»   » ಈ ವಾರ ಜೊತೆ ಜೊತೆಯಲ್ಲಿ ತೆರೆಗೆ ಮೂರು ಚಿತ್ರಗಳು

ಈ ವಾರ ಜೊತೆ ಜೊತೆಯಲ್ಲಿ ತೆರೆಗೆ ಮೂರು ಚಿತ್ರಗಳು

Posted By:
Subscribe to Filmibeat Kannada

ಕಳೆದ ವಾರ ಬಿಡುಗಡೆಗೊಂಡ 'ಪಂಚರಂಗಿ' ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಯಶಸ್ಸು ಕಂಡು ರಾಜ್ಯdದಾದ್ಯಂತ ಮುನ್ನಡೆಯುತ್ತಿದೆ. ಈ ಮಧ್ಯೆ ಕನ್ನಡ ಚಿತ್ರಗಳಿಗೆ ಕನ್ನಡ ಚಿತ್ರವೇ ಪೈಪೋಟಿಯಂತೆ ಈ ವಾರ ಮತ್ತೆ ಮೂರು ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿದೆ.

ಸೆ.9ರಂದು ನಂಜನಗೂಡು ನಂಜುಂಡ: 'ಪಯಣ' ಖ್ಯಾತಿಯ ಹಾಸ್ಯನಟ ರವಿಶಂಕರ್ ಪ್ರಮುಖ ಪಾತ್ರದಲ್ಲಿರುವ ಈ ಚಿತ್ರಕ್ಕೆ ಮಲಯಾಳಂ ನಟಿ ಹಂಸಿಣಿ ನಾಯಕಿ. ದೇವರಾಜ್ ಪ್ರಮುಖ ಭೂಮಿಕೆಯಲ್ಲಿದ್ದ "ಪ್ರಚಂಡ ರಾವಣ" ಎನ್ನುವ ಚಿತ್ರ ನಿರ್ದೇಶಿಸಿದ್ದ ಶ್ರೀನಿವಾಸ್ ಪ್ರಸಾದ್, ಮಾನಸಿಕ ರೋಗಿಯೊಬ್ಬನ ಜೀವನ ಕುರಿತಾದ ಕಥೆಯನ್ನು ಈ ಚಿತ್ರದಲ್ಲಿ ಕೈಗೆತ್ತಿ ಕೊಂಡಿದ್ದಾರೆ. ಚಿತ್ರಕ್ಕೆ ರವಿಚಂದ್ರ ಸಂಗೀತ ನೀಡಿದ್ದರೆ, ಸುರೇಶ್ ಛಾಯಾಗ್ರಾಹಕರಾಗಿದ್ದಾರೆ. ಸುಭಾಶ್ ಕೂರ್ಗ್ ಚಿತ್ರದ ನಿರ್ಮಾಪಕರು. ಚಿತ್ರ ಹೆಚ್ಚುಕಮ್ಮಿ ಮಲಯಾಳಂ ಚಿತ್ರ 'ನೋಕ್ಕಿ ಯಂದಿರಂ' ಚಿತ್ರದ ರಿಮೇಕ್.

ಸೆ.10ರಂದು ಜೊತೆಗಾರ: 'ಜಸ್ಟ್ ಮಾತ್ ಮಾತ'ಲ್ಲಿ ಚಿತ್ರದ ನಂತರ ಬಿಡುಗಡೆಯಾಗುತ್ತಿರುವ ರಮ್ಯಾ ನಾಯಕಿಯಾಗಿ ನಟಿಸಿರುವ ಚಿತ್ರ.'ಜೊತೆ ಜೊತೆಯಲಿ' ಚಿತ್ರದ ನಂತರ ಪ್ರೇಮ್ ಮತ್ತು ರಮ್ಯಾ ಜೊತೆಯಾಗಿ ನಟಿಸುತ್ತಿರುವ ಚಿತ್ರವನ್ನು ಜೋಗಿ ಖ್ಯಾತಿಯ ನಿರ್ಮಾಪಕ ಅಶ್ವಿನಿ ರಾಮ್ ಪ್ರಸಾದ್ ನಿರ್ಮಿಸುತ್ತಿದ್ದಾರೆ. ಸಿಗಮಣಿ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಎನ್ ರಾಘವ ಛಾಯಾಗ್ರಹಣ ಮತ್ತು ಸುಜಿತ್ ಶೆಟ್ಟಿ ಅವರ ಸಂಗೀತವಿದೆ. ಐಡಿಬಿಐ ಬ್ಯಾಂಕ್ ಸಾಲದ ಸುಳಿಯಿಂದ ಚಿತ್ರ ಹೊರಬಂದು ಬಿಡುಗಡೆ ಭಾಗ್ಯಕಾಣುತ್ತಿದೆ. ಈ ಚಿತ್ರದ ತಾರಾಗಣದಲ್ಲಿ ಪ್ರೇಮ್, ರಮ್ಯಾ, ಆಶೀಶ್ ವಿದ್ಯಾರ್ಥಿ, ಲಕ್ಷ್ಮಿ, ರಾಜೇಂದ್ರ ಕಾರಂತ್, ಸಾಧು ಕೋಕಿಲ, ದೊಡ್ಡಣ್ಣ, ಪದ್ಮಜಾ ರಾವ್, ಸುಧಾ ಬೆಳವಾಡಿ ಮುಂತಾದವರಿದ್ದಾರೆ.

ಸೆ.10ರಂದು ಏನೋ ಒಂಥರಾ: ತಮಿಳಿನ ಯಶಸ್ವಿ ಚಿತ್ರ ಖುಷಿ ಚಿತ್ರದ ರಿಮೇಕ್. ಮೂಲ ತಮಿಳು ನಂತರ ತೆಲುಗು ಮತ್ತು ಹಿಂದಿ ಭಾಷೆಯಲ್ಲಿ ರಿಮೇಕ್ ಆದನಂತರ ಈಗ ಕನ್ನಡದಲ್ಲಿ ಬರುತ್ತಿರುವ ಚಿತ್ರ. ಗೋಲ್ಡನ್ ಸ್ಟಾರ್ ಮತ್ತು ಪ್ರಿಯಾ ಮಣಿ ಪ್ರಮುಖು ಭೂಮಿಕೆಯಲ್ಲಿರುವ ಈ ಚಿತ್ರಕ್ಕೆ ಮುಸ್ಸಂಜೆಮಾತು ಖ್ಯಾತಿಯ ಮಹೇಶ್ ನಿರ್ದೇಶಕರು. ತಮಿಳು ಟ್ಯೂನ್ ಗೆ ಸದ್ಯಕ್ಕೆ ಕನ್ನಡದ ನಂಬರ್ ಒನ್ ಸಂಗೀತ ನಿರ್ದೇಶಕ ಹರಿಕೃಷ್ಣ ಸ್ವಲ್ಪ ಪಾಲಿಷ್ ಮಾಡಿದ್ದಾರೆ. ತಾರಾಗಣದಲ್ಲಿ ಗಣೇಶ್, ಪ್ರಿಯಾಮಣಿ, ಜೈಜಗದೀಶ್, ಶರಣ್, ಶ್ರೀನಿವಾಸಮೂರ್ತಿ, ವಿಜಯಲಕ್ಷ್ಮಿ ಸಿಂಗ್, ತೇಜಸ್ವಿನಿ ಮುಂತಾದವರಿದ್ದಾರೆ. ಮಳೆಯಲಿ ಜೊತೆಯಲಿ ಚಿತ್ರದ ಯಶಸ್ಸಿನ ನಂತರ ಗಣೇಶ್ ಗೆ, ರಾಮ್ ಚಿತ್ರದ ಯಶಸ್ಸಿನ ನಂತರ ಪ್ರಿಯಾ ಮಣಿ ಗೆ ಚಿತ್ರ ಮತ್ತೆ ಖುಷಿ ನೀಡುತ್ತದೋ ಕಾದು ನೋಡಬೇಕಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada