»   » ಹಿಂದು ಧರ್ಮಕ್ಕೆ ನಯನತಾರಾ ಬಿಗಿಯಪ್ಪುಗೆ

ಹಿಂದು ಧರ್ಮಕ್ಕೆ ನಯನತಾರಾ ಬಿಗಿಯಪ್ಪುಗೆ

Posted By:
Subscribe to Filmibeat Kannada

ಹಿಂದು ಧರ್ಮದಿಂದ ಬೇರೊಂದು ಧರ್ಮಕ್ಕೆ ಮತಾಂತರವಾದರೆ ಬೊಬ್ಬೆ ಹೊಡೆಯುವವರಿಗೊಂದು ಸಿಹಿಸುದ್ದಿ. ಸಿನಿಮಾ ತಾರೆ ನಯನತಾರಾ ಕ್ರೈಸ್ತ ಧರ್ಮಕ್ಕೆ ಗುಡ್ ಬೈ ಹೇಳಿ ಹಿಂದು ಧರ್ಮವನ್ನು ಕೈ ಮುಗಿದು ಸ್ವೀಕರಿಸಿದ್ದಾರೆ.ನಯನತಾರಾ ಮೂಲ ಹೆಸರು ಡಯಾನಾ ಮಾರಿಯಂ ಕುರಿಯನ್. ಚಿತ್ರರಂಗಕ್ಕೆ ಬಂದ ಬಳಿಕ ನಯನತಾರಾ ಎಂದು ಹೆಸರು ಬದಲಾಯಿಸಿಕೊಂಡರು.

ಭಾನುವಾರ (ಆಗಸ್ಟ್ 7) ಅಧಿಕೃತವಾಗಿ ಚೆನ್ನೈನ ಆರ್ಯ ಸಮಾಜ ದೇವಸ್ಥಾನದಲ್ಲಿ ಹಿಂದು ಧರ್ಮವನ್ನು ಸ್ವೀಕರಿಸಿದರು. ಕೊಚ್ಚಿಯಿಂದ ಚೆನ್ನೈಗೆ ಆಗಮಿಸಿದ ನಯನಯತಾರಾ ಅಪ್ಪಟ ಭಾರತೀಯ ನಾರಿಯಂತೆ ಸೀರೆಯಲ್ಲಿ ಕಂಗೊಳಿಸುತ್ತಿದ್ದರು.

ಬಳಿಕ ಆರ್ಯ ಸಮಾಜದಲ್ಲಿ ವಿಧಿವಿಧಾನಗಳಂತೆ ನಯನತಾರಾರನ್ನು ಹಿಂದು ಧರ್ಮಕ್ಕೆ ಮತಾಂತರ ಮಾಡಲಾಯಿತು. ಆಲಯದ ಅರ್ಚಕರು "ಶುದ್ಧಿ" ವಿಧಿ ವಿಧಾನಗಳನ್ನು ನಯನತಾರಾಳಿಗೆ ಬೋಧಿಸಿ ಯಜ್ಞ ಯಾಗಾದಿಗಳನ್ನು ಮಾಡಿ ತುಪ್ಪದ ಆರತಿ ಬೆಳಗುವ ಮೂಲಕ ಹಿಂದು ಧರ್ಮಕ್ಕೆ ಬರಮಾಡಿಕೊಂಡರು.

ದೇವರ ಸ್ತೋತ್ರಗಳನ್ನು ಹಾಡಿ, ಪುಷ್ಪ ಪತ್ರೆ ಹಾಗೂ ತೀರ್ಥವನ್ನು ಸ್ವೀಕರಿಸುವ ಮೂಲಕ ನಯನತಾರಾ ಹಿಂದು ಧರ್ಮವನ್ನು ವಿಧಿವತ್ತಾಗಿ ಸ್ವೀಕರಿಸಿದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ನಯನತಾರಾ, ತಾನೇ ಸ್ವಯಂಪ್ರೇರಣೆಯಿಂದ, ಸಂತೋಷದಿಂದ ಹಿಂದು ಧರ್ಮಕ್ಕೆ ಮತಾಂತವಾಗಿದ್ದೇನೆ ಎಂದಿದ್ದಾರೆ. (ಏಜೆನ್ಸೀಸ್)

English summary
Diana Mariam Kurian, who changed her name to Nayantara after entering film industry, has converted to the Hinduism from the Christianity on Sunday (August 7). She took the changeover ritual at Arya Samaj Temple in Chennai.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X