»   »  ಅಂಧ ಕಲಾವಿದರು ಹೊರತಂದ 'ಅಣ್ಣಾವ್ರ' ಸಿಡಿ

ಅಂಧ ಕಲಾವಿದರು ಹೊರತಂದ 'ಅಣ್ಣಾವ್ರ' ಸಿಡಿ

Subscribe to Filmibeat Kannada
Blind artists relese CD of rajkumar's songs
ಅಂಧ ಕಲಾವಿದರು ಹಾಡಿರುವ ವರನಟ ಡಾ. ರಾಜಕುಮಾರ್ ಅವರ ಸವಿನೆನಪು ಸಿಡಿಯನ್ನು ಪ್ರೆಸ್ ಕ್ಲಬ್ ನಲ್ಲಿ ಗುರುವಾರ(ಮೇ.7) ಬಿಡುಗಡೆ ಗೊಳಿಸಲಾಯಿತು. 'ಗಂಧದಗುಡಿ'ಯ 'ನಾವಾಡುವ ನುಡಿಯೇ...', 'ಆಕಸ್ಮಿಕ' ದ 'ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು..', 'ಶಬ್ದವೇದಿ' ಚಿತ್ರದ 'ಜನರಿಂದ ನಾನು ಮೇಲೆ ಬಂದೆ...' ಮುಂತಾದ ಗೀತೆಗಳು ಸೇರಿದಂತೆ ಡಾ. ರಾಜ್ ನಟಿಸಿ ಹಾಡಿರುವ 15 ಚಲನಚಿತ್ರಗಳ ಪ್ರಮುಖ ಸುಮಧುರ ಗೀತೆಗಳನ್ನು ಅಂಧ ಕಲಾವಿದರೇ ಸಂಗೀತ ಸಂಯೋಜನೆ ಮಾಡಿ ಹಾಡಿರುವುದು ವಿಶೇಷ.

ಐಡಿಎಲ್ ಅಂಧರ ವಾದ್ಯ ವೃಂದದ ಸಂಸ್ಥಾಪಕ ಪಿ ಕೆ ಪಾಲ್ ನಿರುದ್ಯೋಗಿ ಅಂಧರು ಮತ್ತು ಅಂಗವಿಕಲರಿಗೆ ಸಹಾಯ ನೀಡುವ ಉದ್ದೇಶದಿಂದ ಈ ಸಿಡಿಗಳನ್ನು ಬಿಡುಗಡೆ ಮಾಡಿದ್ದಾಗಿ ತಿಳಿಸಿದರು. ಸಾರ್ವಜನಿಕರು ಇವುಗಳನ್ನು ಕೊಂಡು ನೆರವಾಗಬೇಕೆಂದು ಅವರು ಈ ಸಂದರ್ಭದಲ್ಲಿ ಮನವಿ ಮಾಡಿಕೊಂಡರು. ಡಾ.ರಾಜ್ ಸವಿನೆನಪಿಗಾಗಿ ಈ ಹಾಡುಗಳನ್ನು ನಾವು ಹಾಡಿದ್ದು, ಸಿಡಿಗಳನ್ನು ಸಿದ್ಧಪಡಿಸಲು ನಿವೃತ್ತ ಪೋಲಿಸ್ ಅಧಿಕಾರಿ ಡಿ ಕೆ ಶಿವರಾಂ, ಗುರುರಾಜ್ ಮತ್ತು ಲಹರಿ ಸಂಸ್ಥೆಯ ವೇಲು ನೆರವಾಗಿದ್ದಾರೆ ಎಂದು ಅವರ ಸಹಾಯವನ್ನು ಸ್ಮರಿಸಿದರು.

ಗಿಟಾರ್ ಮನೋಹರ್, ರಿದಂ ಅಭಿಮಾನ, ತಬಲಾ ವೀರಣ್ಣ. ಹಾಡಿರುವವರು ಶ್ರೀಧರ್, ಪಾಷಾ, ನಾಗಿನ್, ನರಸಿಂಗ್ ಹಾಗು ಶಾಲಂ. ಹುಟ್ತತ್ತಲೇ ಅಂಧರಾಗಿದ್ದ ನಮಗೆ ಬೇರೆ ಯಾವ ಕೆಲಸವೂ ದೊರೆಯದ ಕಾರಣ ಇಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಅಂಧರು, ಅಂಗವಿಕಲರಿಗೆ ನೆರವಗುತ್ತಿದ್ದೇವೆ ಎಂದು ಪಾಲ್ ಈ ಸಂಧರ್ಭದಲ್ಲಿ ಹೇಳಿದರು.

(ದಟ್ಸ್ ಕನ್ನಡ ಚಿತ್ರವಾರ್ತೆ)

ಡಾ.ರಾಜ್ ಕುಮಾರ್ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ
ನನ್ನ ಒಲುಮೆಯ ವ್ಯಕ್ತಿ ಡಾ.ರಾಜ್: ಅಮಿತಾಬ್
'ಡಾ.ರಾಜ್ ಜೀವನಧಾರೆ' ಡಿವಿಡಿ ಬಿಡುಗಡೆ
ರಾಜ್ ಬಿಡುಗಡೆಗೆ ಹಣ ಕೊಟ್ಟಿದ್ದ್ದು ನಿಜ: ಶಿವಣ್ಣ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada