»   »  ಅನಂತನಾಗ್ ಮತ್ತು ಸುಹಾಸಿನಿ 'ಎರಡನೇ ಮದುವೆ'!

ಅನಂತನಾಗ್ ಮತ್ತು ಸುಹಾಸಿನಿ 'ಎರಡನೇ ಮದುವೆ'!

Posted By:
Subscribe to Filmibeat Kannada
Anant Nag and Suhasini again teamed in Eradane Maduve
ನಟ ಅನಂತನಾಗ್ ಮತ್ತು ಸುಹಾಸಿನಿ 'ಎರಡನೇ ಮದುವೆ'ಯಾಗಲು ಅಣಿಯಾಗಿದ್ದಾರೆ. ಇವರಿಗ್ಯಾಕಪ್ಪ ಈ ಬುದ್ಧಿ ಬಂತು ಅಂದುಕೊಳ್ಳುತ್ತಿದ್ದೀರಾ? ಏನಿಲ್ಲ ಇವರಿಬ್ಬರೂ 'ಎರಡನೇ ಮದುವೆ' ಆಗುತ್ತಿರುವುದು ತೆರೆಯ ಮೇಲೆ ಅಷ್ಟೆ! ' ಎರಡನೇ ಮದುವೆ' ಎಂಬ ಹೊಸ ಚಿತ್ರವನ್ನು ನಿರ್ದೇಶಕ ದಿನೇಶ್ ಬಾಬು ಕೈಗೆತ್ತಿಕೊಂಡಿದ್ದಾರೆ. ಸುರೇಶ್ ಆರ್ಟ್ಸ್ ಮತ್ತು ಒಬೇಷನ್ಸ್ ಲಾಂಛನದಲ್ಲಿ ಕೆ.ಎ. ಸುರೇಶ್ ಮತ್ತು ಕೆ. ರಾಜೀವ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

ಸುಪ್ರಭಾತ, ಹೆಂಡ್ತಿಗ್ಹೇಳ್ಬೇಡಿ, ಲಾಲಿ, ಅಮೃತವರ್ಷಿಣಿ, ಮಿ.ಗರಗಸ, ಗಣೇಶ ಮೊದಲಾದ ಚಿತ್ರಗಳಲ್ಲಿ ತಮ್ಮ ವಿಶಿಷ್ಟ ನಿರ್ದೇಶನದಿಂದ ದಿನೇಶ್ ಬಾಬು ಪ್ರೇಕ್ಷಕರ ಮನಗೆದ್ದಿದ್ದರು.ಇದೀಗ ಅವರ ಮತ್ತೊಂದು ಹೊಸ ಪ್ರಯೋಗವೇ 'ಎರಡನೇ ಮದುವೆ'. ಮತ್ತೊಂದು ವಿಶೇಷವೆಂದರೆ, ಬಹಳ ದಿನಗಳ ನಂತರ ಅನಂತ್‌ನಾಗ್-ಸುಹಾಸಿನಿ ಈ ಚಿತ್ರದಲ್ಲಿ ಒಟ್ಟಾಗಿ ನಟಿಸುತ್ತಿದ್ದಾರೆ. ಏಪ್ರಿಲ್ 5ರಿಂದ ಚಿತ್ರೀಕರಣ ಪ್ರಾರಂಭಿಸಿರುವ ಚಿತ್ರತಂಡ 30 ದಿನಗಳ ಕಾಲ ಒಂದೇ ಹಂತದಲ್ಲಿ ಚಿತ್ರೀಕರಣವನ್ನು ಮುಗಿಸಲಿದೆ.

ಇದೊಂದು ಸಂಪೂರ್ಣ ಹಾಸ್ಯಭರಿತ, ಸಾಂಸಾರಿಕ ಪ್ರೇಮ ಕಥಾಚಿತ್ರ. ಅನಂತ್-ಸುಹಾಸಿನಿಯಂಥ ಪ್ರತಿಭಾವಂತ ಜೋಡಿಯ ಜತೆಗೆ ನೆನಪಿರಲಿ ಪ್ರೇಮ್, ಜೆನೀಫರ್ ಕೋತ್ವಾಲ್ ಯುವ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಇಂಥ ವಿಭಿನ್ನ ಹಾಸ್ಯ ಕಥಾನಕವನ್ನು ದಿನೇಶ್ ಬಾಬು ಅವರೇ ಬರೆದಿದ್ದಾರೆ. ಚಿತ್ರಕಥೆ, ಛಾಯಾಗ್ರಹಣ ಹಾಗೂ ನಿರ್ದೇಶನದ ಜವಾಬ್ದಾರಿಯನ್ನು ದಿನೇಶ್ ಬಾಬು ಅವರೇ ಹೊತ್ತಿದ್ದಾರೆ. ಜಯಪಾಲ್ ಅವರ ಸಂಗೀತ ಸಂಯೋಜನೆ, ರಾಜೇಂದ್ರ ಕಾರಂತರ ಸಂಭಾಷಣೆ ಇದ್ದು, ಶರಣ್, ತಾರಾ, ರಂಗಾಯಣ ರಘು, ಸಿಂಧೂ, ನವ್ಯ ಉಳಿದ ತಾರಾಗಣದಲ್ಲಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಪೂರಕ ಓದಿಗೆ
ಅನಂತ್ ಬಿಚ್ಚಿಟ್ಟ ಶಂಕರ್ ನಾಗ್ ಸಾವಿನ ರಹಸ್ಯ!
ಶಂಕರ್ ನಾಗ್ ಪತ್ನಿಗೆ ರು.21.6 ಲಕ್ಷ ನಷ್ಟಭರ್ತಿ
ಗೀತಾ ಚಿತ್ರದ ಜೊತೆಜೊತೆಯಲಿ ಹಾಡು
ಶಂಕರನಾಗ್ ಹೋಗಿ ಇಂದಿಗೆ ಹದಿನೇಳು ವರ್ಷ?
ಶಿವಕಾಶಿಯಲ್ಲಿ ಒಂದಾದ ಅನಂತ್ ನಾಗ್ ,ಲಕ್ಷ್ಮಿ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada