»   » ನಟಿ ರಂಜಿತಾ ಆತ್ಮಹತ್ಯೆಗೆ ಪ್ರಯತ್ನಿಸಿದ್ದು ನಿಜ

ನಟಿ ರಂಜಿತಾ ಆತ್ಮಹತ್ಯೆಗೆ ಪ್ರಯತ್ನಿಸಿದ್ದು ನಿಜ

Posted By:
Subscribe to Filmibeat Kannada

ಸ್ವಾಮಿ ನಿತ್ಯಾನಂದ ಲೈಂಗಿಕ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿರುವ ನಟಿ ರಂಜಿತಾ ಆತ್ಮಹತ್ಯೆಗೆ ಯತ್ನಿಸಿದ್ದು ನಿಜ ಎಂಬ ಸುದ್ದಿ ಇದೀಗ ಬೆಳಕಿಗೆ ಬಂದಿದೆ. ಕಳೆದ ಕೆಲದಿನಗಳ ಹಿಂದೆ ರಂಜಿತಾ ಆತ್ಮಹತ್ಯೆಗೆ ಪ್ರಯತ್ನಿಸಿದ್ದು ನಿಜ ಎಂದು ಆಕೆಯ ಗೆಳೆತಿ ವಿವರಗಳನ್ನು ಬಹಿರಂಗಪಡಿಸಿದ್ದಾರೆ.

ಸ್ವಾಮಿ ನಿತ್ಯಾನಂದ ಲೈಂಗಿಕ ಪ್ರಕರಣ ಬಯಲಾಗುತ್ತಿದ್ದಂತೆ ಪ್ರಮುಖವಾಗಿ ಕೇಳಿಬಂದ ಹೆಸರು ರಂಜಿತಾ. ಮಾಧ್ಯಮಗಳಲ್ಲಿ ಈಕೆಯ ಹೆಸರು ಇನ್ನಿಲ್ಲದಂತೆ ಪ್ರಚಾರಕ್ಕೆ ಬಂತು. ಮನನೊಂದ ರಂಜಿತಾ ಕಡೆಗೆ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸುತ್ತಿದ್ದ ರಂಜಿತಾಳನ್ನು ಆಕೆಯ ಗೆಳತಿ ರಕ್ಷಿಸಿದ್ದಾಗಿ ತಿಳಿಸಿದ್ದಾಳೆ. ಆದರೆ ರಂಜಿತಾಳ ಗೆಳತಿ ತನ್ನ ಹೆಸರನ್ನು ಬಹಿರಂಗಪಡಿಸಿಲ್ಲ.

ರಂಜಿತಾ ಮೂಲತಃ ಆಂಧ್ರಪ್ರದೇಶದವರು. ಆಕೆಯ ಮಾತೃಭಾಷೆ ತೆಲುಗು. ತೆಲುಗಿನ ಬಹಳಷ್ಟು ಚಿತ್ರಗಳಲ್ಲಿ ರಂಜಿತಾ ನಟಿಸಿದ್ದಾರೆ. ತಮಿಳು ಚಿತ್ರದ ಮೂಲಕ ಆಕೆ ಬೆಳ್ಳಿತೆರೆಗೆ ಅಡಿಯಿಟ್ಟಿದ್ದರು. ಸೈನಿಕಾಧಿಕಾರಿಯನ್ನು ಮದುವೆಯಾಗಿ ನಂತರದ ದಿನಗಳಲ್ಲಿ ಅವರಿಬ್ಬರ ದಾಂಪತ್ಯ ಮುರಿದು ಬಿದ್ದಿತ್ತು.

ಚೈನ್ನೈ ನಗರದ ಸಾಲಿಗ್ರಾಮಂ ಮತ್ತು ಟಿ ನಗರದಲ್ಲಿ ರಂಜಿತಾರ ತಲಾ ಒಂದೊಂದು ಬಂಗಲೆಗಳಿವೆ. ಆದರೆ ಆಕೆ ಟಿ ನಗರದ ಬಂಗಲೆಯಲ್ಲಿ ವಾಸವಾಗಿದ್ದರು. ಸ್ವಾಮಿ ನಿತ್ಯಾನಂದ ಪ್ರಕರಣ ಬಯಲಾಗುತ್ತಿದ್ದಂತೆ ಇದೀಗ ಆ ಬಂಗಲೆಗೆ ಬೀಗ ಜಡಿಯಲಾಗಿದೆ. ಬಂಗಲೆಗೆ ಇಬ್ಬರು ಪೊಲೀಸರ ಕಾವಲನ್ನು ಹಾಕಲಾಗಿದೆ. ಸದ್ಯಕ್ಕೆ ರಂಜಿತಾ ತಲೆಮರೆಸಿಕೊಂಡಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada