»   » ತೆರೆಮರೆಗೆ ಸರಿದ ಖ್ಯಾತ ಸಿನಿಮಾ ತಾರೆ ಸುಜಾತಾ

ತೆರೆಮರೆಗೆ ಸರಿದ ಖ್ಯಾತ ಸಿನಿಮಾ ತಾರೆ ಸುಜಾತಾ

Posted By:
Subscribe to Filmibeat Kannada
Actress Sujatha
ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಚಿತ್ರಗಳ ತಾರೆ ಸುಜಾತಾ(58) ಅವರು ಚೆನ್ನೈನ ಸ್ವಗೃಹದಲ್ಲಿ ಬುಧವಾರ ಚಿರನಿದ್ರೆಗೆ ಜಾರಿದ್ದಾರೆ. ಕೆಲ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಹೃದಯಾಘಾತದಿಂದ ಕಣ್ಮುಚ್ಚಿದ್ದಾರೆ. ತಮ್ಮ ವೈವಿಧ್ಯಮಯ ಪಾತ್ರಗಳಿಂದ ಸುಜಾತಾ ಅವರು ಮನೆಮಾತಾಗಿದ್ದರು.

ಅನಾರೋಗ್ಯದ ಕಾರಣ ಕಳೆದ ಐದು ವರ್ಷಗಳಿಂದ ಅವರು ಚಿತ್ರರಂಗದಿಂದ ದೂರ ಉಳಿದಿದ್ದರು. ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಅವರು ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿದ್ದರು. ಕಳೆದ ತಿಂಗಳು ಹೃದಯಕ್ಕೆ ಪೇಸ್ ಮೇಕರ್ ಅಳವಡಿಸುವ ಚಿಕಿತ್ಸೆಗೆ ಸುಜಾತಾ ಒಳಗಾಗಿದ್ದರು. ಅವರು ಪತಿ ಜಯಕರ್ ಹಾಗೂ ಮಕ್ಕಳಾದ ಸಜಿತ್ ಮತ್ತ್ತು ದಿವ್ಯಾ ಅವರನ್ನು ಅಗಲಿದ್ದಾರೆ.ಇಂದು (ಏ.7) ಅವರ ಅಂತ್ಯಕ್ರಿಯೆ ನಡೆಯಲಿವೆ.

ಎಪ್ಪತ್ತು ಹಾಗೂ ಎಂಬತ್ತರ ದಶಕದಲ್ಲಿ ಸುಜಾತಾ ತಮ್ಮ ಚಿತ್ರಗಳ ಮೂಲಕ ಹೊಸ ಅಲೆ ಎಬ್ಬಿಸಿದ್ದರು. ಖ್ಯಾತ ನಿರ್ದೇಶಕ ಕೆ ಬಾಲಚಂದರ್ ಅವರು ತಮಿಳು ಚಿತ್ರ 'ಅವಳ್ ಒರು ತೊಡರ್ ಕಥೈ' ಚಿತ್ರದ ಮೂಲಕ ಸುಜಾತಾ ಅವರನ್ನು ಬೆಳ್ಳಿತೆರೆಗೆ ಪರಿಚಯಿಸಿದ್ದರು. ಸರಿಸುಮಾರು ಸುತಾಜಾ ಅವರು 300 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಕನ್ನಡದಲ್ಲಿ ವಿಷ್ಣುವರ್ಧನ್, ಅನಂತನಾಗ್, ಲೋಕೇಶ್, ಮುಂತಾದವರೊಂದಿಗೆ ಸುಜಾತಾ ಅವರು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ತುತ್ತಾ ಮುತ್ತಾ, ನೀಲಕಂಠ, ಪ್ರೇಮ ಸಾಕ್ಷಿ, ನನ್ನ ದೇವರು ಚಿತ್ರಗಳಲ್ಲಿ ಸುಜಾತಾ ಪೋಷಕ ಪಾತ್ರದಲ್ಲಿ ಅಭಿನಯಿಸಿದ್ದರು. ಪಾತ್ರ ಎಂಥಹದ್ದೇ ಆಗಿರಲಿ ಸುಜಾತಾ ಅದಕ್ಕೆ ಜೀವ ತುಂಬುತ್ತಿದ್ದರು.

English summary
Kannada, Telugu, Tamil, Malayalam and Hindi popular actress Sujatha died in the Chennai due to a cardiac arrest on Wednesday. She acted in Kannada films like Tutta Mutta, Neela Kantha, Prema Sakshi and Nanna Devaru. Also she shares screen in Kannada with actors Vishnuvardhan, Anant Nag and Lokesh.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada