»   »  ಮೇಲುಕೋಟೆಯಲ್ಲಿ ‘ಸ್ವರಾಂಜಲಿ’

ಮೇಲುಕೋಟೆಯಲ್ಲಿ ‘ಸ್ವರಾಂಜಲಿ’

Posted By:
Subscribe to Filmibeat Kannada

ಶ್ರೀವಿದ್ಯಾ ಫಿಲಂಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ 'ಸ್ವರಾಂಜಲಿ" ಚಿತ್ರದ ಹಾಡೊಂದು ಚೆಲುವ ನಾರಾಯಣನ ಚಂದದೂರಾದ ಮೇಲುಕೋಟೆಯಲ್ಲಿ ಚಿತ್ರೀಕರಣಗೊಂಡಿದೆ. ಶ್ಯಾಂ ಅವರು ರಚಿಸಿರುವ 'ಸುಮಸರಿಗಮ ಹಾಡನ್ನು ಹಾಡಿದೆಯಾ-ಘಮಘಮಘಮ ಗಂಧವ ಸೂಸುವೆಯ್ಯಾ' ಎಂಬ ಗೀತೆ ಈ ಪುರಾಣ ಪ್ರಸಿದ್ಧ ನಗರದಲ್ಲಿ ಚಿತ್ರೀಕರಣಗೊಂಡಿದ್ದು, ನಾಯಕ ನಟ ರಮಣ ಹಾಗೂ ನಾಯಕಿ ರಶ್ಮಿ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ.

ಈ ಹಾಡಿನ ಚಿತ್ರೀಕರಣದೊಂದಿಗೆ ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ ಎಂದು ಚಿತ್ರದ ನಿರ್ಮಾಪಕರು ಹಾಗೂ ನಿರ್ದೇಶಕ ಎಂ.ಎಸ್.ಶ್ರೀನಿವಾಸ್ ತಿಳಿಸಿದ್ದಾರೆ. ನಿರ್ದೇಶಕರೇ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿರುವ ಈ ಚಿತ್ರಕ್ಕೆ ಬಿ.ಎಲ್.ಬಾಬು ಕ್ಯಾಮೆರಾ, ಚಂದ್ರಕಾಂತ್ ಸಂಗೀತ, ಕೌರವ ವೆಂಕಟೇಶ್ ಸಾಹಸ, ಸಂಜೀವ್‌ರೆಡ್ಡಿ ಸಂಕಲನ, ಸತೀಶ್ ನೃತ್ಯ ಹಾಗೂ ಚೆನ್ನಯ್ಯ ಅವರ ನಿರ್ಮಾಣ ನಿರ್ವಹಣೆಯಿದೆ.

ರಮಣ, ರಶ್ಮಿ, ಸ್ಫೂರ್ತಿ, ಶರತ್ ಲೋಹಿತಾಶ್ವ, ಎಂ.ಎಸ್.ಶ್ರೀನಿವಾಸ್, ಸೂರ್ಯಕಿರಣ್, ರಮೇಶ್‌ಭಟ್, ಶೋಭ್‌ರಾಜ್, ಸುಂದರರಾಜ್, ಧರ್ಮ, ಶ್ರೀಧರ್, ಸಿದ್ದರಾಜು ಕಲ್ಮಣ್‌ಕರ್, ಆನಂದರಾಜು ಮುಂತಾದವರು 'ಸ್ವರಾಂಜಲಿ"ಯ ತಾರಾಬಳಗದಲ್ಲಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada