»   » 'ಗಿಲ್ಲಿ' ಖ್ಯಾತಿಯ ರಾಘವ ಲೋಕಿ ದಾಂಪತ್ಯಕ್ಕೆ

'ಗಿಲ್ಲಿ' ಖ್ಯಾತಿಯ ರಾಘವ ಲೋಕಿ ದಾಂಪತ್ಯಕ್ಕೆ

Subscribe to Filmibeat Kannada

'ಸತ್ಯ ಇನ್ ಲವ್' ಹಾಗೂ 'ಗಿಲ್ಲಿ' ಚಿತ್ರಗಳ ನಿರ್ದೇಶಕ ರಾಘವ ಲೋಕಿ ದಾಂಪತ್ಯ ಜೀವನಕ್ಕೆ ಅಡಿಯಿಟ್ಟಿದ್ದಾರೆ. ಆನೇಕಲ್ ತಾಲೂಕಿನ ಮರಸೂರು ಗೇಟ್ ಬಳಿ ಇರುವ ವೈಕೆಆರ್ ಕಲ್ಯಾಣ ಮಂಟಪದಲ್ಲಿ ರಾಘವ ಲೋಕಿ ಮತ್ತು ಸವಿತಾ ಅವರ ವಿವಾಹ ಭಾನುವಾರ (ಡಿ.6) ನೆರವೇರಿತು.

ಶಿವರಾಜ್ ಕುಮಾರ್ ನಟಿಸಿದ್ದ 'ಸತ್ಯ ಇನ್ ಲವ್' ಚಿತ್ರ ತಕ್ಕಮಟ್ಟಿಗೆ ಯಶಸ್ವಿಯಾದ ಬಳಿಕ 'ಗಿಲ್ಲಿ' ಚಿತ್ರವನ್ನು ಲೋಕಿ ನಿರ್ದೇಶಿಸಿದ್ದರು. ಜಗ್ಗೇಶ್ ಮಗ ಗುರುರಾಜ್ ಅವರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ ಚಿತ್ರ 'ಗಿಲ್ಲಿ'. ಈ ಚಿತ್ರವೂ ಬಾಕ್ಸಾಫೀಸಲ್ಲಿ ಪರ್ವಾಗಿಲ್ಲ ಎನ್ನಿಸಿಕೊಂಡಿತ್ತು.

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟನೆಯ 'ಸುಗ್ರೀವ' ಚಿತ್ರದ ಎಂಟು ಮಂದಿ ನಿರ್ದೇಶಕರಲ್ಲಿ ರಾಘವ ಲೋಕಿಸಹ ಒಬ್ಬರು. ಕೇವಲ 18 ಗಂಟೆಗಳಲ್ಲಿ ಚಿತ್ರೀಕರಿಸಿದ ಚಿತ್ರ ಎಂಬ ಹೆಗ್ಗಳಿಕೆಗೆ 'ಸುಗ್ರೀವ' ಪಾತ್ರವಾಗಿದೆ. ರಾಘವ ಲೋಕಿ ಇತ್ತೀಚೆಗಷ್ಟೆ ಕಾರು ಅಪಘಾತದಲ್ಲಿ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದರು.

ಸೌಂದರ್ಯ ಜಗದೀಶ್, ಪಿ ಎನ್ ಸತ್ಯ, ಗುರುಕಿರಣ್, ಶ್ರೀನಿವಾಸಮೂರ್ತಿ, ಅಣಜಿ ನಾಗರಾಜ್, ಎಂ ಆರ್ ಸೀನು, ಕೋಮಲ್, ರೂಪಿಕಾ, ವೀಣಾ ವೆಂಕಟೇಶ್ ಮುಂತಾದ ಕನ್ನಡ ಚಿತ್ರರಂಗದ ಗಣ್ಯರು ರಾಘವ ಲೋಕಿ ಮದುವೆಗೆ ಆಗಮಿಸಿದ್ದರು.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada