»   » ರಾಮು ನಿರ್ಮಾಣದಲ್ಲಿ ಶಿವಣ್ಣನ ಹೊಸ ಚಿತ್ರ ಸಿಂಹ

ರಾಮು ನಿರ್ಮಾಣದಲ್ಲಿ ಶಿವಣ್ಣನ ಹೊಸ ಚಿತ್ರ ಸಿಂಹ

Posted By:
Subscribe to Filmibeat Kannada

ಹನ್ನೊಂದು ವರ್ಷಗಳ ಬಳಿಕ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ನಿರ್ಮಾಪಕ ರಾಮು ಮತ್ತು ನಿರ್ದೇಶಕ ಓಂಪ್ರಕಾಶ್ ರಾವ್ ಮತ್ತೆ ಒಂದಾಗುತ್ತಿದ್ದಾರೆ. 'ಎ.ಕೆ.47' ಚಿತ್ರ ಈ ತ್ರಿಮೂರ್ತಿಗಳ ಕಾಂಬಿನೇಷನ್‌ನಲ್ಲಿ ಬಂದ ಕೊನೆಯ ಚಿತ್ರ. ಈಗ ಇವರೆಲ್ಲಾ ಮತ್ತೆ ಒಂದಾಗಿ 'ಸಿಂಹ' ಎಂಬ ಹೊಸ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ.

ಈಗಾಗಲೆ ಸೆಂಚುರಿ ಬಾರಿಸಿರುವ ಶಿವಣ್ಣ ಈಗ 'ಸಿಂಹ' ಚಿತ್ರದ ಮೂಲಕ 102 ರನ್‌ಗಳನ್ನು ಕಲೆಹಾಕಿದಂತಾಗುತ್ತದೆ! ರಾಘವ ಲೋಕಿ ನಿರ್ದೇಶಿಸಲಿರುವ ಶಿವಣ್ಣನ 101ನೇ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. 'ಜೋಗಯ್ಯ' ಚಿತ್ರ ಶಿವಣ್ಣನ ನೂರನೇ ಚಿತ್ರ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ.

ಇನ್ನು ಸಿಂಹ ಚಿತ್ರದ ವಿಚಾರಕ್ಕೆ ಬಂದರೆ, ಇದೊಂದು ಪಕ್ಕಾ ಕಮರ್ಷಿಯಲ್ ಚಿತ್ರವಾಗಿದ್ದು ಗ್ರಾಮೀಣ ನೇಪಥ್ಯದಲ್ಲಿ ಸಾಗುತ್ತದೆ. ಚಿತ್ರದ ನಾಯಕನಿಗೆ ತಾನು ಏನು ಎಂಬುದು ಗೊತ್ತಿರುವುದಿಲ್ಲ. ಆತ ಗ್ರಾಮದ ಮುಖಂಡ. ಸಮಾಜಕ್ಕೆ ತನ್ನ ಅವಶ್ಯಕತೆ ಎಷ್ಟಿದೆ ಎಂದು ಗೊತ್ತಾಗುತ್ತಿದ್ದಂತೆ ಆತ 'ಸಿಂಹ'ವತಾರ ತಾಳುತ್ತಾನೆ ಎಂದು ಚಿತ್ರದ ನಿರ್ದೇಶಕ ಓಂ ಪ್ರಕಾಶ್ ವಿವರ ನೀಡಿದ್ದಾರೆ.

ಚಿತ್ರದ ನಾಯಕಿ, ಪೋಷಕ ಪಾತ್ರಗಳು, ತಂತ್ರಜ್ಞರ ಆಯ್ಕೆ ಇನ್ನಷ್ಟೆ ನಡೆಯಬೇಕಾಗಿದೆ. 2011ಕ್ಕೆ 'ಸಿಂಹ' ಸೆಟ್ಟೇರಲಿದೆ ಎನ್ನುತ್ತವೆ ಮೂಲಗಳು. ರಾಘವಲೋಕಿ ನಿರ್ದೇಶನದ 101ನೇ ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಗಿಯುತ್ತಿದ್ದಂತೆ 'ಸಿಂಹ' ಭೇಟೆ ಆರಂಭವಾಗಲಿದೆಯಂತೆ. ಒಟ್ಟಿನಲ್ಲಿ ರಾಮು ಚಿತ್ರ ಅಂದರೆ ಲೆಕ್ಕಾಚಾರ ಕೋಟಿಗಳಲ್ಲೇ ಇರುತ್ತದೆ ಎಂಬುದು ವಿಶೇಷ.

English summary
Hat Trick Hero Shivarajkumar new flick titled as "Simha". After eleven years long gap Shivarajkumar, producer Ramu and director Om Prakash Rao combine together in this movie. The trios last movie was "A.K.47". While other cast and crew details of "Simha" are yet to be finalized.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada