»   » ಗುಲಾಬಿ ಟಾಕೀಸ್ ಬಂದಿದೆ ನೋಡ್ಬಿಡಿ

ಗುಲಾಬಿ ಟಾಕೀಸ್ ಬಂದಿದೆ ನೋಡ್ಬಿಡಿ

Posted By:
Subscribe to Filmibeat Kannada
Umashree, Gulabi Talkies
ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರ ಚಿತ್ರಗಳು ನಗರದ ಪ್ರಮುಖ ಚಿತ್ರಮಂದಿರಗಳಲ್ಲಿ ಪ್ರದರ್ಶನವಾಗುವುದಿಲ್ಲ ಎಂಬ ಕೊರಗು ಚಿತ್ರ ಅಭಿಮಾನಿಗಳಿಗೆ ಇದ್ದೇ ಇದೆ. ಇದಕ್ಕೆ ನಾನಾ ಕಾರಣವಿದ್ದರೂ ಕಡಿಮೆ ಬಜೆ ಟ್ ನ ಚಿತ್ರವನ್ನು ದೊಡ್ದ ಚಿತ್ರಮಂದಿರದಲ್ಲಿ ತೆರೆಕಾಣಿಸಿ, ಚಿತ್ರಮಂದಿರದ ಬಾಡಿಗೆ ಕೊಟ್ಟು, ಹೌಸ್ ಫುಲ್ ಮಾಡುವುದು ಗಿರೀಶ್ ಅವರ ನಿರ್ಮಾಪಕರಿಗೆ ತುಸು ಕಷ್ಟವೇ.

ಅದೇನೇ ಇರಲಿ, ಗುಲಾಬಿ ಟಾಕೀಸ್ ಚಿತ್ರ ಇನ್ನೂ ನೋಡಿಲ್ಲವಾದರೆ, ಈ ವಾರ ನೋಡಿಬಿಡಿ. ಚಿತ್ರಸಮೂಹ ಆಯೋಜಿಸುತ್ತಿರುವ ಚಿತ್ರವರ್ಷ ಏಳನೇ ವಾರಕ್ಕೆ ಕಾಲಿಟ್ಟಿದೆ. ಚಿತ್ರವರ್ಷ ಮಾಲಿಕೆಯಲ್ಲಿ ಈ ವಾರ ಬಸಂತ್ ಕುಮಾರ್ ಪಾಟೀಲ್ ನಿರ್ಮಾಣದ ಗುಲಾಬಿ ಟಾಕೀಸ್ ಪ್ರದರ್ಶನಗೊಳ್ಳಲಿದೆ.

ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಗುಲಾಬಿ ಟಾಕೀಸ್ ಚಿತ್ರ ಹಿರಿಯ ನಟಿ ಉಮಾಶ್ರೀ ಅವರಿಗೆ ರಾಷ್ಟ್ರಪ್ರಶಸ್ತಿ ಗೌರವವನ್ನು ತಂದುಕೊಟ್ಟಿದೆ. ಜುಲೈ 10 ಹಾಗೂ 11 ರಂದು ಸಂಜೆ 6.30ಕ್ಕೆ ಚಿತ್ರ ಪ್ರದರ್ಶನವಿರುತ್ತದೆ.

ಸ್ಥಳ: ಸುಚಿತ್ರಾ ಫಿಲ್ಮಂ ಸೊಸೈಟಿ, ಬನಶಂಕರಿ, ಬೆಂಗಳೂರು
ದೂರವಾಣಿ: (080)2671 1785

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada