»   » ಹೀರೋಯಿಸಂ ಪಾತ್ರಕ್ಕೆ ಅಜಯ್ ರಾವ್ ಹುಡುಕಾಟ

ಹೀರೋಯಿಸಂ ಪಾತ್ರಕ್ಕೆ ಅಜಯ್ ರಾವ್ ಹುಡುಕಾಟ

Posted By:
Subscribe to Filmibeat Kannada
<ul id="pagination-digg"><li class="next"><a href="/news/08-actor-ajay-rao-soft-role-action-movie-aid0172.html">Next »</a></li></ul>
ಕಿರಿಕ್, ಶೋಕಿ, ಧಿಮಾಕು ಈ ಮೂರು ಇಲ್ಲದ ಬೆರಳೆಣಿಕೆಯ ಕನ್ನಡ ನಟರಲ್ಲಿ ಅಜಯ್ ರಾವ್ ಹೆಸರು ಟಾಪ್ ನಲ್ಲಿ ಬರುತ್ತದೆ. ತಾನಾಯ್ತು, ತನ್ನ ಕೆಲಸವಾಯ್ತು ಎಂಬ ರೀತಿಯಲ್ಲಿ ಬೆಳೆದು ಬಂದ ಈ ನಟನೀಗ ಹೊಸತನಕ್ಕಾಗಿ ತುಡಿಯುತ್ತಿದ್ದಾರೆ. ಬರೀ ಗೋಳಿನ ಪಾತ್ರ ಮಾಡಿದ್ದು ಸಾಕು, ಮುಂದೆ ಹೀರೋಯಿಸಂ ತೋರಿಸುವ ಪಾತ್ರ ಬೇಕು ಎಂಬುದನ್ನು ಬಹಿರಂಗವಾಗಿ ಹೇಳಿಕೊಂಡಿದ್ದಾರೆ ಅಜಯ್ ರಾವ್.

'ಎಕ್ಸ್‌ಕ್ಯೂಸ್ ಮೀ' ಚಿತ್ರದ ಮೂಲಕ ಬಣ್ಣದ ಬದುಕಿಗೆ ಅಡಿಯಿಟ್ಟ ಅಜಯ್, ಸಾಹಸ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇ ಇಲ್ಲ. ಅವರಿಗೆ ಲೈಫ್ ಕೊಟ್ಟಿದ್ದು ಆರ್. ಚಂದ್ರು ನಿರ್ದೇಶನದ ಮೊದಲ ಚಿತ್ರ 'ತಾಜ್‌ಮಹಲ್'. ಅಜಯ್ ರಾವ್ ಮತ್ತೆ ಹಿಂದಿರುಗಿ ನೋಡುವ ಸಮಯವೇ ಬರಲಿಲ್ಲ. ತನ್ನದೇ ಆದ ಇಮೇಜ್ ಬೆಳೆಸಿಕೊಂಡು ಉಳಿಸಿಕೊಂಡು ಚಿತ್ರರಂಗದ ಜರ್ನಿಯಲ್ಲಿದ್ದಾರೆ ಈ ಸರಳ ನಟ.

"ಪ್ರೀತಿಗಾಗಿ ಅಂಗಲಾಚುವ, ಸಾಯುವ, ಗೋಳಾಡುವ ಪಾತ್ರಗಳನ್ನೇ ಇದುವರೆಗೆ ಹೆಚ್ಚಾಗಿ ಮಾಡಿದ್ದೇನೆ. ಇಷ್ಟೂ ವರ್ಷ ಮಾಡಿರುವುದು ಸಾಫ್ಟ್ ಪಾತ್ರಗಳು. ಆದರೆ ಈಗ ಅವೆಲ್ಲ ಸಾಕೆನಿಸುತ್ತಿದೆ. ಇನ್ನಾದರೂ 'ಜೋಶ್' ಇರೋ ಪಾತ್ರಗಳು ನನಗೆ ಬೇಕು. ನಿಜವಾಗಿ ಹೇಳಬೇಕೆಂದರೆ 'ನಿಜವಾದ ಹೀರೋ' ಆಗಬೇಕು" ಎಂದಿದ್ದಾರೆ ಅಜಯ್. ಮುಂದಿನ ಪುಟ ನೋಡಿ...

<ul id="pagination-digg"><li class="next"><a href="/news/08-actor-ajay-rao-soft-role-action-movie-aid0172.html">Next »</a></li></ul>

English summary
Kannada Actor Ajay Rao told that he do not want to do soft role more in future. He will concentrates for Action Based Roles in his future carrier. &#13; &#13;

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X