»   » 'ಜೋಗಯ್ಯ' ಮುಹೂರ್ತಕ್ಕೆ ಚಿರು, ಬಿಗ್ ಬಿ, ರಜನಿ

'ಜೋಗಯ್ಯ' ಮುಹೂರ್ತಕ್ಕೆ ಚಿರು, ಬಿಗ್ ಬಿ, ರಜನಿ

Posted By:
Subscribe to Filmibeat Kannada

ಕನ್ನಡ ಚಿತ್ರೋದ್ಯಮದಲ್ಲಿ ಆರಂಭಕ್ಕೂ ಮುನ್ನವೇ ಸಾಕಷ್ಟು ಕುತೂಹಲ ಮೂಡಿಸಿರುವ ಚಿತ್ರ 'ಜೋಗಯ್ಯ'. ಇದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ 100ನೇ ಚಿತ್ರವೂ ಹೌದು. 'ಜೋಗಯ್ಯ' ಚಿತ್ರೀಕರಣಕ್ಕೆ ಅದ್ದೂರಿಯಾಗಿ ಚಾಲನೆ ನೀಡಬೇಕು ಎಂಬುದು ನಿರ್ದೇಶಕ ಪ್ರೇಮ್ ಲೆಕ್ಕಾಚಾರ.

ಜೋಗಯ್ಯನ ಚಿತ್ರೀಕರಣಕ್ಕೆ ಚಾಲನೆ ನೀಡಲು ಅಮೀತಾಬ್, ಚಿರಂಜೀವಿ ಹಾಗೂ ರಜನಿಕಾಂತ್ ಅವರನ್ನು ಪ್ರೇಮ್ ಕರೆಸುತ್ತಿದ್ದಾರೆ ಎನ್ನುತ್ತವೆ ಮೂಲಗಳು. ಜೋಗಯ್ಯ್ಯನಿಗೆ ಬಿಗ್ ಬಿ ಕ್ಲಾಪ್ ಮಾಡಿದರೆ ಚಿರಂಜೀವಿ ಕ್ಯಾಮೆರಾ ಗುಂಡಿ ಒತ್ತಲಿದ್ದಾರೆ. ರಜನಿಕಾಂತ್ ಮೊದಲ ಸನ್ನಿವೇಶಕ್ಕೆ ಆಕ್ಷನ್, ಕಟ್ ಹೇಳಲಿದ್ದಾರೆ ಎಂಬ ಸುದ್ದಿ ಗಾಂಧಿನಗರದಲ್ಲಿ ಮಿಂಚಿನ ಸಂಚಾರ ಮಾಡಿದೆ.

ಇದೇ ಮೊದಲ ಬಾರಿಗೆ ನಟಿ ರಕ್ಷಿತಾ ಈ ಚಿತ್ರವನ್ನು ನಿರ್ಮಿಸುತ್ತ್ತಿದ್ದು ನಾಯಕಿಯ ಹುಡುಕಾಟ ಇನ್ನೂ ಮುಂದುವರಿದಿದೆ. 'ಜೋಗಯ್ಯ'ನಿಗೆ ಏಪ್ರಿಲ್ 24ರಂದು ಮುಹೂರ್ತ ನಿಗದಿಯಾಗಿದೆ. ಈ ಹಿಂದೆ 'ಜೋಗಿ' ಹಾಗೂ 'ರಾಜ್ ದ ಶೋ ಮ್ಯಾನ್' ಚಿತ್ರಗಳನ್ನು ಏಪ್ರಿಲ್ 24ರಂದೇ ಪ್ರೇಮ್ ಆರಂಭಿಸಿದ್ದರು. ಆ ಎರಡು ಚಿತ್ರಗಳು ದಾಖಲೆ ನಿರ್ಮಿಸಿ ಪ್ರೇಮ್ ಗೆ ಒಳ್ಳೆಯ ಹೆಸರು ತಂದಿದ್ದವು. ಇದೀಗ ಜೋಗಯ್ಯ ಬಗ್ಗೆಯೂ ಅದೇ ನಿರೀಕ್ಷೆಗಳಿವೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada