದೆ. ಇದೇ ವರ್ಷ ದೇವರಾಜ್ ಈ ಚಿತ್ರವನ್ನು ನಿರ್ಮಿಸಿ ಅಕ್ಷನ್ ಕಟ್ ಹೇಳಲಿದ್ದಾರೆ. ಅದಕ್ಕಾಗಿ ಚಿತ್ರ ನಿರ್ಮಾಣದ ತಂತ್ರಗಾರಿಕೆಯನ್ನು ಕಲಿಯಲು ನ್ಯೂಯಾರ್ಕ್ ಗೆ ತೆರಳುತ್ತಿರುವುದಾಗಿ ಪ್ರಜ್ವಲ್ ತಿಳಿಸಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada