»   » ಮೈಸೂರಿನಲ್ಲಿ ವರನಟ ರಾಜ್ ಕಂಚಿನ ಪ್ರತಿಮೆ

ಮೈಸೂರಿನಲ್ಲಿ ವರನಟ ರಾಜ್ ಕಂಚಿನ ಪ್ರತಿಮೆ

Posted By:
Subscribe to Filmibeat Kannada

ಮೈಸೂರು ನಗರ ಪಾಲಿಕೆ ವರನಟ ಡಾ.ರಾಜ್ ಕುಮಾರ್ ಅವರ ಪ್ರತಿಮೆಯನ್ನು ನಿರ್ಮಿಸುತ್ತಿದೆ. ಆರುವರೆ ಅಡಿ ಎತ್ತರದ ಪ್ರತಿಮೆ ನಿರ್ಮಾಣ ಕಾರ್ಯ ಇಲವಾಲದ ಪ್ರತಿಭಾ ಸ್ಟುಡಿಯೋದಲ್ಲಿ ಭರದಿಂದ ಸಾಗಿದೆ. ಅಂದಾಜು ರು.8ಲಕ್ಷ ವೆಚ್ಚದಲ್ಲಿ ಪ್ರತಿಮೆಯನ್ನು ನಿರ್ಮಿಸಲಾಗುತ್ತಿದೆ ಎಂದು ಮೈಸೂರು ಮೇಯರ್ ಸಂದೇಶ್ ಸ್ವಾಮಿ ತಿಳಿಸಿದ್ದಾರೆ.

ಅಣ್ಣಾವ್ರ ಕಂಚಿನ ಪ್ರತಿಮೆ ನಿರ್ಮಾಣದ ಜವಾಬ್ದಾರಿಯನ್ನು ಇಲವಾಲದ ಪ್ರತಿಭಾ ಸ್ಟುಡಿಯೋಗೆ ನೀಡಲಾಗಿದೆ. ಕಂಚಿನ ಪ್ರತಿಮೆಗೂ ಮೊದಲು ಮಾದರಿಗಾಗಿ ಮಣ್ಣಿನ ಪ್ರತಿಮೆ ತಯಾರಿಸಲಾಗಿದೆ. ಪಾಲಿಕೆಯವರು ಇತ್ತೀಚೆಗೆ ಸ್ಟುಡಿಯೋಗೆ ಭೇಟಿ ನೀಡಿ ಪ್ರತಿಮೆಯಲ್ಲಿ ಸಣ್ಣಪುಟ್ಟ ಬದಲಾವಣೆ ಮಾಡಲು ಸೂಚಿಸಿದ್ದಾರೆ.

ಪ್ರತಿಮೆ ನಿರ್ಮಾಣದ ನಂತರ ಮೈಸೂರಿನ ಡಾ.ರಾಜ್ ಕುಮಾರ್ ಉದ್ಯಾನದಲ್ಲಿ ಸ್ಥಾಪಿಸಲಾಗುತ್ತದೆ. ಲೋಹಶಿಲ್ಪಿ ಪ್ರಮೋದಿನಿ ದೇಶಪಾಂಡೆ ಪ್ರತಿಮೆಯನ್ನು ನಿರ್ಮಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಪಾಲಿಕೆ ಆಯುಕ್ತ ಕೆ ಎಸ್ ರಾಯ್ಕರ್, ಪಾಲಿಕೆ ಸದಸ್ಯರಾದ ಎಲ್ ನಾಗೇಂದ್ರ, ಆರ್ ಲಿಂಗಪ್ಪ, ಎಂಡಿ ಪಾರ್ಥಸಾರಥಿ ಮುಂತಾದವರು ಉಪಸ್ಥಿತರಿದ್ದರು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada