»   »  ಇದು ಸುಧಾರಾಣಿ ಮತ್ತು ಮಗಳ 'ಚಕ್ರವ್ಯೂಹ'!

ಇದು ಸುಧಾರಾಣಿ ಮತ್ತು ಮಗಳ 'ಚಕ್ರವ್ಯೂಹ'!

Subscribe to Filmibeat Kannada
Sudharani and Nidhi in Idhu Chakravyuha
ನಟಿ ಸುಧಾರಾಣಿ ತಮ್ಮ ಮಗಳು ನಿಧಿಯೊಂದಿಗೆ ಮತ್ತೆ ಬೆಳ್ಳಿತೆರೆಗೆ ಆಗಮಿಸುತ್ತಿದ್ದಾರೆ. 1986ರಲ್ಲಿ ಸುಧಾರಾಣಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದಾಗ ಅವರಿಗೆ ಆಗ 14 ವರ್ಷ ವಯಸ್ಸು. ಈಗ ಅವರ ಮಗಳು ನಿಧಿ 7 ವರ್ಷಕ್ಕೇ ಚಿತ್ರರಂಗಕ್ಕೆ ಅಡಿಯಿಡುತ್ತಿದ್ದಾರೆ.

ಚಿತ್ರದ ಹೆಸರು ಇದು ಚಕ್ರವ್ಯೂಹ ಎಂದು. ಚಿತ್ರದಲ್ಲೂ ಸುಧಾರಾಣಿ ಮತ್ತು ನಿಧಿ ಅಮ್ಮ, ಮಗಳ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ನಾಯಕ ನಟ ಶಶಿಕುಮಾರ್. ಚಿತ್ರದಲ್ಲಿ ಸುಧಾರಾಣಿ ಮತ್ತು ನಿಧಿ ಅವರನ್ನು ಅಪಹರಿಸಲಾಗುತ್ತದೆ. ಆತಂಕ ಮತ್ತು ರೋಮಾಂಚಗಳ ನಡುವೆ ಕತೆ ಸಾಗುತ್ತದೆ.

ಅದಾಗಲೇ ಎಸ್ಸೆಸ್ಸೆಲ್ಸಿ ಮುಗಿಸಿಕೊಂಡು ಬಂದಿದ್ದ ಸುಧಾರಾಣಿ ಚಿತ್ರರಂಗಕ್ಕೆ ಪ್ರವೇಶಿಸಿದ್ದು 'ಆನಂದ್' ಚಿತ್ರದ ಮೂಲಕ. ಶಿವರಾಜ್ ಕುಮಾರ್ ನಟನೆಯ ಮೊದಲ ಚಿತ್ರ ಅದು. ನಂತರ ಸುಧಾರಾಣಿ ಮತ್ತು ಶಿವರಾಜ್ ಕುಮಾರ್ ಜೋಡಿಯ ಚಿತ್ರಗಳು ಜನಪ್ರಿಯವಾಗಿದ್ದವು. ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಸುಧಾರಾಣಿ ತಮ್ಮದೇ ಆದ ಅಭಿನಯದ ಮೂಲಕ ಮನೆಮಾತಾಗಿದ್ದರು.

(ದಟ್ಸ್ ಕನ್ನಡ ಚಿತ್ರವಾರ್ತೆ)

ಗೆಜ್ಜೆ ಹಾಡಿಗೆ ಹೆಜ್ಜೆ ಹಾಕಿದ ಸುಧಾರಾಣಿ, ಅನು
ಜಗ್ಗೇಶ್ ವಿರುದ್ಧ ಸಿಡಿದೆದ್ದ ಅಂಬಿ ಅಭಿಮಾನಿಗಳು
ಸೆನ್ಸಾರ್ ಮಂಡಳಿಗೆ ಚಳ್ಳೆಹಣ್ಣು ತಿನ್ನಿಸಿದ ಹೊಡಿಮಗ

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada