»   » ಆಪ್ತರಕ್ಷಕ ತೆಲುಗು ರೀಮೇಕ್ ಗೆ ಚಿರಂಜೀವಿ?

ಆಪ್ತರಕ್ಷಕ ತೆಲುಗು ರೀಮೇಕ್ ಗೆ ಚಿರಂಜೀವಿ?

Posted By:
Subscribe to Filmibeat Kannada

ಕನ್ನಡ ಚಿತ್ರೋದ್ಯಮದಲ್ಲಿ ಹೊಸ ದಾಖಲೆ ನಿರ್ಮಿಸಿದ 'ಆಪ್ತರಕ್ಷಕ' ಚಿತ್ರವನ್ನು ಪಿ ವಾಸು ತಮಿಳಿಗೆ ಇಂದಲ್ಲ ನಾಳೆ ರೀಮೇಕ್ ಮಾಡೇ ಮಾಡುತ್ತಾರೆ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಈ ಚಿತ್ರ ಇದೀಗ ತೆಲುಗು ಭಾಷೆಗೂ ರೀಮೇಕ್ ಆಗಲಿದ್ದು ಚಿತ್ರದ ನಾಯಕ ನಟ ಯಾರೆಂಬ ಬಗ್ಗೆ ಅಚ್ಚರಿ ಉತ್ತರ ಸಿಕ್ಕ್ಕಿದೆ.ಆಪ್ತರಕ್ಷಕ ತೆಲುಗು ಅವತರಣಿಕೆಯಲ್ಲಿ ಮೆಗಾ ಸ್ಟಾರ್ ಚಿರಂಜೀವಿ ಕಾಣಿಸಲಿದ್ದಾರೆ!

ಸದ್ಯಕ್ಕೆ ರಾಜಕೀಯದಲ್ಲಿ ಬ್ಯುಸಿಯಾಗಿರುವ ಚಿರಂಜೀವಿ ಮತ್ತೆ ಬೆಳ್ಳಿಪರದೆಗೆ ಹಿಂತಿರುಗಲು ಸೂಕ್ತ ಚಿತ್ರ ಬೇಕಾಗಿದೆ. ಆಪ್ತರಕ್ಷಕ ಚಿತ್ರ ನಟ ಚಿರಂಜೀವಿ ಅವರಿಗೆ ಎಲ್ಲ ರೀತಿಯಲ್ಲೂ ಸೂಕ್ತವಾದ ಚಿತ್ರ. ಹಾಗಾಗಿ ಈ ಚಿತ್ರದ ಮೂಲಕ ಚಿರಂಜೀವಿ ಮತ್ತೆ ಬೆಳ್ಳಿತೆರೆಗೆ ಆಗಮಿಸಲಿದ್ದಾರೆ ಎನ್ನುತ್ತವೆ ಮೂಲಗಳು.

ಈ ಹಿಂದೆ ಆಪ್ತಮಿತ್ರ ಚಿತ್ರವನ್ನು ಪಿ ವಾಸು ತೆಲುಗು ಮತ್ತು ತಮಿಳಿನಲ್ಲಿ ಚಂದ್ರಮುಖಿ ಎಂದು ರೀಮೇಕ್ ಮಾಡಿದ್ದರು. ಆದರೆ ತೆಲುಗು ಅವತರಣಿಕೆ ಪ್ರೇಕ್ಷಕರನ್ನು ರಂಜಿಸುವಲ್ಲಿ ವಿಫಲವಾಯಿತು. ಹಾಗಾಗಿ ಈ ಬಾರಿ ವಾಸು ತೆಲುಗು ಅವತರಣಿಕೆಗಾಗಿ ಚಿರಂಜೀವಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಕನ್ನಡ ಚಿತ್ರೋದ್ಯಮದ ಎಲ್ಲ ದಾಖಲೆಗಳನ್ನು ಅಳಿಸುವತ್ತ 'ಆಪ್ತರಕ್ಷಕ' ಚಿತ್ರ ಮುನ್ನುಗ್ಗುತ್ತಿದೆ. ಸಾಹಸ ಸಿಂಹ ವಿಷ್ಣುವರ್ಧನ್ ತಮ್ಮ ಅಮೋಘ ಅಭಿನಯದ ಮೂಲಕ ಮತ್ತೊಮ್ಮೆ ಪ್ರೇಕ್ಷಕರಿಗೆ ಹತ್ತಿರವಾದ ಚಿತ್ರ. ಚಿತ್ರದಲ್ಲಿನ ಸುಂದರ ತಾಣಗಳು, ಛಾಯಾಗ್ರಹಣ, ವಸ್ತ್ರ ವಿನ್ಯಾಸ, ಗುರುಕಿರಣ್ ಸಂಗೀತ ಚಿತ್ರದ ಹೈಲೈಟ್ಸ್.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada