»   » ಹುಟ್ಟುಹಬ್ಬ ಆಚರಿಸಿದ ರಾಧಿಕಾಗೆ ವಯಸ್ಸೆಷ್ಟು ಗೊತ್ತೇ?

ಹುಟ್ಟುಹಬ್ಬ ಆಚರಿಸಿದ ರಾಧಿಕಾಗೆ ವಯಸ್ಸೆಷ್ಟು ಗೊತ್ತೇ?

Posted By:
Subscribe to Filmibeat Kannada

ನಂದಗೋಕುಲ ಧಾರಾವಾಹಿಯ ಮೂಲಕ ಬಣ್ಣದ ಜಗತ್ತಿಗೆ ಕಾಲಿಟ್ಟ ರಾಧಿಕಾ, ಮೊಗ್ಗಿನ ಮನಸ್ಸು ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಕಾಲಿಟ್ಟವರು. ಮೊಗ್ಗಿನ ಮನಸ್ಸು ಹಿಟ್ಟಾಗಿದ್ದೇ ತಡ, ರಾಧಿಕಾಗೆ ಅವಕಾಶಗಳ ಮಹಾಪೂರವೇ ಹರಿದುಬಂತು. ಆದರೆ ಪ್ರತಿಭೆ ಜೊತೆ ಬುದ್ಧಿವಂತಿಕೆಯನ್ನೂ ಹೊಂದಿರುವ ರಾಧಿಕಾ, ಪಾತ್ರ, ಬ್ಯಾನರ್ ಹಾಗೂ ಚಿತ್ರಗಳ ಆಯ್ಕೆಯಲ್ಲಿ ಎಡವದೇ ಎತ್ತರೆತ್ತರಕ್ಕೇರುತ್ತಿದ್ದಾರೆ.

ನಿನ್ನೆ, ಮಾರ್ಚ್ 7 ಬುಧವಾರದಂದು ತಮ್ಮ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಂಡಿರುವ ರಾಧಿಕಾಗೆ ವಯಸ್ಸೆಷ್ಟು ಎಂಬುದು ನಿಗೂಢ. ಆಕೆ ಅದನ್ನು ಎಲ್ಲೂ ಹೇಳಿಕೊಂಡಿಲ್ಲ. ನಮಗೂ ಅದು ಗೊತ್ತಿಲ್ಲ. ಕೆಲವರು, ರಾಧಿಕಾ 31 ವರ್ಷ ಪೂರೈಸಿ 32 ಕ್ಕೆ ಕಾಲಿಟ್ಟಿದ್ದಾರೆ ಎನ್ನುತ್ತಿದ್ದಾರೆ. ಆದರೆ ಅವರನ್ನು ನೋಡಿದರೆ ಆ ಮಾತನ್ನು ನಂಬಲಿಕ್ಕೆ ಸಾಧ್ಯವಿಲ್ಲ ಎನಿಸುತ್ತದೆ.

ಸದ್ಯಕ್ಕೆ ಧ್ರುವ ಸರ್ಜಾ ನಾಯಕರಾಗಿರುವ 'ಅದ್ದೂರಿ', ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನ, ಅಜಯ್ ರಾವ್ ನಾಯಕರಾಗಿರುವ 'ಬ್ರೇಕಿಂಗ್ ನ್ಯೂಸ್', ಪ್ರಜ್ವಲ್ ದೇವರಾಜ್ ಜತೆ 'ಸಾಗರ್' ಹಾಗೂ ಲೂಸ್ ಮಾದ ಯೋಗೀಶ್ ನಾಯಕರಾಗಿರುವ 'ಅಲೆಮಾರಿ' ಚಿತ್ರಗಳನ್ನು ಮುಗಿಸಿರುವ ರಾಧಿಕಾ, ಹುಟ್ಟುಹಬ್ಬದ ಸಂಭ್ರಮ ಮುಗಿಸಿದ್ದಾರೆ.

ಇದೇ ತಿಂಗಳ 12 ರಿಂದ ಯೋಗರಾಜ್ ಭಟ್ಟರ 'ಡ್ರಾಮಾ' ತಂಡವನ್ನು ಸೇರಿಕೊಳ್ಳಲಿದ್ದಾರೆ. ಹ್ಯಾಟ್ರಿಕ್ ನಾಯಕಿಯಾದರೂ ಸರಳ, ಸಜ್ಜನತೆಗೆ ಹೆಸರಾಗಿರುವ ಈಕೆ, ಮುಂದೆಯೂ ಹೀಗೆಯೇ ಇರಲಿ ಎಂಬುದು ಎಲ್ಲರ ಹಾರೈಕೆ. ನಾಳೆ, ಅಂದರೆ ಮಾರ್ಚ್ 9, 2012ರಂದು ರಾಧಿಕಾ ಪಂಡಿತ್ ಹಾಗೂ ಯೋಗೇಶ್ ಅಭಿನಯದ ಅಲೆಮಾರಿ ಚಿತ್ರ ಬಿಡುಗಡೆ. ರಾಧಿಕಾಗೆ ಒನ್ ಇಂಡಿಯಾ ಕನ್ನಡ ಕೋರುವ ಹುಟ್ಟುಹಬ್ಬದ ಶುಭಾಶಯಗಳು. (ಒನ್ ಇಂಡಿಯಾ ಕನ್ನಡ)

English summary
Actress Radhika Pandit celebrated her Birthday yesterday, on 7 March, 2012. Her movie with Yogesh pair Alemari releasing tomorrow, 9 March 2012.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X