»   » ಸಂತೂ, ಲೂಸ್ ಮಾದ ಇಬ್ಬರಿಗೂ 'ಅಲೆಮಾರಿ' ಜ್ವರ

ಸಂತೂ, ಲೂಸ್ ಮಾದ ಇಬ್ಬರಿಗೂ 'ಅಲೆಮಾರಿ' ಜ್ವರ

Posted By:
Subscribe to Filmibeat Kannada
Yogesh Radhika Pandit
ಲೂಸ್ ಮಾದ್ ಯೋಗೇಶ್ ಮತ್ತು ಹ್ಯಾಟ್ರಿಕ್ ಹಿರೋಯಿನ್ ರಾಧಿಕಾ ಪಂಡಿತ್ ಜೋಡಿಯ 'ಅಲೆಮಾರಿ' ಚಿತ್ರ ರಾಜ್ಯಾದ್ಯಂತ ನಾಳೆ ತೆರೆಗೆ ಅಪ್ಪಳಿಸಲು ಸಿದ್ಧವಾಗಿದೆ. ಈ ಮೊದಲು ಹುಡುಗರು ಚಿತ್ರದಲ್ಲಿ ಈ ಇಬ್ಬರೂ ನಟಿಸಿದ್ದರೂ ರಾಧಿಕಾ ಅಲ್ಲಿ ಪವರ್ ಸ್ಟಾರ್ ಪುನೀತ್ ಅವರಿಗೆ ಜೋಡಿಯಾಗಿದ್ದರೆ. ಆದರೆ ಆ ಚಿತ್ರದಲ್ಲಿ ಎಲ್ಲರಿಗಿಂತ ಹೆಚ್ಚು ಮಿಂಚಿದ್ದು ಯೋಗಿಯೇ. ಅದನ್ನು ಮೆಚ್ಚಿ ಸ್ವತಃ ನಿರ್ಮಾಪಕ ರಾಘವೇಂದ್ರ ರಾಜ್ ಕುಮಾರ್ ಯೋಗಿಗಿ ಶಹಬ್ಬಾಸ್ ಗಿರಿ ಕೊಟ್ಟಿದ್ದರು.

ಇಂಥ ಯೋಗಿ, ಸ್ಯಾಂಡಲ್ ವುಡ್ ರಮ್ಯಾ ಜೊತೆ ನಟಿಸಿದ್ದ ಚಿತ್ರ ಸಿದ್ಲಿಂಗು ಕೂಡ ಜನಮನ್ನಣೆ ಪಡೆದಿದೆ. ಬಾಕ್ಸ್ ಆಫೀಸ್ ನಲ್ಲಿ ಸದ್ದುಮಾಡಿದೆ. ಇದೀಗ ಯೋಗಿಯ ಅಲೆಮಾರಿ ಚಿತ್ರ ತೆರೆಕಾಣುತ್ತಿದೆ. ಸಹಜವಾಗಿಯೇ ಲೂಸ್ ಮಾದನ ಫ್ಯಾನ್ ಗಳಂತೂ ಅಲೆಮಾರಿಗಳಂತೇ ಚಿತ್ರಮಂದಿರವನ್ನೇ ಮನೆಮಾಡಿಕೊಳ್ಳಲು ಯೋಚಿಸಿದ್ದಾರಂತೆ. ಜೊತೆಯಲ್ಲಿ ರಾಧಿಕಾ ಪಂಡಿತ್ ಅಭಿಮಾನಿಗಳು ಬೇರೆ ಈ ಚಿತ್ರ ನೋಡಲು ಮುಗಿಬೀಳಲಿದ್ದಾರೆ.

ಸ್ಯಾಂಡಲ್ ವುಡ್ ನಲ್ಲಿ ಗಟ್ಟಿನೆಲೆ ಕಂಡುಕೊಳ್ಳಬೇಕಿರುವ ನಿರ್ದೇಶಕ ಸಂತೂ ಅವರು ಸಾಕಷ್ಟು ಹೋಮ್ ವರ್ಕ್ ಮಾಡಿ ಚಿತ್ರವನ್ನು ತೆರೆಗೆ ತಂದಿದ್ದಾರೆಂದು ಚಿತ್ರತಂಡ ಹೇಳಿದೆ. ಹಾಡುಗಳು ಜನರ ಮನೆಯನ್ನಲ್ಲದೇ ಮನಸ್ಸನ್ನೂ ತಲುಪಿದೆ. ಯೋಗಿ ಮತ್ತು ರಾಧಿಕಾಗೆ ಈ ಚಿತ್ರ ಇನ್ನೂ ಎತ್ತರಕ್ಕೆ ಬೆಳೆಯಲು ನೆರವಾದೀತೆ? ನಿರ್ದೇಶಕ ಸಂತೂ ಕನ್ನಡ ಚಿತ್ರರಂಗದಲ್ಲಿ ಯಶಸ್ವಿ ನಿರ್ದೇಶಕನ ಪಟ್ಟ ಗಿಟ್ಟಿಸುವರೇ ಎಂಬ ಪ್ರಶ್ನೆಗಳಿಗೆ ನಾಳೆ ಬಿಡುಗಡೆಯಾಗಲಿರುವ 'ಅಲೆಮಾರಿ' ಉತ್ತರ ಹೇಳಲಿದ್ದಾನೆ. (ಒನ್ ಇಂಡಿಯಾ ಕನ್ನಡ)

English summary
Kannada Movie Alemari releases on March 9, 2012 all over Karnataka. Radhika Pandit Yogesh Pair in this movie and Santhu Directed this. 
 

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X