»   »  55ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು

55ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು

Posted By:
Subscribe to Filmibeat Kannada

2007ನೇ ಸಾಲಿನ 55ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಕೇಂದ್ರ ಮಾಹಿತಿ ಮತ್ತು ಪ್ರಚಾರ ಸಚಿವಾಲಯ ಪ್ರಕಟಿಸಿದೆ. ಪ್ರಮುಖ ವಿಭಾಗಗಳಲ್ಲಿ ದಕ್ಷಿಣ ಭಾರತದ ಚಿತ್ರಗಳಿಗೆ ಸಿಂಹಪಾಲು ದಕ್ಕಿದೆ. ಪ್ರಶಸ್ತಿ ಪಡೆದ ಚಿತ್ರಗಳ ಸಂಪೂರ್ಣ ಪಟ್ಟಿ ಹೀಗಿದೆ.

*ಅತ್ಯುತ್ತಮ ಚಿತ್ರ: ಕಾಂಚೀವರಂ(ತಮಿಳು; ನಿರ್ದೇಶಕ ಪ್ರಿಯದರ್ಶನ್)
*ವಿಶೇಷ ತೀರ್ಪುಗಾರರ ಪ್ರಶಸ್ತಿ: ಗಾಂಧಿ ಮೈ ಫಾದರ್ (ಹಿಂದಿ ಇಂಗ್ಲಿಷ್; ನಿರ್ದೇಶಕ ಫಿರೋಜ್ ಅಬ್ಬಾಸ್ ಖಾನ್)
*ಅತ್ಯುತ್ತಮ ನಟಿ: ಉಮಾಶ್ರೀ (ಗುಲಾಬಿ ಟಾಕೀಸ್; ನಿರ್ದೇಶಕ ಗಿರೀಶ್ ಕಾಸರವಳ್ಳಿ)
*ಅತ್ಯುತ್ತಮ ನಟ: ಪ್ರಕಾಶ್ ರೈ (ಕಾಂಚೀವರಂ; ನಿರ್ದೇಶಕ )
*ಅತ್ಯುತ್ತಮ ನಿರ್ದೇಶಕ: ಆಡೂರು ಗೋಪಾಲ ಕೃಷ್ಣನ್ (ಮಲಯಾಳಂ; ನಾಲು ಪೆಣ್ಣುಗಳ್)
*ಅತ್ಯುತ್ತಮ ಪೋಷಕ ನಟ: ದರ್ಶನ್ ಜರೀವಾಲ (ಇಂಗ್ಲಿಷ್ ಮತ್ತು ಹಿಂದಿ; ಗಾಂಧಿ ಮೈ ಫಾದರ್)
*ಅತ್ಯುತ್ತಮ ಪೋಷಕ ನಟಿ: ಶೆಫಾಲಿ ಶಾ(ಇಂಗ್ಲಿಷ್; ದಿ ಲಾಸ್ಟ್ ಇಯರ್)
*ಅತ್ಯುತ್ತಮ ಬಾಲನಟ: ಶರದ್ ಗೋಯೇಕರ್ (ಮರಾಠಿ;ಟಿಂಗ್ಯಾ)
*ಅತ್ಯುತ್ತಮ ಹಿನ್ನೆಲೆ ಗಾಯಕ: ಶಂಕರ್ ಮಹದೇವನ್ (ಹಿಂದಿ; ತಾರೆ ಜಮೀನ್ ಪರ್)
*ಅತ್ಯುತ್ತಮ ಹಿನ್ನೆಲೆ ಗಾಯಕಿ: ಶ್ರೇಯಾ ಘೋಷಾಲ್ (ಹಿಂದಿ; ಜಬ್ ವಿ ಮೆಟ್)
*ಅತ್ಯುತ್ತಮ ಛಾಯಾಗ್ರಹಣ: ಶಂಕರ್ ರಾಮನ್ (ಹಿಂದಿ; ಪ್ರೋಜನ್)
*ಅತ್ಯುತ್ತಮ ಚಿತ್ರಕತೆ: ಫಿರೋಜ್ ಅಬ್ಬಾಸ್ ಖಾನ್ (ಗಾಂಧಿ ಮೈ ಫಾದರ್ )
*ಅತ್ಯುತ್ತಮ ಧ್ವನಿಗ್ರಹಣ: 1971 (ಹಿಂದಿ; ಕುಣಾಲ್ ಶರ್ಮ)
*ಅತ್ಯುತ್ತಮ ಸಂಕಲನ: ನಾಲು ಪೆಣ್ಣುಗಳ್ (ಮಲೆಯಾಳಂ;ಬಿ.ಅಜಿತ್ ಕುಮಾರ್)
*ಅತ್ಯುತ್ತಮ ವಸ್ತ್ರ ವಿನ್ಯಾಸ: ಕೃಷ್ಣಕಾಂತೆ ವಿಲ್ (ಬಂಗಾಳಿ; ರುಮಾಸೇನ್ ಗುಪ್ತ)
*ಅತ್ಯುತ್ತಮ ಕಲಾ ನಿರ್ದೇಶನ: ಓಂ ಶಾಂತಿ ಓಂ (ಹಿಂದಿ; ಸಾಬು ಸಿರಿಲ್)
*ಅತ್ಯುತ್ತಮ ಮೇಕಪ್: ಪರದೇಸಿ (ಮಲೆಯಾಳಂ; ಪಟ್ಟಂ ರಶೀದ್)
*ಅತ್ಯುತ್ತಮ ಸಂಗೀತ ನಿರ್ದೇಶನ: ಒರೇ ಕಡಲ್(ಮಲೆಯಾಳಂ; ಔಸೆಪ್ಪಚ್ಚನ್)
*ಅತ್ಯುತ್ತಮ ಗೀತೆಗಳು: ತಾರೆ ಜಮೀನ್ ಪರ್ (ಹಿಂದಿ; ಪ್ರಸೂನ್ ಜೋಷಿ)
*ಅತ್ಯುತ್ತಮ ಸ್ಪೆಷಲ್ ಎಫೆಕ್ಟ್ಸ್: ಶಿವಾಜಿ (ಮೆಸರ್ಸ್ ಇಂಡಿಯನ್ ಆರ್ಟಿಸ್ಟ್ಸ್, ಚೆನ್ನೈ)
*ಅತ್ಯುತ್ತಮ ನೃತ್ಯ ನಿರ್ದೇಶನ: ಜಬ್ ವಿ ಮೆಟ್ (ಯೇ ಇಷ್ಕ್ ಹಾಯೇ ಬೈಠೇ ಬಿಠಾಯೇ)
*ಅತ್ಯುತ್ತಮ ಹಿಂದಿ ಚಿತ್ರ: 1971 (ನಿರ್ದೇಶಕ ಅಮೃತ್ ಸಾಗರ್)
*ಅತ್ಯುತ್ತಮ ಕನ್ನಡ ಚಿತ್ರ: ಗುಲಾಬಿ ಟಾಕೀಸ್ (ಗಿರೀಶ್ ಕಾಸರವಳ್ಳಿ)
*ಅತ್ಯುತ್ತಮ ಮಲಯಾಳಿ ಚಿತ್ರ: ಒರೇ ಕಡಲ್ (ಶ್ಯಾಮಪ್ರಸಾದ್)
*ಅತ್ಯುತ್ತಮ ಮರಾಠಿ ಚಿತ್ರ: ನಿರೋಪ್ (ಸಚಿನ್ ಕುಂದಾಲ್ಕರ್)
*ಅತ್ಯುತ್ತಮ ತಮಿಳು ಚಿತ್ರ: ಪೆರಿಯಾರ್ (ಜ್ಞಾನ ರಾಜಶೇಖರನ್)
*ಅತ್ಯುತ್ತಮ ಇಂಗ್ಲಿಷ್ ಚಿತ್ರ: ದಿ ಲಾಸ್ಟ್ ಇಯರ್ (ರಿತುಪರ್ಣೋಘೋಷ್)
*ತೆಲುಗು, ಒರಿಯಾ, ಗುಜರಾತಿ, ಅಸ್ಸಾಮಿ ಇತರೆ ಪ್ರಾದೇಶಿಕ ವಿಭಾಗಗಳಲ್ಲಿ ಪ್ರಶಸ್ತಿಗೆ ಅರ್ಹವಾಗುವ ಉತ್ತಮ ಚಿತ್ರಗಳು ಸ್ಪರ್ಧೆಗೆ ಬರಲೇ ಇಲ್ಲ.
*ನಿರ್ದೇಶಕನಿಗೊಬ್ಬನ ಅತ್ಯುತ್ತಮ ಚೊಚ್ಚಲ ಚಿತ್ರಕ್ಕೆ ನೀಡಲಾಗುವ ಇಂದಿರಾಗಾಂಧಿ ಪ್ರಶಸ್ತಿ: ಪ್ರೋಜನ್ (ಹಿಂದಿ; ನಿರ್ದೇಶಕ ಶಿವಾಜಿ ಚಂದ್ರಭೂಷಣ್)
*ಸಂಪೂರ್ಣ ಮನರಂಜನೆ ನೀಡಿದ ಅತ್ಯುತ್ತಮ ಜನಪ್ರಿಯ ಚಿತ್ರ: ಚಕ್ ದೇ (ಹಿಂದಿ; ನಿರ್ದೇಶಕ ಶಿಮಿತ್ ಅಮೀನ್)
*ರಾಷ್ಟ್ರೀಯ ಸಮಗ್ರತೆ ಸಾರುವ ಅತ್ಯುತ್ತಮ ಚಿತ್ರಕ್ಕೆ ನರ್ಗಿಸ್ ದತ್ ಪ್ರಶಸ್ತಿ: ಧರ್ಮ್ (ಹಿಂದಿ; ನಿರ್ದೇಶಕಿ ಭಾವನಾ ತಲ್ವಾರ್)
*ಕುಟುಂಬ ಕಲ್ಯಾಣ್ ಕುರಿತು ಅತ್ಯುತ್ತಮ ಚಿತ್ರ: ತಾರೇ ಜಮೀನ್ ಪರ್ (ಹಿಂದಿ; ನಿರ್ದೇಶಕ ಅಮೀರ್ ಖಾನ್)
*ಸಾಮಾಜಿಕ ಸಂದೇಶ ನೀಡುವ ಅತ್ಯುತ್ತಮ ಚಿತ್ರ: ಅಂತರದ್ವಂದ್ವ (ಹಿಂದಿ; ನಿರ್ದೇಶಕ ಸುಶೀಲ್ ರಾಜ್ ಪಾಲ್)
*ಅತ್ಯುತ್ತಮ ಮಕ್ಕಳ ಚಿತ್ರ: ಫೋಟೋ (ಹಿಂದಿ; ನಿರ್ದೇಶಕ ವೀರೇಂದ್ರ ಸೈನಿ)
*ಅತ್ಯುತ್ತಮ ಅನಿಮೇಷನ್ ಚಿತ್ರ: ಇನಿಮೈ ನಾಂಗದಾಂ (ನಿರ್ದೇಶಕ ಎಸ್ ವೆಂಕೀ ಬಾಬು)

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada