»   »  ಬಿಬಿಎಂಪಿ ಚುನಾವಣಾ ಕಣಕ್ಕೆ ಚಿತ್ರನಿರ್ಮಾಪಕರು

ಬಿಬಿಎಂಪಿ ಚುನಾವಣಾ ಕಣಕ್ಕೆ ಚಿತ್ರನಿರ್ಮಾಪಕರು

Subscribe to Filmibeat Kannada
Producer K Manju
ಕಳೆದ ಮೂರು ವರ್ಷಗಳಿಂದ ಬಿಬಿಎಂಪಿ ಚುನಾವಣೆಗಳು ನೆನೆಗುದಿಗೆ ಬಿದ್ದಿವೆ. ಚುನಾವಣೆಗೆ ಈಗ ಕಾಲ ಪಕ್ವವಾಗಿದೆ. ಆಗಸ್ಟ್ ನಲ್ಲಿ ಚುನಾವಣೆ ನಡೆಸಲು ಸಿದ್ಧತೆ ನಡೆಯುತ್ತಿದೆ. ಬಹಳಷ್ಟು ಕನ್ನಡ ಚಿತ್ರ ನಿರ್ಮಾಪಕರು ಅಖಾಡಕ್ಕೆ ಇಳಿಯಲು ತಯಾರಿ ನಡೆಸಿದ್ದಾರೆ. ಮುಖ್ಯವಾಗಿ ಕೆ ಮಂಜು, ಎನ್ ಎಂ ಸುರೇಶ್, ಸಂಪತ್ ಕುಮಾರ್ ಮತ್ತು ಗಂಗಾಧರ್ ಹೆಸರುಗಳು ಕೇಳಿಬರುತ್ತಿವೆ.

ಕನ್ನಡ ಚಿತ್ರ ನಿರ್ಮಾಪಕರೇನೋ ಬಿಬಿಎಂಪಿ ಚುನಾವಳತ್ತ ಮುಖ ಮಾಡಿದ್ದಾರೆ. ಆದರೆ ಕಾರ್ಪೊರೇಟರ್ ಗಳಾದ ರವೀಂದ್ರ ಮತ್ತು ಮುನಿರಾಜು ಚಿತ್ರ ನಿರ್ಮಾಣಕ್ಕೆ ಕೈಹಾಕಿದ್ದಾರೆ. ರವೀಂದ್ರ ಅವರು 'ಅಯ್ಯಂಗಾರ್ಐಪಿಎಸ್' ಚಿತ್ರವನ್ನು ನಿರ್ಮಿಸಿದ್ದರೆ, 'ಮಿನುಗು' ಚಿತ್ರವನ್ನು ಮುನಿರಾಜು ನಿರ್ಮಿಸುತ್ತಿದ್ದಾರೆ.

ಶಿವರಾಜ್ ಕುಮಾರ್ ನಾಯಕ ನಟನಾಗಿರುವ 'ಚೆಲುವೆಯೆ ನಿನ್ನ ನೋಡಲು' ಚಿತ್ರ ಎನ್ ಎಂ ಸುರೇಶ್ ನಿರ್ಮಿಸುತ್ತಿರುವ ಭಾರಿ ಬಜೆಟ್ ಚಿತ್ರ.ಮಲ್ಲೇಶ್ವರಂನ ವಾರ್ಡ್ ನಂ .7ರಿಂದ ಬಿಬಿಎಂಪಿ ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ಉಳಿದಂತೆ ಕೆ ಮಂಜು, ಸಂಪತ್ ಕುಮಾರ್ ಮತ್ತು ಗಂಗಾಧರ್ ಅಖಾಡಕ್ಕಿಳಿಯಲು ತೆರೆಮರೆಯಲ್ಲಿ ಕಸರತ್ತು ನಡೆಯುತ್ತಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada