»   » ಕಾಳಸಂತೆಯಲ್ಲಿ ನಿತ್ಯಾನಂದ ಸಿಡಿ ಭರ್ಜರಿ ಹಿಟ್!

ಕಾಳಸಂತೆಯಲ್ಲಿ ನಿತ್ಯಾನಂದ ಸಿಡಿ ಭರ್ಜರಿ ಹಿಟ್!

Posted By:
Subscribe to Filmibeat Kannada

ಸ್ವಾಮಿ ನಿತ್ಯಾನಂದನ ಲೈಂಗಿಕ ಸಿಡಿ ಕಾಳಸಂತೆಯಲ್ಲಿ ಭರ್ಜರಿಯಾಗಿ ಬಿಕರಿಯಾಗುತ್ತಿದೆ. ಬೆಂಗಳೂರು ಉಪ್ಪಾರಪೇಟೆ ಪೊಲೀಸ್ ಠಾಣೆಯ ಸಮೀಪದಲ್ಲೆ ಇರುವ ಹಾಂಕಾಂಗ್ ಬಜಾರ್ ನಲ್ಲಿ ನಿತ್ಯಾನಂದ ರಾಸಲೀಲೆ ಸಿಡಿಗಳು ಬಿಸಿ ದೋಸೆಯಂತೆ ಮಾರಾಟವಾಗುತ್ತಿವೆ. ಅಶ್ಲೀಲ ಸಿಡಿಗಳ ಪಟ್ಟಿಯಲ್ಲಿ ಸ್ವಾಮಿ ನಿತ್ಯಾನಂದನ ಸಿಡಿಗೆ ಎಲ್ಲಿಲ್ಲದ ಬೇಡಿಕೆ ಉಂಟಾಗಿದೆ ಎನ್ನುತ್ತವೆ ಮೂಲಗಳು.

ಸಿಡಿಯಲ್ಲಿ ಸೆನ್ಸಾರ್ ಮಾಡದನಿತ್ಯಾನಂದ ಮತ್ತು ರಂಜಿತಾ ರಾಸಲೀಲೆಗಳು ಇವೆಯಂತೆ. ನಿತ್ಯಾನಂದ ಮತ್ತು ರಂಜಿತಾರ ಮೂಲ ಸಿಡಿ ಇದು ಎಂಬ ಪ್ರಚಾರವನ್ನು ನೀಡಲಾಗಿದೆ. ಹಾಗಾಗಿ ಈ ಸಿಡಿಗೆ ಎಲ್ಲಿಲ್ಲದ ಬೇಡಿಕೆ. ಸಿಡಿಯ ಬೆಲೆ ಎಷ್ಟು ಗೊತ್ತೆ? ಕಾಳಸಂತೆಯಲ್ಲಿ ರು.1000ಗಳಿಗೆ ಮಾರಾಟ ಮಾಡಲಾಗುತ್ತಿದೆ. ಗುರುತು ಪರಿಚಯ ಇಲ್ಲದವರಿಗೆ ಸಿಡಿ ಸಿಗುವುದು ಕಷ್ಟ. ಖಾಯಂ ಗಿರಾಕಿಗಳಾದರೆ ಮಾತ್ರ ಸ್ವಾಮಿ ನಿತ್ಯಾನಂದ ರಾಸಲೀಲೆ ಸಿಡಿಯನ್ನು ಸುಲಭವಾಗಿ ಗಿಟ್ಟಿಸಬಹುದು.

ಸ್ವಾಮಿ ನಿತ್ಯಾನಂದನ ಸಿಡಿಗಳನ್ನು ತಮಿಳುನಾಡಿನಿಂದ ತಂದು ಬೆಂಗಳೂರಿನಲ್ಲಿ ಮಾರಾಟ ಮಾಡಲಾಗುತ್ತಿದೆ. ಮಂಗಳವಾರ ಪೊಲೀಸರು ಹಾಂಕಾಂಗ್ ಬಜಾರ್ ಮೇಲೆ ದಾಳಿ ಮಾಡಿದಾಗ ರು.3 ಲಕ್ಷ ಬೆಲೆಬಾಳುವ 3,000 ಸಿಡಿಗಳು ಪತ್ತೆಯಾದವು ಎಂದು ಉಪ್ಪರಪೇಟೆ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಆರ್ ಪ್ರಕಾಶ್ ವಿವರ ನೀಡಿದ್ದಾರೆ.ಈ ದಂಧೆಯಲ್ಲಿ ಬಾಗಿಯಾಗಿದ್ದ ಒಂಭತ್ತು ಮಂದಿಯನ್ನು ಪೊಲೀಸರು ಬಂಧಿಸಿದ್ದಾಗಿ ಅವರು ತಿಳಿಸಿದರು.

ತಮಿಳುನಾಡು ಮತ್ತು ಆಂಧ್ರಪ್ರದೇಶದಿಂದ ತರಲಾಗಿರುವ ಈ ಸಿಡಿಗಳನ್ನು ಬೆಂಗಳೂರಿನ ನಾನಾ ಕಡೆ ಮಾರಾಟ ಮಾಡಲಾಗುತ್ತಿದೆ ಎಂಬ ಅಂಶ ಪೊಲೀಸರ ವಿಚಾರಣೆ ವೇಳೆ ಗೊತ್ತಾಗಿದೆ. ಮಂಗಳವಾರ ನಡೆದ ದಾಳಿಯಲ್ಲಿ ಹಲವಾರು ಅಶ್ಲೀಲ ಸಿಡಿಗಳು ಪತ್ತೆಯಾಗಿವೆ ಆದರೆ ಇದರಲ್ಲಿ ಸ್ವಾಮಿ ನಿತ್ಯಾನಂದನ ಸಿಡಿ ಇರಲಿಲ್ಲ ಎಂದು ಉಪ್ಪಾರಪೇಟೆ ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಶೀಘ್ರದಲ್ಲೆ ನಿತ್ಯಾನಂದನ ಸೆಕ್ಸ್ ಸಿಡಿ ಮಾರುವವರನ್ನು ಬಂಧಿಸುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada